ETV Bharat / bharat

ಯೂಟ್ಯೂಬ್​ನಲ್ಲಿ ಟ್ರಂಪ್​ ಹಿಂದಿಕ್ಕಿದ ಮೋದಿ; 30 ಮಿಲಿಯನ್​ ದಾಟಿದ ಚಂದಾದಾರರ ಸಂಖ್ಯೆ

ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಅವರು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.

30 million and rising: PM Modi sets global benchmark of subscribers on YouTube
ಯೂಟ್ಯೂಬ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ 30 ಮಿಲಿಯನ್‌ಗೂ ಹೆಚ್ಚು ಹಿಂಬಾಲಕರು (ANI)
author img

By ETV Bharat Karnataka Team

Published : March 3, 2026 at 12:06 PM IST

2 Min Read
Choose ETV Bharat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೀಗ ಯೂಟ್ಯೂಬ್​ ಸಾಮಾಜಿಕ ಜಾಲತಾಣದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಯೂಟ್ಯೂಬ್​ ಚಂದಾದಾರರ ಸಂಖ್ಯೆ 30 ಮಿಲಿಯನ್​ ದಾಟಿದೆ.

ಎರಡನೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕನಾಗಿ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಇದ್ದಾರೆ. ಆದರೂ ಇವರ ಚಂದಾದಾರರ ಸಂಖ್ಯೆ ಪ್ರಧಾನಿ ಮೋದಿ ಅವರ ನಾಲ್ಕನೇ ಒಂದು ಭಾಗದಷ್ಟು ಮಾತ್ರ.

ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗಿಂತ ಏಳು ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದ್ದು, ಇದು ಮೋದಿ ವಿಶ್ವಾದ್ಯಂತ ಹೊಂದಿರುವ ಡಿಜಿಟಲ್ ಸಂಪರ್ಕ ಮತ್ತು ತೊಡಗಿಸಿಕೊಳ್ಳುವಿಕೆಯ ಪ್ರಮಾಣವನ್ನು ಎತ್ತಿ ತೋರಿಸುತ್ತಿದೆ.

ಭಾರತದಲ್ಲಿ ಮೋದಿ ಪ್ರಖ್ಯಾತಿ ಹೆಚ್ಚಿದ್ದು, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಗಿಂತ ಮೂರು ಪಟ್ಟು ಮತ್ತು ಎಎಪಿ ಮತ್ತು ಭಾರತೀಯ ಕಾಂಗ್ರೆಸ್​ ಯೂಟ್ಯೂಬ್​ ಚಂದಾದಾರಿಕೆಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಇದೀಗ ಅವರು 30 ಮಿಲಿಯನ್​ ಚಂದಾದಾರರನ್ನು ಹೊಂದುವ ಮೂಲಕ ಜಾಗತಿಕವಾಗಿ ಯೂಟ್ಯೂಬ್‌ನಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ನಾಯಕರಾಗಿದ್ದಾರೆ.

ಯೂಟ್ಯೂಬ್​ ಸಾಧನೆಗೆ ಮುನ್ನವೇ ಅವರು ಇನ್ಸ್​ಟಾಗ್ರಾಂ ಖಾತೆಯಲ್ಲಿ 100 ಮಿಲಿಯನ್​ ಹಿಂಬಾಲಕರನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಈ ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಅಗಾಧ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಮೊದಲ ಜಾಗತಿಕ ರಾಜಕಾರಣಿಯಾಗಿಯೂ ಹೊರ ಹೊಮ್ಮಿದ್ದಾರೆ.

2014ರಲ್ಲಿ ಇನ್ಸ್​ಟಾಗ್ರಾಂ ಸೇರಿದ ಮೋದಿ, ಇಂದು ಅಮೆರಿಕ ಅಧ್ಯಕ್ಷರಿಗಿಂತ ಎರಡು ಪಟ್ಟು ಹೆಚ್ಚು ಬೆಂಬಲಿಗರನ್ನು ಹೊಂದಿದ್ದಾರೆ. ಮೋದಿ ಅವರ ವೈಯಕ್ತಿಕ ಅನುಯಾಯಿಗಳ ಸಂಖ್ಯೆ ವಿಶ್ವದ ಐದು ಪ್ರಮುಖ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ 43.2 ಮಿಲಿಯನ್ ಫಾಲೋವರ್ಸ್​ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಧಾನಿ ಮೋದಿಯ ನಂತರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 15 ಮಿಲಿಯನ್ ಅನುಯಾಯಿಗಳು, ಬ್ರೆಜಿಲ್ ಅಧ್ಯಕ್ಷ ಲುಲಾ 14.4 ಮಿಲಿಯನ್ ಅನುಯಾಯಿಗಳು, ಟರ್ಕಿಶ್ ಅಧ್ಯಕ್ಷ ಎರ್ಡೋಗನ್ 11.6 ಮಿಲಿಯನ್ ಅನುಯಾಯಿಗಳು ಮತ್ತು ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ 6.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿಯವರ ಅನುಯಾಯಿಗಳ ಸಂಖ್ಯೆ ಇತರೆ ಭಾರತೀಯ ರಾಜಕೀಯ ನಾಯಕರಿಗಿಂತ ಸಾಕಷ್ಟು ಹೆಚ್ಚಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಮಾರು 16.1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ರಾಹುಲ್ ಗಾಂಧಿ ಸುಮಾರು 12.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇವುಗಳನ್ನೂ ಓದಿ: