ಮಹಿಳೆಯರ ಮನ ಪರಿವರ್ತಿಸಿ ಲೈಂಗಿಕ ದೌರ್ಜನ್ಯ ಆರೋಪ: ಸಾಧು ವೇಷಧಾರಿ ಐಐಟಿ ಪದವೀಧರ ಅರೆಸ್ಟ್
ಸಾಧು ವೇಷಧಾರಿಯೋರ್ವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧಿತನಾಗಿದ್ದಾನೆ.


Published : June 3, 2026 at 3:51 PM IST
ಮಥುರಾ (ಉತ್ತರ ಪ್ರದೇಶ): ಸಾಧು ವೇಷ ಧರಿಸಿದ ಐಐಟಿ ಪದವೀಧರನೋರ್ವ ಮಹಿಳೆಯರ ಮನಸ್ಸು ಪರಿವರ್ತಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. 30 ವರ್ಷದ ಐಐಟಿ ಪದವೀಧರನನ್ನು ಮಥುರಾದ ರಾಧಾ ಕುಂಡ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಮಿಶ್ರಾ ಅಲಿಯಾಸ್ ಅದಿಕರ್ತಾ ನಾರಾಯಣ ದಾಸ್ ಬಂಧಿತ ಆರೋಪಿ. ಛತ್ತೀಸ್ಗಡ್ ನಿವಾಸಿಯಾದ ಸಂತ್ರಸ್ತೆಯೊಬ್ಬರು ಈತನ ವಿರುದ್ಧ ಗೋವರ್ಧನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಈತನ ಬಣ್ಣ ಬಯಲಾಗಿದೆ. ಈ ಐಐಟಿ ಪದವೀಧರ ಕಳೆದ ಮೂರು ವರ್ಷಗಳಿಂದ ಶೇರ್ಗರಿಯಾ ಆಶ್ರಮದಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಭಿಷೇಕ್ ಮಿಶ್ರಾ ಮೂಲತಃ ಒಡಿಶಾ ರಾಜ್ಯದ ಭುವನೇಶ್ವರ್ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಆಶ್ರಮದಲ್ಲಿ ತನ್ನ ಗರುತು ಮರೆಮಾಚಿಕೊಂಡು ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
थाना गोवर्धन पुलिस द्वारा बहला फुसलाकर ब्रेनवॉश कर युवतियों के साथ दुष्कर्म करने वाले 01 अभियुक्त को किया गया गिरफ्तार ।
— MATHURA POLICE (@mathurapolice) June 1, 2026
उक्त के सम्बन्ध में #COGOVERDHAN_MTA द्वारा दी गई बाइट:-@Uppolice @adgzoneagra @digrangeagra https://t.co/Hk5TmfIprS pic.twitter.com/ycGMhwj8mV
ಪೊಲೀಸರ ಪ್ರಕಾರ, ''ಸಾಧು ವೇಷ ಧರಿಸಿದ್ದ ಈತ ಯುವತಿಯರು ಮತ್ತು ಮಹಿಳೆಯರ ತಲೆಗೆ ಇಲ್ಲಸಲ್ಲದ್ದನ್ನು ತುಂಬುತ್ತಿದ್ದ. ಅಲ್ಲದೆ, ಬಹಳಷ್ಟು ಯುವತಿಯೊರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಈ ಸಾಧು, ಆಕ್ಷೇಪಾರ್ಹ ಮತ್ತು ಅಶ್ಲೀಲ ಕ್ರಿಯೆಗಳಲ್ಲಿ ತೊಡಗುತ್ತಿದ್ದ.''
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋವರ್ಧನ್ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ (CO) ಅನೀಲ್ ಕುಮಾರ್, ಬಹಳಷ್ಟು ಯುವತಿಯರು ಮತ್ತು ಮಹಿಳೆಯರಿಗೆ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಮತ್ತು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದ. ಅವರಿಗೆ ಇಲ್ಲಸಲ್ಲದ್ದನ್ನು ತಲೆಯಲ್ಲಿ ತುಂಬುತ್ತಿದ್ದ ಎಂದು ತಿಳಿಸಿದರು.
''ಮಿಶ್ರಾ ವಿರುದ್ಧ ಕಳೆದ ಮೇ 25 ರಂದು ಸಂತ್ರಸ್ತೆಯೊಬ್ಬರು ನೀಡಿದ ದೂರು ಸ್ವೀಕರಿಸಿದ್ದು, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮತ್ತು ಸೋಮವಾರ (ಜೂನ್ 1 ರಂದು) ಆರೋಪಿಯನ್ನು ಬಂಧಿಸಿದ್ದೇವೆ. ಅಲ್ಲದೆ, ಆರೋಪಿ ವಿರುದ್ಧ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ '' ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಪಾಟ್ನಾದ ಖಾನ್ ಸರ್ ಕೋಚಿಂಗ್ ಕೇಂದ್ರದ ಹೊರಗೆ ಗುಂಡಿನ ದಾಳಿ: ಸಿಬ್ಬಂದಿ ಸ್ಥಿತಿ ಗಂಭೀರ

