ವಿದ್ಯುತ್ ಸ್ಪರ್ಶದಿಂದ ಮುಸ್ಯಾಗಳ ಸಾವು: ಆಟೋದಲ್ಲಿ ಮೆರವಣಿಗೆ, ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಿದ ಯುವಕರ ತಂಡ - Youths last rites to Langurs

By ETV Bharat Karnataka Team

Published : Jul 19, 2024, 10:32 PM IST

thumbnail
ವಿದ್ಯುತ್ ಸ್ಪರ್ಶದಿಂದ ಮುಸಿಯಾಗಳ ಸಾವು: ಆಟೋದಲ್ಲಿ ಮೆರವಣಿಗೆ, ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಿದ ಯುವಕರ ತಂಡ (ETV Bharat)

ದಾವಣಗೆರೆ: ಆಹಾರ ಅರಸಿ ನಾಡಿಗೆ ಬಂದು ಮುಸ್ಯಾ(ಮಂಗ)ಗಳೆರಡು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಯುವಕರ ತಂಡವೊಂದು ಅವುಗಳನ್ನು ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ ಅವುಗಳಿಗೆ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ. 

ವಿದ್ಯುತ್ ತಂತಿ ಸ್ಪರ್ಶದಿಂದ ತಾಯಿ ಮುಸ್ಯಾ ಹಾಗೂ ಮರಿ ಮುಸ್ಯಾ ಸಾವನ್ನಪ್ಪಿವೆ. ಹಳೇಕುಂದವಾಡದ ಯುವಕರು ಮುಸ್ಯಾಗಳೆರಡಕ್ಕೂ ಮೊದಲು ಹೂವು ಹಾಕಿ ಆಟೋದಲ್ಲಿ ಹಳೇ ಕುಂದವಾಡದಾದ್ಯಂತ ಜೈ ಭಜರಂಗಿ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದರು. ಬಳಿಕ ಪೂಜೆ ಸಲ್ಲಿಸಿ, ಅವುಗಳಿಗೆ ಅಂತ್ಯಕ್ರಿಯೆ ನಡೆಸಿದರು.   

ಮಳೆಯ ನಡುವೆಯೇ ಯುವಕರು ಅಂತ್ಯಕ್ರಿಯೆ ನಡೆಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ  ಕಾರಣವಾಯಿತು. ಇದಲ್ಲದೆ ಹಳೇ ಕುಂದವಾಡದಲ್ಲಿ ಮುಸ್ಯಾಗಳು ಜನರಿಗೆ ಕಾಟ ಕೊಟ್ಟಿದ್ದವು, ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿದ್ದವು. ಈ ಹಿಂದೆ ಮನುಷ್ಯರ ಮೇಲೆ ದಾಳಿ ನಡೆಸಿದ್ದರಿಂದ ಬೋನ್ ಇರಿಸಿ ಅರಣ್ಯ ಇಲಾಖೆ ಮುಸ್ಯಾಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿತ್ತು. ಆದರೆ ಇದೀಗ ಕುಂದವಾಡಕ್ಕೆ ಬಂದು ಸಾವನಪ್ಪಿದ ಮುಸ್ಯಾಗಳಿಗೆ ಯುವಕರು ಅಂತ್ಯಕ್ರಿಯೆ ನಡೆಸಿದ್ದಾರೆ.

ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಚಿತೆ ಏರಿ ಕುಳಿತ ಕೋತಿ! ವಿಡಿಯೋ - Monkey Funeral Pyre

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.