ETV Bharat / bharat

ಮುಂಬೈನ ಮಂಕಿ ಹಿಲ್‌ನಲ್ಲಿ ಭೂಕುಸಿತ: ಪುಣೆ- ಮುಂಬೈ ನಡುವೆ ಸಂಚರಿಸುವ 16 ರೈಲುಗಳ ಸಂಚಾರ ರದ್ದು

ಮುಂಬೈನಲ್ಲಿ ಭಾರಿ ಮಳೆಯಿಂದ ಮಂಕಿ ಹಿಲ್‌ನಲ್ಲಿ ಭೂಕುಸಿತ. ಪುಣೆ- ಮುಂಬೈ ನಡುವೆ ರೈಲು ಸಂಚಾರ ಬಂದ್​.

TRAINS CANCELLED
ಪ್ರಾತಿನಿಧಿಕ ಚಿತ್ರ (IANS)
author img

By ETV Bharat Karnataka Team

Published : July 6, 2026 at 2:56 PM IST

2 Min Read
Choose ETV Bharat

ಮುಂಬೈ (ಮಹಾರಾಷ್ಟ್ರ): ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಬೈ ವಿಭಾಗದ ಮಂಕಿ ಹಿಲ್‌ನ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಪುಣೆ ಮತ್ತು ಮುಂಬೈ ನಡುವೆ ಸಂಚರಿಸುವ 16 ರೈಲುಗಳ ಸಂಚಾರ ರದ್ದುಗೊಂಡಿದೆ. ಜೊತೆಗೆ, 6 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ರೈಲು ಹಳಿಗಳಿಗೆ ಭಾರಿ ಹಾನಿ: ಮಳೆ ಮತ್ತು ಭೂಕುಸಿತದಿಂದ ರೈಲು ಹಳಿಗಳು ಹಾನಿಗೀಡಾಗಿವೆ. ಅವಶೇಷಗಳು ಬಿದ್ದ ಕಾರಣ ಸಂಚಾರವೇ ಬಂದ್ ಆಗಿದೆ. ಇಂದು ಮುಂಬೈನಿಂದ ಹೊರಡಬೇಕಿದ್ದ ಕೆಲವು ರೈಲುಗಳು ತಡವಾಗಿ ಮಾರ್ಗ ಬದಲಾವಣೆ ಮಾಡಿಕೊಂಡು ಸಂಚರಿಸಿವೆ.

ಯಾವೆಲ್ಲಾ ರೈಲು ಸಂಚಾರ ರದ್ದು

22105 /22106: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಇಂದ್ರಯಾನಿ ಎಕ್ಸ್‌ಪ್ರೆಸ್

12169 /12170: ಪುಣೆ - ಸೋಲಾಪುರ - ಪುಣೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್

12127 / 12128: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್

11007 /11008: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಡೆಕ್ಕನ್ ಎಕ್ಸ್‌ಪ್ರೆಸ್

12123 / 12124: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಡೆಕ್ಕನ್ ಕ್ವೀನ್ ಎಕ್ಸ್‌ಪ್ರೆಸ್

12125 / 12126: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಪ್ರಗತಿ ಎಕ್ಸ್‌ಪ್ರೆಸ್

11009/ 11010: ಸಿಎಸ್​ಎಂಟಿ - ಪುಣೆ - ಸಿಎಸ್​ಎಂಟಿ ಸಿಂಹಗಡ್ ಎಕ್ಸ್‌ಪ್ರೆಸ್

11011: ಸಿಎಸ್​ಎಂಟಿ - ಧುಲೆ ಎಕ್ಸ್‌ಪ್ರೆಸ್

11012: ಧುಲೆ - ಮುಂಬೈ ಧುಲೆ ಎಕ್ಸ್‌ಪ್ರೆಸ್

11009: ಮುಂಬೈ - ಪುಣೆ ಸಿನ್ಹಗಡ್ ಎಕ್ಸ್‌ಪ್ರೆಸ್

ತಾತ್ಕಾಲಿಕ ಸಂಚಾರ ಬಂದ್:

ಹೈದರಾಬಾದ್​​​ನಿಂದ ಮುಂಬೈ ಹುಸೇನ್ ಸಾಗರ್​ಗೆ ಸಂಪರ್ಕ ಕಲ್ಪಿಸುವ 22731 ಸಂಖ್ಯೆಯ ರೈಲು ತಾತ್ಕಾಲಿಕವಾಗಿ ಸಂಚಾರ ಬಂದ್​ ಮಾಡಲಾಗಿದೆ. ಈ ರೈಲು ಮುಂಬೈ ಬದಲಿಗೆ ಪುಣೆ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಅದೇ ರೈಲು ಪುಣೆಯಿಂದ 12701 ಸಂಖ್ಯೆಯಲ್ಲಿ ತೆರಳುತ್ತದೆ.

ಇನ್ನೊಂದು, 12701 ಸಂಖ್ಯೆಯ ಮುಂಬೈ - ಹೈದರಾಬಾದ್ ಹುಸೇನ್ ಸಾಗರ್ ಎಕ್ಸ್‌ಪ್ರೆಸ್ ರೈಲು ಮುಂಬೈ ನಿಲ್ದಾಣದ ಬದಲಿಗೆ ಪುಣೆ ನಿಲ್ದಾಣದಿಂದ ಹೈದರಾಬಾದ್‌ಗೆ ಹೊರಡುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಇವುಗಳನ್ನೂ ಓದಿ:

ಪಶ್ಚಿಮ ಕರಾವಳಿಯಲ್ಲಿ ತೀವ್ರ ಮಾನ್ಸೂನ್ ಮಳೆ ಮುನ್ಸೂಚನೆ ನೀಡಿದ IMD: ಕೊಂಕಣ ಮತ್ತು ಗೋವಾ, ಗುಜರಾತ್ ಪ್ರದೇಶ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಸೌರಾಷ್ಟ್ರ ಮತ್ತು ಕಚ್‌ನಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 6–7 ರ ಅವಧಿಯಲ್ಲಿ ಕೊಂಕಣ ಮತ್ತು ಗೋವಾ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಡುವ ಮುನ್ನ ಎಲ್ಲ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದೆ.