ETV Bharat / bharat

ಒಡಿಶಾದ ರೂರ್ಕೆಲಾ ಬಳಿ ಚಾರ್ಟರ್​ ವಿಮಾನ ಅಪಘಾತ: ಪೈಲಟ್​ ಸೇರಿದಂತೆ 6 ಮಂದಿಗೆ ಗಾಯ

ಲ್ಯಾಂಡಿಂಗ್‌ ವೇಳೆ ಉಂಟಾದ ತಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

charter-aircraft-crashes-near-rourkela-airstrip-in-odisha-all-passengers-safe
ಚಾರ್ಟರ್​ ವಿಮಾನ ಅಪಘಾತ (ETV Bharat)
author img

By ETV Bharat Karnataka Team

Published : January 10, 2026 at 3:55 PM IST

2 Min Read
Choose ETV Bharat

ಭುವನೇಶ್ವರ (ಒಡಿಶಾ): ಒಡಿಶಾದ ರೂರ್ಕೆಲಾ ವಾಯುನೆಲೆಯ ಬಳಿಯ ಜಗದಾ ಬ್ಲಾಕ್ ಬಳಿ ಶನಿವಾರ ಚಾರ್ಟರ್​ ವಿಮಾನವೊಂದು ಅಪಘಾತಗೊಂಡಿದ್ದು, ಪೈಲಟ್​ ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಅಪಫಾತವಾಗಿರುವ ಶಂಕೆ: ಪ್ರಾಥಮಿಕ ಮಾಹಿತಿಯ ಪ್ರಕಾರ, ಕನಿಷ್ಠ ನಾಲ್ಕು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ ವಿಮಾನವು ಭುವನೇಶ್ವರಕ್ಕೆ ಹೊರಟಿದ್ದಾಗ ಅಪಘಾತಕ್ಕೀಡಾಗಿದೆ. ವಿಮಾನ ಹಾರಾಟದ ಏರ್​​​ಸ್ಟ್ರಿಪ್​​ (ರನ್​ವೇ)ಯಿಂದ 9 ಕಿ.ಮೀ ದೂರದಲ್ಲಿ ಈ ಅಪಘಾತದ ಸಂಭವಿಸಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ನಿಖರವಾಗಿ ಪತ್ತೆಯಾಗಿಲ್ಲ. ತಾಂತ್ರಿಕ ಕಾರಣದಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Chartered aircraft crash lands near Rourkela, all passengers safe
ಅಪಘಾತದ ನಂತರ ವಿಮಾನದಿಂದ ತೈಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ. (ETV Bharat)

ಇಬ್ಬರು ಪೈಲಟ್​ಗಳು, ನಾಲ್ವರು ಪ್ರಯಾಣಿಕರಿದ್ದ ವಿಮಾನ: ವಿಮಾನವೂ ಭುವೇಶ್ವರದಿಂದ ರೊರ್ಕೆಲಾಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಇಬ್ಬರು ಪೈಲಟ್​ ಮತ್ತು ನಾಲ್ವರು ಪ್ರಯಾಣಿಕರಿದ್ದರು. ಭುವೇಶ್ವರ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ವಿಮಾನ ರೊರ್ಕೆಲಾ ವಿಮಾನದಲ್ಲಿ ಲ್ಯಾಂಡಿಂಗ್​ ಆಗಬೇಕಿತ್ತು. ಆದರೆ, ಇದಕ್ಕೆ ಮೊದಲು ಈ ಅಪಘಾತ ಸಂಭವಿಸಿದೆ.

ಕ್ಯಾಪ್ಟನ್ ನವೀನ್ ಕಡಂಗ, ಸಹ ಪೈಲಟ್ ತರುಣ್ ಶ್ರೀವಾಸ್ತವ್ ಮತ್ತು ಪ್ರಯಾಣಿಕರಾದ ಸುಶಾಂತ್ ಕುಮಾರ್ ಬಿವಾಲ್, ಅನಿತಾ ಸಾಹು, ಸುನಿಲ್ ಅಗರ್ವಾಲ್, ಸಬಿತಾ ಅಗರ್ವಾರ್ಲ್ ಚಾರ್ಟರ್ ವಿಮಾನದಲ್ಲಿದ್ದರು. ವರದಿಗಳ ಪ್ರಕಾರ, ಒಂಬತ್ತು ಆಸನಗಳ ಚಾರ್ಲಿ -208 ವಿಮಾನವು ತುರ್ತು ಅಪಘಾತಕ್ಕೀಡಾಯಿತು. ಘಟನೆಯಲ್ಲಿ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಭುವನೇಶ್ವರ ವಿಮಾನ ನಿಲ್ದಾಣದ ನಿರ್ದೇಶಕ ಪ್ರಸನ್ನ ಪ್ರಧಾನ್ ದೃಢಪಡಿಸಿದ್ದಾರೆ.

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಪಘಾತದ ಲ್ಯಾಂಡಿಂಗ್‌ ವೇಳೆ ಉಂಟಾದ ತಾಂತ್ರಿಕ ವೈಫಲ್ಯ ಕಾರಣ ಎಂದು ಶಂಕಿಸಲಾಗಿದೆ. ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿವರವಾದ ತನಿಖೆ ನಡೆಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಬಿಭೂತಿ ಜೇನಾ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆಡಳಿತವು ಸ್ಪಷ್ಟಪಡಿಸಿದೆ. ಆದರೆ ಪೈಲಟ್ ಲ್ಯಾಂಡಿಂಗ್ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಈ ವೇಳೆ ಅವರ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಮಾನದಲ್ಲಿನ ಯಾಂತ್ರಿಕ ವೈಫಲ್ಯದ ಕಾರಣವನ್ನು ಕಂಡುಹಿಡಿಯಲು ವಿವರವಾದ ತನಿಖೆ ಪ್ರಾರಂಭಿಸಲಾಗಿದೆ. ವಿಮಾನ ಸುರಕ್ಷತಾ ಅಧಿಕಾರಿಗಳು ವಿಮಾನದ ಅವಶೇಷಗಳನ್ನು ಪರಿಶೀಲಿಸುತ್ತಾರೆ ಮತ್ತು ಹಾರಾಟದ ಡೇಟಾವನ್ನು ವಿಶ್ಲೇಷಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ನಂತರ ರೂರ್ಕೆಲಾ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯದವರೆಗೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೆ ಸಾಮಾನ್ಯ ವಿಮಾನ ಸೇವೆಗಳಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಹೇಳಲಾಗಿದೆ. ಜಿಲ್ಲಾಡಳಿತ ಮತ್ತು ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಪೈಲಟ್‌ ತ್ವರಿತ ನಿರ್ಧಾರಗಳು ಮತ್ತು ಅರಿವು ಹೇಗೆ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.

ಇವುಗಳನ್ನೂ ಓದಿ:

ಭಾರತದಲ್ಲಿನ 338 ಏರ್​ಬಸ್​ ಎ320 ವರ್ಗದ ವಿಮಾನಗಳಲ್ಲಿ ಸಾಫ್ಟ್​ವೇರ್​ ಅಪ್​ಡೇಟ್ ಪೂರ್ಣ​: ಡಿಜಿಸಿಎ

ಹೈ - ಟೆನ್ಷನ್​​ ಲೈನ್​​ಗೆ ಡಿಕ್ಕಿ ಹೊಡೆದ ತರಬೇತಿ ವಿಮಾನ: ಪೈಲಟ್​, ತರಬೇತುದಾರನಿಗೆ ಗಾಯ, ಪ್ರಾಣಾಪಾಯದಿಂದ ಪಾರು!