ETV Bharat / bharat

ಜಾತಿ ಕಾರಣಕ್ಕೆ ಮದುವೆಯಾಗಲು ನಿರಾಕರಣೆ; ಮನನೊಂದು ಕಿರಿಯ ವೈದ್ಯೆ ಆತ್ಮಹತ್ಯೆ

ಸಂತ್ರಸ್ತೆ ದಲಿತ ಕುಟುಂಬಕ್ಕೆ ಸೇರಿದ್ದು, ಓದಿನಲ್ಲಿ ಮುಂದಿದ್ದರು. ಸಮಾಜ ಕಲ್ಯಾಣ ಇಲಾಖೆಯ ಶಾಲೆಯಲ್ಲಿ ಅಧ್ಯಯನ ಮಾಡಿ, 2020ರಲ್ಲಿ ಹೆದರಾಬಾದ್‌ನ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣಕ್ಕೆ ದಾಖಲಾಗಿದ್ದರು.

dalit-house-surgeon-dies-by-suicide-after-colleague-refuses-to-marry-over-caste-difference
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : January 6, 2026 at 12:47 PM IST

2 Min Read
Choose ETV Bharat

ಹೈದರಾಬಾದ್(ತೆಲಂಗಾಣ): ಮದುವೆಯಾಗುವುದಾಗಿ ಭರವಸೆ ನೀಡಿ, ಬಳಿಕ ಜಾತಿ ವಿಚಾರವಾಗಿ ಹಿರಿಯ ವೈದ್ಯನಿಂದ ವಂಚನೆಗೊಳಗಾದ ಕಾರಣ ಇಲ್ಲಿನ ಸಿದ್ದಿಪೇಟೆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ದಲಿತ ಹೌಸ್​ ಸರ್ಜನ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆ ವಿಚಾರದಲ್ಲಿನ ಜಾತಿ ತಾರತಮ್ಯದಿಂದಾಗಿ ಕಿರಿಯ ವೈದ್ಯೆ ನೊಂದು ಜನವರಿ 3ರಂದು ಕಾಲೇಜು ಹಾಸ್ಟೆಲ್‌ನಲ್ಲಿ ಕಳೆನಾಶಕ ಚುಚ್ಚುಮದ್ದು ಹಾಕಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ರೂಮ್‌ಮೇಟ್‌ಗಳು ಸಿದ್ದಿಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಜ.4ರ ಮುಂಜಾನೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್ಎಸ್ ಮತ್ತು ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ವೈದ್ಯೆ ಜೋಗುಳಾಂಬ-ಗಡ್ವಾಲ್ ಜಿಲ್ಲೆಯ ಬಡ ಕುಟುಂಬಕ್ಕೆ ಸೇರಿದ್ದು, ಸಮಾಜ ಕಲ್ಯಾಣ ಶಾಲೆಯಲ್ಲಿ ಅಧ್ಯಯನ ಮಾಡಿ, 2020ರಲ್ಲಿ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೇರಿದ್ದರು. ಶೈಕ್ಷಣಿಕ, ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದರು. ಪೋಷಕರು ಕೂಲಿ ಕೆಲಸ ಮಾಡುತ್ತಿದ್ದು, ಸಹೋದರಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.

ಮೃತ ವೈದ್ಯೆ ಸಿದ್ದಿಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ಹಿರಿಯ ವೈದ್ಯನಾಗಿದ್ದ ಆರೋಪಿಯೊಂದಿಗೆ ಪರಿಚಯವಾಗಿತ್ತು. ಆರೋಪಿ ಕಿರಿಯ ವೈದ್ಯೆಗೆ ಮದುವೆಯಾಗುವ ಭರವಸೆ ನೀಡಿದ್ದರು. ಆದರೆ, ಹಿಂದುಳಿದ ವರ್ಗಕ್ಕೆ ಸೇರಿದ ವೈದ್ಯೆಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ದೂರ ಮಾಡಿದ್ದ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ವಾಮಾಚಾರಕ್ಕೆ 10 ವರ್ಷದ ಬಾಲಕಿ ಬಲಿ ಶಂಕೆ(ಪ್ರತ್ಯೇಕ ಪ್ರಕರಣ): ಹೊಸ ವರ್ಷದಂದು ನಾಪತ್ತೆಯಾಗಿದ್ದ 10 ವರ್ಷದ ಬಾಲಕಿ ಜ.4ರಂದು ಛತ್ತೀಸ್‌ಗಢದ ಸೋನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ಸಾವು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಇದು ವಾಮಾಚಾರಕ್ಕಾಗಿ ನಡೆದ ಕೃತ್ಯ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಬಾಲಕಿಗಾಗಿ ನಿರಂತರ ಹುಡುಕಾಟ ನಡೆಸಿ ಕಡೆಗೆ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಬಾಲಕಿ ಕೊಲೆಯಾಗಿ ಪತ್ತೆಯಾಗಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಾಥಮಿಕ ಪರಿಶೀಲನೆಯ ನಂತರ ಪೊಲೀಸರು ಕೊಲೆ ಎಂದು ಶಂಕಿಸಿದ್ದಾರೆ. ಬಾಲಕಿಯ ಕುಟುಂಬ ಮತ್ತು ಗ್ರಾಮಸ್ಥರ ಆರೋಪಗಳ ಆಧಾರದ ಮೇಲೆ ಪೊಲೀಸರು ಸ್ಥಳೀಯ ಯುವಕನನ್ನು ಬಂಧಿಸಿದ್ದಾರೆ.

ಇವುಗಳನ್ನೂ ಓದಿ: