thumbnail

ವಿಜಯಪುರ: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಮಕ್ಕಳ ಕಣ್ಣೀರಿನ ಬೀಳ್ಕೊಡುಗೆ - Teacher Transfer

By ETV Bharat Karnataka Team

Published : Sep 6, 2024, 8:04 PM IST

ವಿಜಯಪುರ: ಸರ್ಕಾರಿ ಶಾಲೆಯ ಮೆಚ್ಚಿನ ಶಿಕ್ಷಕರೊಬ್ಬರು ಬೇರೆಕಡೆ ವರ್ಗಾವಣೆಯಾದ ಕಾರಣ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆಯಿತು. ಕಳೆದ ಹಲವು ವರ್ಷಗಳಿಂದ ಹಿರೇಮಸಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್​ ಪಾಠ ಮಾಡುತ್ತಿದ್ದ ಶಿಕ್ಷಕ ಸಂಗಮೇಶ ಬಿ.ಸಿ ಎನ್ನುವವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ವರ್ಗಾವಣೆಗೊಂಡಿದ್ದು, ತಮ್ಮ ಶಾಲೆ ಬಿಟ್ಟು ಹೋಗದಂತೆ ಶಾಲೆಯ ವಿದ್ಯಾರ್ಥಿಗಳು ಪರಿಪರಿಯಾಗಿ ಕೇಳಿಕೊಂಡು ಕಣ್ಣೀರು ಹಾಕಿದರು.

ಶಿಕ್ಷಕನ ವರ್ಗಾವಣೆಯಿಂದ ಕಣ್ಣೀರಾದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕನ ಕಾಲಿಗೆ ಬಿದ್ದು ತಮ್ಮನ್ನು ಬಿಟ್ಟು ಹೋಗದಂತೆ ಮನವಿ ಮಾಡಿಕೊಂಡರು. ಈ ವೇಳೆ ವಿದ್ಯಾರ್ಥಿಗಳನ್ನು ಶಿಕ್ಷಕ ಸಂಗಮೇಶ ಅವರು ಸಮಾಧಾನಪಡಿಸಿದರಲ್ಲದೇ ಮಕ್ಕಳ ಪ್ರೀತಿಗೆ ಅವರೂ ಸಹ ಕಣ್ಣೀರು ಹಾಕಿದರು. ಇನ್ನು ಶಾಲಾ ಶಿಕ್ಷಕ ವರ್ಗಾವಣೆಗೊಂಡಿದ್ದಕ್ಕೆ ಇತರ ಸಹ ಶಿಕ್ಷಕರೂ ಕೂಡಾ ಕಣ್ಣೀರು ಹಾಕಿದ ಘಟನೆ ನಡೆಯಿತು.  ಎಲ್ಲರೂ ಚೆನ್ನಾಗಿ ಓದುವಂತೆ ಶಿಕ್ಷಕ ಸಂಗಮೇಶ ತಮ್ಮ ವಿದ್ಯಾರ್ಥಿಗಳಿಗೆ ಕೆಲವು ಬುದ್ಧಿಮಾತು ಹೇಳಿ ಹಳಿಯಾಳದತ್ತ ಪ್ರಯಾಣ ಬೆಳೆಸಿದರು. 

ಇದನ್ನೂ ಓದಿ: ಹಾವೇರಿ: ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಬೇಸರ; ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮುದ್ದು ಮಕ್ಕಳು - Teacher Transfer

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.