ETV Bharat / bharat

30 ವರ್ಷದ ಯುವ ನ್ಯಾಯಾಧೀಶ ಆತ್ಮಹತ್ಯೆ: ಕಿರುಕಳವೇ ಕಾರಣ - ಕುಟುಂಬಸ್ಥರ ಆರೋಪ

ಯುವ ನ್ಯಾಯಾಧೀಶರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

DELHI JUDGE DIED
ಸಫ್ದರ್ಜಂಗ್‌ನಲ್ಲಿರುವ ಮೃತ ನ್ಯಾಯಾಧೀಶರ ನಿವಾಸ (PTI)
author img

By ETV Bharat Karnataka Team

Published : May 3, 2026 at 8:05 PM IST

2 Min Read
Choose ETV Bharat

ನವದೆಹಲಿ: 30 ವರ್ಷದ ಯುವ ನ್ಯಾಯಾಧೀಶರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸಫ್ದರ್ಜಂಗ್ ಪ್ರದೇಶದ ನಿವಾಸದಲ್ಲಿ ನಡೆದಿದೆ. ಅಮನ್ ಕುಮಾರ್ ಶರ್ಮಾ (30) ಮೃತ ನ್ಯಾಯಾಧೀಶ. ಅಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಅಮನ್ ಅವರ ಸೋದರಮಾವ ಶಿವಂ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸ್​ ತಂಡವು ಸ್ಥಳಕ್ಕೆ ಧಾವಿಸಿ ತನಿಖೆಯನ್ನು ಪ್ರಾರಂಭಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ " ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತ್ತೊಂದೆಡೆ, ಅಮನ್ ಕುಮಾರ್ ಶರ್ಮಾ ಮಾನಸಿಕ ಒತ್ತಡದಲ್ಲಿದ್ದರು ಮತ್ತು ಸಾವಿಗೂ ಕೆಲವು ದಿನಗಳ ಹಿಂದೆ ಆತನಿಗೆ ಕಿರುಕುಳ ನೀಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತನ ಸಂಬಂಧಿ ರಾಜೇಶ್ ಶರ್ಮಾ ಮಾತನಾಡಿ, "ಅಮನ್ ಕುಮಾರ್ ಶರ್ಮಾ ತನ್ನ ತಂದೆ ಪ್ರೇಮ್‌ ಶರ್ಮಾ ಅವರ ಬಳಿ 'ನಾನು ತುಂಬಾ ತೊಂದರೆಗೀಡಾಗಿದ್ದೇನೆ ಮತ್ತು ನಾನು ಬದುಕುವುದೇ ಕಷ್ಟಕರವಾಗಿದೆ. ಎರಡು ತಿಂಗಳಿನಿಂದ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದ ಎಂದು ತಿಳಿಸಿದರು.

ಪ್ರೇಮ್ ಶರ್ಮಾ ಅಲ್ವಾರ್‌ನಿಂದ ಮಧ್ಯರಾತ್ರಿಯ ಸುಮಾರಿಗೆ ಸಫ್ದರ್ಜಂಗ್ ನಿವಾಸ ತಲುಪಿದರು. ಅಮನ್ ನ್ಯಾಯಾಂಗ ಅಧಿಕಾರಿಯಾಗಿರುವ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾನೆ ಎಂದು ಪ್ರೇಮ್‌ ಅವರಿಗೆ ತಿಳಿಸಲಾಯಿತು. ಅಮನ್ ಪತ್ನಿಯ ಸಹೋದರಿ ಜಮ್ಮುವಿನಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.

ರಾತ್ರಿಯಿಡೀ ದಂಪತಿಗಳು ಜಗಳವಾಡುತ್ತಿದ್ದರು. ಅಮನ್​ ಪತ್ನಿ ತುಂಬಾ ಕೋಪಗೊಂಡು ಕೂಗುತ್ತಿದ್ದರು, ಆದರೆ ಅಮನ್ ಅಳುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಎಲ್ಲವೂ ನಿಶ್ಯಬ್ಧವಾಯಿತು. ನಂತರ ಪ್ರೇಮ್ ಶರ್ಮಾ ತಮ್ಮ ಮಗನನ್ನು ನೋಡಲು ಮುಂದಾದಾಗ, ಆತ ಕೋಣೆಯಲ್ಲಿ ಇರಲಿಲ್ಲ. ಅವರು ಅಮನ್ ಫೋನ್‌ಗೆ ಕರೆ ಮಾಡಿದಾಗ ಸ್ನಾನಗೃಹದ ಒಳಗಿನಿಂದ ರಿಂಗ್‌ಟೋನ್ ಬಂದಿತು. ಪದೇ ಪದೇ ಕೋಣೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ತಿಳಿಸಿದರು.

ನಂತರ ನೆರೆಹೊರೆಯವರಿಗೆ ಮಾಹಿತಿ ನೀಡಲಾಯಿತು. ಹಿಂಭಾಗದ ಕಿಟಕಿಯ ಮೂಲಕ ಒಳಗೆ ನೋಡಿದಾಗ ಅಮನ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡರು. ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದರು.

ಅಧಿಕೃತ ದಾಖಲೆಗಳ ಪ್ರಕಾರ, ಶರ್ಮಾ ಜೂನ್ 19, 2021 ರಂದು ದೆಹಲಿ ನ್ಯಾಯಾಂಗ ಸೇವೆಗಳಿಗೆ ಸೇರಿದರು. ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಪದವೀಧರರಾಗಿರುವ ಅವರು, ಅಕ್ಟೋಬರ್ 2025 ರಿಂದ ಈಶಾನ್ಯ ಜಿಲ್ಲೆಯ ಕಾರ್ಕಾರ್ಡೂಮಾ ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪೂರ್ಣ ಸಮಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ: