OSM ವಿವಾದ; ಸಿಬಿಎಸ್ಇ ಚೇರ್ಮನ್, ಕಾರ್ಯದರ್ಶಿ ವರ್ಗಾವಣೆ
ಸಿಬಿಎಸ್ಇ ಆನ್ ಸ್ಕ್ರೀನ್ ಮಾರ್ಕಿಂಗ್ ವಿವಾದ ತೀವ್ರ ಚರ್ಚೆ ಆಗುತ್ತಿರುವ ಮಧ್ಯೆ ಸಿಬಿಎಸ್ಇ ಚೇರ್ಮನ್ ಮತ್ತು ಕಾರ್ಯದರ್ಶಿ ಅವರನ್ನು ಗರ್ವಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Published : June 2, 2026 at 7:13 PM IST
ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ನಡೆಸುತ್ತಿರುವ ಆನ್ ಸ್ಕ್ರೀನ್ ಮಾರ್ಕಿಂಗ್(OSM) ವ್ಯವಸ್ಥೆ ಬಗ್ಗೆ ವಿವಾದ ಭುಗಿಲೆದ್ದಿದೆ. ಈ ನಡುವೆ ಮಂಗಳವಾರ (ಜೂ.2) ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಿಬಿಎಸ್ಇ ಚೇರ್ಮನ್ ಮತ್ತು ಕಾರ್ಯದರ್ಶಿ ಅವರನ್ನು ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಏಕಸದಸ್ಯ ತನಿಖಾ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿರುವ ಬಗ್ಗೆ ಕೇಂದ್ರ ಸರ್ಕಾರದ (ಸಂಪುಟ) ಹೆಚ್ಚುವರಿ ಕಾರ್ಯದರ್ಶಿ ಸತೇಂದ್ರ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಚೇರ್ಮನ್ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಈ ಒಎಸ್ಎಂ ವ್ಯವಸ್ಥೆಯ ಖರೀದಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಬಗ್ಗೆ ವ್ಯಕ್ತವಾಗಿರುವ ವಿವಾದ ಮತ್ತು ಕೇಳಿಬಂದಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಏಕ ಸದಸ್ಯ ಸಮಿತಿಯನ್ನು ನೇಮಿಸಿರುವ ಬಗ್ಗೆ ಮಾಧ್ಯಮ ಪ್ರಕರಟಣೆಯಲ್ಲಿ ವಿವರಿಸಲಾಗಿದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ಸತೇಂದ್ರ ಸಿಂಗ್ ಅವರು ಇಂದು ಈ ಮಹತ್ವದ ಆದೇಶ ಹೊರಡಿಸಿದ್ದು, ಎಸ್. ರಾಧಾ ಚೌಹಾಣ್ ಅವರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ. OSM ಸಿಬಿಎಸ್ಇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆಯಾಗಿದೆ. ಈ ಬಗ್ಗೆ ಕಮಿಟಿ ಸಮಗ್ರ ತನಿಖೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.
ಈ ಆದೇಶದ ಪ್ರಕಾರ, ಅಗತ್ಯವಿದ್ದರೆ ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಸಹಾಯ ಪಡೆಯಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಸಾಮರ್ಥ್ಯ ಸುಧಾರಣಾ ಆಯೋಗವು ಈ ಸಮಿತಿಗೆ ಆಡಳಿತಾಧಿಕಾರಿಯ ಬೆಂಬಲವನ್ನು ನೀಡಲಿದ್ದು, ಒಂದು ತಿಂಗಳೊಳಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ತನ್ನ ವಿವರಣಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಏನಿದು ವಿವಾದ: ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶಗಳ ಘೋಷಣೆಯ ನಂತರ ಸಿಬಿಎಸ್‌ಇಯ ಮೌಲ್ಯಮಾಪನ ಮತ್ತು ಫಲಿತಾಂಶದ ಬಳಿಕ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒಎಸ್ಎಂ ತೀವ್ರ ಆತಂಕ ವ್ಯಕ್ತವಾಗಿದೆ. ಅಲ್ಲದೆ, ಹಲವು ಆರೋಪಗಳು ಕೇಳಿಬಂದಿವೆ. ಹಲವಾರು ವಿದ್ಯಾರ್ಥಿಗಳು ಮಂಡಳಿಯ ಆನ್‌ಲೈನ್ ಸೇವೆಗಳನ್ನು ಬಳಸುವಾಗ ಮಸುಕಾದ ಚಿತ್ರಗಳು, ಪುಟಗಳು ಕಾಣೆ ಆಗಿರುವುದು ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳನ್ನು ಎದುರಿಸಿದ ಬಗ್ಗೆ ಹೇಳಿಕೊಂಡಿದ್ದರು.
ಇವುಗಳನ್ನು ಓದಿ:

