ಕೇರಳಂಗೆ ಭೇಟಿ ನೀಡಿದ ಕ್ರಿಸ್ ಗೇಲ್: ಉಮ್ಮನ್ ಚಾಂಡಿ ಸಮಾಧಿಗೆ ಪುಷ್ಪ ನಮನ
ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರು ಇಂದು ಕೇರಳಂಗೆ ಭೇಟಿ ನೀಡಿದರು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

Published : August 30, 2026 at 7:36 PM IST
ಕೊಟ್ಟಾಯಂ(ಕೇರಳಂ): ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ, ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಭಾನುವಾರ ಕೇರಳಂಗೆ ಭೇಟಿ ನೀಡಿದರು. ಪುದುಪಳ್ಳಿಯಲ್ಲಿರುವ ಕೇರಳಂನ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.
ಗೇಲ್ ಅವರು ತಿರುವನಂತಪುರಂನಿಂದ ಹೆಲಿಕಾಪ್ಟರ್ ಮೂಲಕ ಕೊಟ್ಟಾಯಂಗೆ ಮಧ್ಯಾಹ್ನ 12.25 ರ ಸುಮಾರಿಗೆ ಆಗಮಿಸಿ ಅಲ್ಲಿಂದ ಪುದುಪಳ್ಳಿಗೆ ಬಂದಿಳಿದರು. ಪುದುಪಳ್ಳಿ ಶಾಸಕ ಹಾಗು ಮಾಜಿ ಸಿಎಂ ಪುತ್ರ ಚಾಂಡಿ ಉಮ್ಮನ್, ಅವರ ಸಹೋದರಿ ಮರಿಯಾ ಉಮ್ಮನ್ ಮತ್ತು ಪುದುಪಳ್ಳಿ ಪಂಚಾಯತ್ ಪ್ರತಿನಿಧಿಗಳು ಗೇಲ್ ಅವರನ್ನು ಬರಮಾಡಿಕೊಂಡರು.
#WATCH | Kottayam, Kerala: Former West Indies cricketer Chris Gayle visited late Oommen Chandy’s grave in Puthuppally and paid homage. pic.twitter.com/55qgQzn8D4
— ANI (@ANI) August 30, 2026
ಚಾಂಡಿ ಉಮ್ಮನ್ ಅವರು ತಾವೇ ವಾಹನ ಚಲಾಯಿಸಿಕೊಂಡು ಮಾಜಿ ಕ್ರಿಕೆಟಿಗನನ್ನು ಪುತುಪಲ್ಲಿ ಚರ್ಚ್‌ಗೆ ಕರೆದುಕೊಂಡು ಬಂದರು. ಈ ವೇಳೆ, ಕ್ರಿಸ್ ಗೇಲ್ ಅವರು ಅಲ್ಲಿದ್ದ ಉಮ್ಮನ್ ಚಾಂಡಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ನಂತರ, ಪುದುಪಳ್ಳಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಸಾಂಸ್ಕೃತಿಕ ಕೇಂದ್ರದ ನಿರ್ಮಾಣ ಕುರಿತು ನಡೆದ ಕಾರ್ಯಕ್ರಮದಲ್ಲಿ ಕ್ರಿಸ್ ಗೇಲ್ ಭಾಗವಹಿಸಿದ್ದರು. ಕೇರಳ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರು ಹಾಜರಿದ್ದರು.
ಇವುಗಳನ್ನೂ ಓದಿ:

