ETV Bharat / bharat

ಕಾಶ್ಮೀರಕ್ಕೆ ಭೇಟಿ ನೀಡಿದ್ದ ಖಮೇನಿ: 370ನೇ ವಿಧಿ ರದ್ದತಿ ಕುರಿತು ಮಾತನಾಡಿದ್ದ ಇರಾನ್​ ಸರ್ವೋಚ್ಛ ನಾಯಕ

1980ರ ದಶಕದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಖಮೇನಿ, ದಶಕಗಳ ಬಳಿಕ ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಕುರಿತು ಮಾತನಾಡಿ ಗಮನ ಸೆಳೆದಿದ್ದರು.

Ayatollah Khamenei's Rare Kashmir Visit And His Views On Articles 370 Abrogation
ಕಾಶ್ಮೀರಕ್ಕೆ ಭೇಟಿ ನೀಡಿದ್ದ ಖಮೇನಿ (Photo source: Iran Govt Archives)
author img

By ETV Bharat Karnataka Team

Published : March 2, 2026 at 3:54 PM IST

3 Min Read
Choose ETV Bharat

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಸ್ರೇಲ್​ ಮತ್ತು ಅಮೆರಿಕ ದಾಳಿಯಲ್ಲಿ ಹತ್ಯೆಯಾದ ಪಶ್ಚಿಮ ಏಷ್ಯಾದ ಧಾರ್ಮಿಕ ಗುರು ಮತ್ತು ಪ್ರಭಾವಿ ರಾಜಕಾರಣಿ ಅಯತೊಲ್ಲಾ ಅಲಿ ಖಮೇನಿ ಬಹು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿನ ಮುಸ್ಮಿಮರ ಸ್ಥಿತಿ ಕುರಿತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. ಇದಾಗಿ ದಶಕಗಳ ಬಳಿಕ ಕಾಶ್ಮೀರ ವಿಚಾರದಲ್ಲಿ ಧ್ವನಿ ಎತ್ತಿದ್ದು, 2019ರಲ್ಲಿ ನೇ 370 ವಿಧಿ ರದ್ದತಿ ಕುರಿತು ಟೀಕಿಸಿದ್ದರು.

1980ರಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಖಮೇನಿ, ಶ್ರೀನಗರ ಐತಿಹಾಸಿಕ ಜಾಮೀಯಾ ಮಸೀದಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. ಖಮೇನಿ ಭೇಟಿಯು ಕಾಶ್ಮೀರದ ಆಧುನಿಕ ರಾಜಕೀಯ ಮತ್ತು ಧಾರ್ಮಿಕ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಅಂದು 41ವರ್ಷದ ವಯಸ್ಸಿನ ಖಮೇನಿ ಇರಾನ್‌ನ ಕ್ರಾಂತಿಯ ನಂತರದ ನಾಯಕತ್ವದ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದರು. ಈ ಕ್ರಾಂತಿಯು 1979ರಲ್ಲಿ ಇರಾನ್​ನ ಶಾ (ಮೊಹಮ್ಮದ್​ ರೆಜಾ ಪಹ್ಲವಿ) ಪತನದ ನಂತರ ಇರಾನ್ ವ್ಯಾಪಕ ರಾಜಕೀಯ ಬದಲಾವಣೆಗಳಿಗೆ ಒಳಗಾಗಿತ್ತು.

ಮುಸ್ಲಿಮರ ಸಮಸ್ಯೆ ಕುರಿತು ಮಾತು: ಜಾಮೀಯಾ ಮಸೀದಿಯಲ್ಲಿ ಅಂದು ಖಮೇನಿ, ಜಾಗತಿಕವಾಗಿ ಮುಸ್ಲಿಮರ ಸ್ಥಿತಿ ಕುರಿತು ವಿಸ್ತಾರವಾಗಿ ಮಾತನಾಡಿದ್ದು, ರಾಜಕೀಯ ಅಥವಾ ಸಾಮಾಜಿಕವಾಗಿ ಸಮಸ್ಯೆ ಎದುರಿಸುತ್ತಿರುವ ಅವರ ಕುರಿತು ಒಗ್ಗಟ್ಟು ಪ್ರದರ್ಶಿಸಿದ್ದರು. ಅವರ ಈ ಭಾಷಣ ಧಾರ್ಮಿಕ ಗುರುಗಳು ಮತ್ತು ಕಾಶ್ಮೀರದ ರಾಜಕೀಯ ವಿಶ್ಲೇಷಕರ ಗಮನ ಸೆಳೆದಿತ್ತು.

Ayatollah Khamenei's Rare Kashmir Visit And His Views On Articles 370 Abrogation
ಅಯತೊಲ್ಲಾ ಅಲಿ ಖಮೇನಿ (X/@khamenei_ir)

ಈ ಭೇಟಿ ವೇಳೆ ಖಮೇನಿ, ಶ್ರೀನಗರದ ಜದಿಬಲ್ ಇಮಾಂಬರಾದಲ್ಲಿ ಶಿಯಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಜೊತೆಗೆ ಹಜರತ್‌ಬಲ್ ದೇಗುಲಕ್ಕೆ ಭೇಟಿ ನೀಡಿ, ಬುಡ್ಗಾಮ್‌ಗೆ ಪ್ರಯಾಣ ಬೆಳೆಸಿದ್ದರು. ಆಘಾ ಕುಟುಂಬದ ಸದಸ್ಯರು ಅವರ ಆತಿಥ್ಯ ವಹಿಸಿಕೊಂಡಿದ್ದರು.

ಅವರ ಈ ಭೇಟಿಯು ಕ್ರಾಂತಿಯ ಬಳಿಕ ದೇಶದೆಲ್ಲೆಡೆ ಇರುವ ಇತರ ಮುಸ್ಲಿಂ ಸಮುದಾಯದ ಜೊತೆಗೆ ಮತ್ತು ನಾಯಕರೊಂದಿಗೆ ಸಂಪರ್ಕ ಸಾಧಿಸುವ ಇರಾನ್​ನ ನೀತಿಯ ಭಾಗವಾಗಿತ್ತು.

Ayatollah Khamenei's Rare Kashmir Visit And His Views On Articles 370 Abrogation
ಅಯತೊಲ್ಲಾ ಅಲಿ ಖಮೇನಿ (X/@khamenei_ir)

370ನೇ ವಿಧಿ ರದ್ದು ಮಾಡಿದ್ದಕ್ಕೆ ಟೀಕೆ ರದ್ದಿಗೆ; ಇದಾದ ವರ್ಷಗಳ ಬಳಿಕ ಖಮೇನಿ 2019ರಲ್ಲಿ ವಿಧಿ 370 ಅನ್ನು ಭಾರತ ಸರ್ಕಾರ ರದ್ದು ಮಾಡಿದ್ದರ ಕುರಿತು, ಕಾಶ್ಮೀರ ಪರಿಸ್ಥಿತಿಗಳ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡಿದ್ದರು. ಈ ಕುರಿತು 2019ರಲ್ಲಿ ಆಗಸ್ಟ್​ 21ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಅವರು, ಈ ಪ್ರದೇಶದಲ್ಲಿನ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಕಾಶ್ಮೀರದಲ್ಲಿನ ಮುಸ್ಲಿಮರ ಪರಿಸ್ಥಿತಿ ಬಗ್ಗೆ ನಾವು ಕಾಳಜಿಯನ್ನು ಹೊಂದಿದ್ದೇವೆ. ಭಾರತದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಆದಾಗ್ಯೂ, ಭಾರತ, ಈ ಪ್ರದೇಶದಲ್ಲಿ ಕೇವಲ ನೀತಿ ಹೊಂದುವುದಲ್ಲ, ಮುಸ್ಲಿಮರ ಮೇಲಿನ ದಬ್ಬಾಳಿಕೆ ತಡೆಯಬೇಕಿದೆ ಎಂದು ಆಗ್ರಹಿಸಿದ್ದರು. ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಗಳು ಬ್ರಿಟಿಷ್ ಸರ್ಕಾರ ತೆಗೆದುಕೊಂಡ ಕ್ರೂರ ಕ್ರಮಗಳ ಪರಿಣಾಮವಾಗಿದೆ. ಕಾಶ್ಮೀರದಲ್ಲಿ ಘರ್ಷಣೆಗಳನ್ನು ಇರುವಂತೆ ಮಾಡಲು ಬ್ರಿಟಿಷರು ಉದ್ದೇಶಪೂರ್ವಕವಾಗಿ ಈ ಪ್ರದೇಶವನ್ನು ಗಾಯಗೊಳಿಸಿದೆ ಎಂದಿದ್ದರು.

ಇರಾನ್​ನ ಸರ್ವೋಚ್ಛ ನಾಯಕರ ಈ ಮಾತು ರಾಜತಾಂತ್ರಿಕರು ಮತ್ತು ರಾಜಕೀಯ ವೃತ್ತದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಕಾರಣ ಇರಾನ್​ ಭಾರತದೊಂದಿಗೆ ಸದಾ ಸಮತೋಲಿತ ಸಂಬಂಧ ಕಾಯ್ದುಕೊಂಡಿದೆ. ಹೀಗಾಗಿ ಖಮೇನಿ ಅವರ ಈ ಹೇಳಿಕೆ ಭಾರಿ ಸದ್ದು ಮಾಡಿತ್ತು.

ಕಾಶ್ಮೀರ ವಿಚಾರ ಪ್ರಸ್ತಾಪ: ದಶಕಗಳ ಮುಂಚೆಯೇ ಕಾಶ್ಮೀರದ ಸ್ಥಿತಿ ಕುರಿತು ಖಮೇನಿ ಮಾತನಾಡಿದ್ದರು. 1990ರಲ್ಲಿ ಅವರು ಜಾಗತಿಕ ಮುಸ್ಲಿಂ ಸಮುದಾಯಗಳ ಕುರಿತು ಚರ್ಚಿಸುವಾಗಲೂ ಈ ಕುರಿತು ಪ್ರಸ್ತಾಪಿಸಿದ್ದರು. ಜಗತ್ತಿನೆಲ್ಲೆಡೆ ಮುಸ್ಲಿಂ ಸಮುದಾಯಗಳನ್ನು ಬೇರೆಯವರಿಗಿಂತ ಕಠಿಣವಾಗಿ ಕಾಣಲಾಗುತ್ತಿದೆ. ಇದಕ್ಕೆ ಕಾಶ್ಮೀರ ಪ್ರಚಲಿತ ಉದಾಹರಣೆ ಎಂದಿದ್ದರು. ಈ ಹೇಳಿಕೆ ಬಳಿಕ ಸಿಕ್ಕಾಪಟ್ಟೆ ಪ್ರಚಾರವನ್ನೂ ಪಡೆದುಕೊಂಡಿತ್ತು. ಕಾಶ್ಮೀರದಲ್ಲಿನ ಮುಸ್ಲಿಮರು ತಮ್ಮ ಹಕ್ಕುಗಳಿಗೆ ಧ್ವನಿ ಎತ್ತಿದ್ದು, ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿದೆ ಎಂದು ಅವರು ಹೇಳಿದ್ದರು.

ಈ ರೀತಿಯ ಹೇಳಿಕೆಗಳ ಹೊರತಾಗಿ ಭಾರತ ಮತ್ತು ಇರಾನ್​ ಉತ್ತಮವಾದ ರಾಜತಾಂತ್ರಿಕ ಸಹಕಾರ ಹಾಗೂ ಸಂಬಂಧವನ್ನು ಹೊಂದಿದ್ದವು. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಇರಾನ್​, ಕೇಂದ್ರ ಏಷ್ಯಾದೆಡೆಗೆ ಮಾರ್ಗ ಮತ್ತು ಅಫ್ಘಾನಿಸ್ತಾನದೊಂದಿಗೆ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಹೊಂದಿದೆ. ದಕ್ಷಿಣ ಏಷ್ಯಾದಲ್ಲಿನ ಪ್ರಾದೇಶಿಕ ರಾಜಕೀಯದ ಕುರಿತು ಸಮತೋಲಿತ ಪ್ರಸ್ತಾವವನ್ನು ಹೊಂದಿದೆ.

ಭಾರತದ ಬೆನ್ನಿಗೆ ನಿಂತ ಇರಾನ್​: 1990ರಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಇಸ್ಲಾಮಿಕ ಸಹಕಾರ ಸಂಘಟನೆಯಲ್ಲಿ ನಿರ್ಣಯ ಕೈಗೊಳ್ಳಲು ಪ್ರಸ್ತಾಪ ಮಾಡಿತ್ತು. ಆ ಪ್ರಯತ್ನ ಯಶಸ್ವಿಯಾಗಿದ್ದರೆ, ಭಾರತವು ಅಂತಾರಾಷ್ಟ್ರೀಯ ರಾಜತಾಂತ್ರಿಕ ಒತ್ತಡ ಮತ್ತು ಸಂಭಾವ್ಯ ನಿರ್ಬಂಧಗಳನ್ನು ಎದುರಿಸಬೇಕಾಗಿತ್ತು.

ಈ ವೇಳೆ ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್​ ಇರಾನ್​ ಬೆಂಬಲವನ್ನು ಕೋರಿದ್ದರು. ವಿದೇಶಾಂಗ ಸಚಿವರಾಗಿದ್ದ ದಿನೇಶ್​ ಸಿಂಗ್​ ಟೆಹ್ರಾನ್​ಗೆ ಭೇಟಿ ನೀಡಿ ಪಾಕ್​ ವಿರುದ್ಧ ರಾಜತಾಂತ್ರಿಕ ಬೆಂಬಲವನ್ನು ಕೇಳಿದ್ದರು. ಈ ವೇಳೆ ಇರಾನ್​ ವಿದೇಶಾಂಗ ಸಚಿವರು ಸಿಂಗ್​ ಅವರನ್ನು ವಿಮಾನ ನಿಲ್ದಾಣದಲ್ಲಿ ಖುದ್ದು ಬರಮಾಡಿಕೊಂಡು, ಭಾರತಕ್ಕೆ ಬೆಂಬಲ ಘೋಷಿಸಿದ್ದರು.

ಒಐಸಿಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಾಗ ಇರಾನ್​ ಪಾಕಿಸ್ತಾನದ ನಿರ್ಣಯಕ್ಕೆ ಬೆಂಬಲ ನೀಡಿರಲಿಲ್ಲ. ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ, ನಿರ್ಬಂಧಗಳಿಗೆ ಕರೆ ನೀಡಿದ್ದ ಈ ಈ ಪ್ರಸ್ತಾವನೆಯು ವೇಗವನ್ನು ಪಡೆಯುವಲ್ಲಿ ವಿಫಲವಾಯಿತು

ಇವುಗಳನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಜಾಗತಿಕ ನಾಯಕರು ಹೇಳಿದ್ದೇನು?

ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಸಾವಿರಾರು ಜನರಿಂದ ಬೃಹತ್ ಮೆರವಣಿಗೆ; ಕಣ್ಣೀರಿಟ್ಟ ಪ್ರತಿಭಟನಾಕಾರರು