ETV Bharat / bharat

TVK ಅಭ್ಯರ್ಥಿ ಅಭ್ಯರ್ಥಿ ವಿ.ಎಸ್. ಬಾಬು ಎದುರು ಸಿಎಂ ಸ್ಟಾಲಿನ್​ಗೆ ಹೀನಾಯ ಸೋಲು

ತಮಿಳುನಾಡಿನ ಕೊಳತ್ತೂರು ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಸೋಲು ಕಂಡಿದ್ದಾರೆ.

M.K. Stalin
ಎಂ.ಕೆ. ಸ್ಟಾಲಿನ್ (ANI)
author img

By ETV Bharat Karnataka Team

Published : May 4, 2026 at 1:43 PM IST

2 Min Read
Choose ETV Bharat

ಚೆನ್ನೈ, ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಕೊಳತ್ತೂರು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಸ್ಟಾಲಿನ್ ಸುಮಾರು 9,000 ಮತಗಳ ಅಂತರದಿಂದ ಟಿವಿಕೆ ಅಭ್ಯರ್ಥಿ ವಿರುದ್ಧ ಪರಾಭವ ಹೊಂದಿದ್ದಾರೆ.

ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಅವರು ಸಿಎಂಗೆ ಭಾರಿ ಆಘಾತ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈ ವ್ಯಾಪ್ತಿಯಲ್ಲಿ ಕೊಳತ್ತೂರು ಕ್ಷೇತ್ರವು ಇದೆ. 12ನೇ ಸುತ್ತಿನ ನಂತರ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಮುನ್ನಡೆ ಪಡೆದುಕೊಂಡಿದ್ದರು.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದರು. ಇದು ಮುಂದಿನ ಎಂ.ಕೆ. ಸ್ಟಾಲಿನ್ ಅವರು ನಾಲ್ಕನೇ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು 2011 ರಲ್ಲಿ ವಿಲ್ಲಿವಕ್ಕಂ ವಿಭಜಿಸಿ ಹೊಸದಾಗಿ ರಚಿಸಲಾಯಿತು. ಅಂದಿನಿಂದ ಎಂಕೆ ಸ್ಟಾಲಿನ್ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯ ಆದಿರಾಜರಾಮ್ ಅವರನ್ನು ಸೋಲಿಸುವ ಮೂಲಕ ಸ್ಟಾಲಿನ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2016 ರ ಚುನಾವಣೆಯಲ್ಲಿಯೂ ಸಹ, ಸ್ಟಾಲಿನ್ ಈ ಸ್ಥಾನದಿಂದ ಜಯಗಳಿಸಿದ್ದರು. 2016 ರ ಚುನಾವಣೆಯಲ್ಲಿ ಸ್ಟಾಲಿನ್ ಎಐಎಡಿಎಂಕೆಯ ಜೆಸಿಡಿ ಪ್ರಭಾಕರ್ ಅವರನ್ನು ಪರಾಭವಗೊಳಿಸಿ ಆಯ್ಕೆ ಆಗಿದ್ದರು.

2011 ರ ಚುನಾವಣೆಯಲ್ಲಿ, ಎಐಎಡಿಎಂಕೆಯ ಸಡೈ ಸಾಯಿ ದುರೈಸ್ವಾಮಿ ಅವರನ್ನು 3000 ಕ್ಕಿಂತ ಕಡಿಮೆ ಮತಗಳಿಂದ ಸೋಲಿಸುವ ಮೂಲಕ ಸ್ಟಾಲಿನ್ ವಿಜಯಶಾಲಿಯಾಗಿದ್ದರು. ಏಪ್ರಿಲ್ 23, 2026 ರಂದು ಒಂದೇ ಹಂತದಲ್ಲಿ 234 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ದಾಖಲೆಯ ಮತದಾನ ದಾಖಲಾಗಿತ್ತು.

ತಮಿಳುನಾಡಿನಲ್ಲಿ ಮುಖ್ಯಮಂತ್ರಿಯೊಬ್ಬರು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. 1996 ರ ಚುನಾವಣೆಯಲ್ಲಿ ಜಯಲಲಿತಾ ಅವರು ಬಾರ್ಕೂರ್ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ಸೋತಿದ್ದರು.

ವಿಜಯ್​ಗೆ ಭಾರಿ ಮುನ್ನಡೆ: ತಮಿಳುನಾಡಿನ ಪೆರಂಬೂರಿನಲ್ಲಿ ಟಿವಿಕೆ ಮುಖ್ಯಸ್ಥ ಜೆ. ವಿಜಯ್ ಪ್ರಸ್ತುತ 50,720 ಮತ ಗಳಿಸಿದ್ದು, ಡಿಎಂಕೆಯ ಆರ್.ಡಿ. ಶೇಖರ್ ಅವರು 21,275 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

ಪಶ್ಚಿಮ ಬಂಗಾಳದ ಭವಾನಿಪುರದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಪ್ರಸ್ತುತ 32,822 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 17,371 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮತ್ತೊಂದೆಡೆ, ಪುದುಚೇರಿ ವಿಧಾನಸಭಾ ಚುನಾವಣೆ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಸಿಎಂ ರಂಗಸ್ವಾಮಿ ತಟ್ಟಂಚಾವಡಿಯಲ್ಲಿ ಜಯ ಸಾಧಿಸಿದ್ದಾರೆ. ಅವರು ಸ್ಪರ್ಧಿಸಿರುವ ಮತ್ತೊಂದು ಕ್ಷೇತ್ರವಾದ ಮಂಗಳಂನಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.

ಕೇರಳದ ಧರ್ಮಡಂ ಕ್ಷೇತ್ರದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಸ್ತುತ 2,792 ಮತಗಳಿಂದ ಮುನ್ನಡೆಯಲ್ಲಿದ್ದಾರೆ, ಅವರು ಇಲ್ಲಿಯವರೆಗೆ 54,494 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಿನ್ನಡೆಯಲ್ಲಿದ್ದಾರೆ.

ಇವುಗಳನ್ನೂ ಓದಿ: