ETV Bharat / bharat

ನಾಳೆಯಿಂದ ಕೆನಡಾ ಪ್ರಧಾನಿ ಕಾರ್ನಿ 4 ದಿನಗಳ ಭಾರತ ಪ್ರವಾಸ

ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

Canadian PM Mark Carney To Visit India From Tomorrow
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (AP)
author img

By ETV Bharat Karnataka Team

Published : February 26, 2026 at 5:14 PM IST

1 Min Read
Choose ETV Bharat

ನವದೆಹಲಿ: ಕೆನಡಾ ದೇಶದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಶುಕ್ರವಾರದಿಂದ ನಾಲ್ಕು ದಿನಗಳ ಭಾರತ ಭೇಟಿ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಸ್ಟಿನ್ ಟ್ರುಡೊ ನಂತರ ಅಧಿಕಾರ ವಹಿಸಿಕೊಂಡ ಕಾರ್ನಿ ಅವರ ಮೊದಲ ಭಾರತ ಭೇಟಿ ಇದಾಗಿದೆ. ಈ ಭೇಟಿ ಕೆನಡಾ-ಭಾರತ ಸಂಬಂಧವನ್ನು ಉನ್ನತೀಕರಿಸುವ ಮತ್ತು ವಿಸ್ತರಿಸುವ ಭಾಗವಾಗಲಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಮುಂಬೈಗೆ ಆಗಮಿಸಲಿರುವ ಕಾರ್ನಿ, ಮುಂದಿನ ಎರಡು ದಿನಗಳ ಕಾಲ ವ್ಯಾಪಾರ-ವ್ಯವಹಾರಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಭೇಟಿಯ ಭಾಗವಾಗಿ ಭಾರತ ಮತ್ತು ಕೆನಡಾದ ಸಿಇಒಗಳು, ಉದ್ಯಮ ಮತ್ತು ಹಣಕಾಸು ತಜ್ಞರು, ನವೋದ್ಯಮಿಗಳು, ಶಿಕ್ಷಣ ತಜ್ಞರೊಂದಿಗೆ ಸಂವಹನ ನಡೆಸಲಿದ್ದಾರೆ. ಮಾರ್ಚ್ 1ರಂದು ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಮಾರ್ಚ್ 2ರಂದು ಹೈದರಾಬಾದ್ ಹೌಸ್‌ನಲ್ಲಿ ಮೋದಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ಕನನಾಸ್ಕಿಸ್ (ಜೂನ್ 2025) ಮತ್ತು ಜೋಹಾನ್ಸ್‌ಬರ್ಗ್ (ನವೆಂಬರ್ 2025)ನಲ್ಲಿ ನಡೆದ ಹಿಂದಿನ ಸಭೆಗಳ ಆಧಾರದ ಮೇಲೆ, ಭಾರತ-ಕೆನಡಾ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯನ್ನು ಉಭಯ ನಾಯಕರು ಚರ್ಚಿಸಲಿದ್ದಾರೆ. ಬಳಿಕ ನಿಗದಿಯಾಗಿದ್ದ ಭಾರತ-ಕೆನಡಾ ಸಿಇಒಗಳ ವೇದಿಕೆಯಲ್ಲಿಯೂ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಇಂದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಮೋದಿ - ನೆತನ್ಯಾಹು: ಐರನ್ ಡೋಮ್ - ಐರನ್ ಬೀಮ್ ತಂತ್ರಜ್ಞಾನಗಳತ್ತ ಭಾರತದ ಚಿತ್ತ