ETV Bharat / bharat

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಭಾನುವಾರ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದರು.

CJI OFFERS PRAYERS AT TIRUPATI
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (EENADU)
author img

By PTI

Published : March 1, 2026 at 3:40 PM IST

2 Min Read
Choose ETV Bharat

ತಿರುಮಲ(ಆಂಧ್ರ ಪ್ರದೇಶ): ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಭಾನುವಾರ ಇಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಸಿಜೆಐ ಅವರನ್ನು 'ಮಹಾದ್ವಾರ'ದಲ್ಲಿ ಸಾಂಪ್ರದಾಯಿಕ ಗೌರವ ಮತ್ತು ವೇದ ಮಂತ್ರಗಳೊಂದಿಗೆ ಸ್ವಾಗತಿಸಿದರು.

ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ಸೂರ್ಯ ಕಾಂತ್ ಅವರು ಮೊದಲ ಬಾರಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು ಎಂದು ಟಿಟಿಡಿ ಮುಖ್ಯ ಜಾಗೃತ ಮತ್ತು ಭದ್ರತಾ ಅಧಿಕಾರಿ (ಸಿವಿಎಸ್ಒ) ಮುರಳಿ ಕೃಷ್ಣ ತಿಳಿಸಿದರು.

ದರ್ಶನದ ನಂತರ ಸಿಜೆಐ ಅವರಿಗೆ ರಂಗನಾಯಕಕುಲ ಮಂಟಪದಲ್ಲಿ ರೇಷ್ಮೆ ವಸ್ತ್ರಗಳನ್ನು, ತೀರ್ಥ ಪ್ರಸಾದ ನೀಡಲಾಯಿತು. ಶನಿವಾರ ತಡರಾತ್ರಿ ತಿರುಮಲಕ್ಕೆ ಆಗಮಿಸಿದ್ದ ಸಿಜೆಐ ಸೂರ್ಯ ಕಾಂತ್ ಅವರು ದೇವಾಲಯದ ಪದ್ಧತಿಯ ಪ್ರಕಾರ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿದರು.

ಬಳಿಕ ತಿರುಪತಿಯಲ್ಲಿ ನ್ಯಾಯಾಲಯ ಕಟ್ಟಡ ಸಂಕೀರ್ಣಕ್ಕೆ ನ್ಯಾ. ಸೂರ್ಯ ಕಾಂತ್ ಶಿಲಾನ್ಯಾಸ ನೆರವೇರಿಸಿದರು.

ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಆರೋಗ್ಯವಾಗಿ ಮನೆಗೆ ಮರಳುವಂತೆ, ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಿದ ಕಕ್ಷಿದಾರರು ನ್ಯಾಯದೊಂದಿಗೆ ಹಿಂತಿರುಗಬೇಕು. ತಿರುಪತಿಯಲ್ಲಿ ನ್ಯಾಯಾಲಯ ಕಟ್ಟಡ ಸಂಕೀರ್ಣಕ್ಕೆ ಶಿಲಾನ್ಯಾಸ ಸಮಾರಂಭ ಶುಭ ಸೂಚನೆ. ನ್ಯಾಯಾಂಗ ಬಲಗೊಳ್ಳುತ್ತಿದೆ. ಹೊಸ ವಕೀಲರು ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯ ಪಡೆಯಲು ಜನರು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತುತ್ತಾರೆ. ವಕೀಲರು ಸರಿಯಾಗಿ ಯೋಚಿಸಿದರೆ ಮಾತ್ರ ಅವರಿಗೆ ಸರಿಯಾದ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು.

ಆರೋಗ್ಯ ಸಮಸ್ಯೆ ಬಂದಾಗ, ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆಯೊಂದಿಗೆ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರು ನೀಡುವ ಭರವಸೆಯಿಂದ ಅವರು ಗುಣಮುಖರಾಗುತ್ತಾರೆ ಎಂದು ನಂಬುತ್ತಾರೆ. ನ್ಯಾಯಾಲಯಕ್ಕೆ ಬಂದಾಗ, ನ್ಯಾಯ ಖಂಡಿತವಾಗಿಯೂ ಸಿಗುತ್ತದೆ ಎಂಬ ವಿಶ್ವಾಸ ನಮಗಿರಬೇಕು. ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದು ಹೇಳಿದರು.

ತಿರುಪತಿಯಲ್ಲಿ ನ್ಯಾಯಾಲಯ ಕಟ್ಟಡಗಳಿಗೆ ನಾವು ಅಡಿಪಾಯ ಹಾಕಿದ್ದೇವೆ. ಅನೇಕ ಜನರು ತಿರುಪತಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬರುತ್ತಾರೆ. ನ್ಯಾಯಕ್ಕಾಗಿ ಬರುವವರು ಸಂಪೂರ್ಣ ವಿಶ್ವಾಸ ಹೊಂದಿದಾಗ ಮಾತ್ರ ತೃಪ್ತರಾಗುತ್ತಾರೆ. ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಹೊಸ ಕಟ್ಟಡವು ಜನರಿಗೆ ಮತ್ತೊಂದು ದೇವಾಲಯವಾಗಬೇಕು ಎಂದು ಸಿಜೆಐ ನ್ಯಾಯಮೂರ್ತಿ ಸೂರ್ಯ ಕಾಂತ್ ಆಶಿಸಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಮಾತನಾಡಿ, ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಮ್ಮೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಬಂದಾಗ ನೀರು ನ್ಯಾಯಾಲಯದ ಕಟ್ಟಡಕ್ಕೆ ನುಗ್ಗಿತ್ತು. ಇಡೀ ಸಿಬ್ಬಂದಿ ತಾತ್ಕಾಲಿಕ ಶೆಡ್​ ನಿರ್ಮಿಸಿ ಕರ್ತವ್ಯ ನಿರ್ವಹಿಸಿದ್ದರು ಎಂಬುದನ್ನು ಅವರು ನೆನಪಿಸಿದರು.

ಇವುಗಳನ್ನೂ ಓದಿ: