ETV Bharat / bharat

ಜಂತರ್​ ಮಂತರ್​ನಲ್ಲಿ ಶಾಂತಿಯುತ ಪ್ರತಿಭಟನೆಗೆ ಸಿಜೆಪಿ ಪಟ್ಟು: ದೆಹಲಿ ಪೊಲೀಸರಿಗೆ 24 ಗಂಟೆ ಡೆಡ್​ಲೈನ್!

ದೆಹಲಿ ಪೊಲೀಸರು 24 ಗಂಟೆಯೊಳಗೆ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಬೇಕು. ಇಲ್ಲದಿದ್ದರೆ ಪಕ್ಷವು ಮತ್ತೊಂದು ಪ್ರತಿಭಟನೆಯನ್ನು ಘೋಷಿಸಲಿದೆ ಎಂದು ಸಿಜೆಪಿ ತಿಳಿಸಿದೆ.

CJP to seek permission for fresh peaceful protest at Jantar Mantar, sets 24-hour deadline
ಸಿಜೆಪಿ ನಾಯಕರು (ANI)
author img

By ANI

Published : October 12, 2026 at 11:49 AM IST

2 Min Read
Choose ETV Bharat

ನವದೆಹಲಿ: ಕಾಕ್ರೋಚ್​ ಜನತಾ ಪಕ್ಷ ಹೊಸದಾಗಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದು, ಈ ಕುರಿತು ದೆಹಲಿ ಪೊಲೀಸರಿಗೆ ಅನುಮತಿ ಕೋರಲು ಮುಂದಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಸಿಜೆಪಿ, ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ರತ್ನಾ ಸಿಂಗ್ ಅವರು ಜಂತರ್ ಮಂತರ್‌ನಲ್ಲಿ ಹೊಸದಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರಲು ಸೋಮವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದಾರೆ. ದೆಹಲಿ ಪೊಲೀಸರು 24 ಗಂಟೆಯೊಳಗೆ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ದಿನಾಂಕವನ್ನು ನಿಗದಿಪಡಿಸಬೇಕು. ಇಲ್ಲದಿದ್ದರೆ ಪಕ್ಷವು ಮತ್ತೊಂದು ಪ್ರತಿಭಟನೆಯನ್ನು ಘೋಷಿಸಲಿದೆ ಎಂದಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಭಟನೆಗಳನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ನಿನ್ನೆ ಪುನರುಚ್ಚರಿಸಿದ್ದರು. ವೈಯಕ್ತಿಕ ನೋವು ಹಾಗೂ ರಾಜಕೀಯ ಒತ್ತಡಗಳು ತಮ್ಮ ಚಳವಳಿಯನ್ನು ತಡೆಯಲಾರವು ಎಂದು ತಿಳಿಸಿದ್ದರು.

ಹೋರಾಟಗಾರರು ಮತ್ತೆ ಬೀದಿಗಿಳಿಯಲಿದ್ದಾರೆ. ಪ್ರತಿಭಟನೆ ಮುಂದುವರಿಯಲಿದೆ. ನಾವು ಪ್ರತಿಭಟಿಸುವುದಿಲ್ಲ ಎಂದು ಹೇಳುವ ಯಾವುದೇ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿಲ್ಲ. ನಾವು ಮತ್ತೆ ಬೀದಿಗಿಳಿಯುತ್ತೇವೆ ಎಂದು ದೀಪ್ಕೆ ಹೇಳಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಗೂ ಮುನ್ನವೇ ಶನಿವಾರ ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು.

ತಮ್ಮ ಕಕ್ಷಿದಾರರ ಬಿಡುಗಡೆಯ ಷರತ್ತಿನ ಭಾಗವಾಗಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಆ ಮೂವರು ನಾಯಕರಿಗೆ ಸೂಚಿಸಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಶನಿವಾರ ಕಾಕ್ರೋಚ್​ ಜನತಾ ಪಾರ್ಟಿ ಜಂತರ್​ ಮಂತರ್​ನಲ್ಲಿ ಕರೆ ನೀಡಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿಸಿರಲಿಲ್ಲ. ಪ್ರತಿಭಟನೆಗೆ ಆಗಮಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರತಿಭಟನೆಗಾಗಿ ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಬಂದಿಳಿದ ಅಭಿಜೀತ್​ ದೀಪ್ಕೆಯನ್ನು ಪೊಲೀಸರು ವಿಮಾನದಲ್ಲೇ ವಶಕ್ಕೆ ಪಡೆದಿದ್ದರು.

ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಇಂದು ಮುಖ್ಯ ಚುನಾವಣಾ ಅಧಿಕಾರಿಯ ರಾಜೀನಾಮೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಇಂಡಿಯಾ ಒಕ್ಕೂಟ ಮುಂದಾಗಿದ್ದು, ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ದೇಶಾದ್ಯಂತದ ನಾಗರಿಕರಿಗೆ ಕರೆ ನೀಡಿದೆ.

ಇವುಗಳನ್ನೂ ಓದಿ: