thumbnail

ಕಟಪಾಡಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ: ಗಮನ ಸೆಳೆದ ಪುಟಾಣಿಗಳ ಹುಲಿವೇಷ ಕುಣಿತ - ವಿಡಿಯೋ - Tiger dance

By ETV Bharat Karnataka Team

Published : Sep 10, 2024, 8:25 PM IST

ಉಡುಪಿ: ವರ್ಷದಿಂದ ವರ್ಷಕ್ಕೆ ಉಡುಪಿ ಜಿಲ್ಲೆಯಲ್ಲಿ ಹುಲಿವೇಷಗಳ ಅಬ್ಬರ ಹೆಚ್ಚುತ್ತಿದೆ. ಅಷ್ಟಮಿಯ ನಂತರ ಇದೀಗ ಗಣೇಶ ಚತುರ್ಥಿಯ ವಿಸರ್ಜನಾ ಮೆರವಣಿಗೆ ವೇಳೆ ಹುಲಿವೇಷಧಾರಿಗಳ ಭರಾಟೆ ಜೋರಾಗಿದೆ. ಅದರಲ್ಲೂ ಮರಿ ಹುಲಿಗಳ ಕಾರುಬಾರು ಜಬರ್ದಸ್ತ್ ಆಗಿದೆ.

ಹೌದು, ಕರಾವಳಿಯ ಜನರಿಗೆ ಹುಲಿವೇಷವೆಂದರೆ ಅದೇನೋ ಸೆಳೆತ. ಹುಲಿವೇಷಗಳ ಬೆನ್ನು ಹತ್ತಿ ಹೋಗಿ ಕುಣಿಯುವ ಮಕ್ಕಳು ಇಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪುಟಾಣಿ ಮಕ್ಕಳು ಹುಲಿವೇಷ ಧರಿಸಿ ಕುಣಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಹಿರಿಯ ವೇಷಧಾರಿಗಳನ್ನು ಮೀರಿಸುವಂತೆ, ಅತ್ಯುತ್ಸಾಹದಿಂದ ಮಕ್ಕಳು ಕುಣಿಯುವುದನ್ನು ಕಾಣುವುದೇ ಚೆಂದ. ಅದರಲ್ಲೂ ಮರ ಕಾಲುಗಳನ್ನು ಕಟ್ಟಿಕೊಂಡು ಮಕ್ಕಳು ಕುಣಿಯುವುದು ನಿಜಕ್ಕೂ ಅಚ್ಚರಿ.

ತಾಸೆಯ ಪೆಟ್ಟಿಗೆ ಪುಟಾಣಿಗಳ ಹುಲಿವೇಷ ಕುಣಿತ: ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಹುಲಿವೇಷ ಹಾಕುತ್ತಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಮಹಿಳೆಯರು ಸಹ ತಾವೇನು ಕಡಿಮೆ ಇಲ್ಲ ಎಂದು ಹುಲಿವೇಷ ಧರಿಸಿ ರಾರಾಜಿಸುತ್ತಿದ್ದಾರೆ. ಅದರಂತೆ ಇದೀಗ ಪುಟಾಣಿ ಹೆಣ್ಣುಮಕ್ಕಳು ಕೂಡ ಹುಲಿವೇಷ ಧರಿಸಿ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ. ಕಟಪಾಡಿಯ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ವೇಳೆ ಹುಲಿವೇಷ ಕುಣಿತದಲ್ಲಿ ಪುಟಾಣಿ ಮಕ್ಕಳದ್ದೇ ಕಾರುಬಾರು. ಮನೆಯ ಹಿರಿಯರ ಜೊತೆ ವೇಷ ಧರಿಸಿ ಸಖತ್ ಸ್ಟೆಪ್ಸ್​ಗಳನ್ನು ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಇದನ್ನೂ ಓದಿ: ಉಡುಪಿ: ತೊಟ್ಟಂ ಅನ್ನಮ್ಮ ಮೊಂತಿ ಫೆಸ್ಟ್​​: 'ಸಾವಯವ ತರಕಾರಿ ಸಂತೆ' - Organic Vegetable Mela

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.