ಚಿರತೆ ಬಾಯಿಂದ ಕುರಿ ಬಿಡಿಸಿಕೊಂಡು ಬಂದ ಕುರಿಗಾಹಿ: ಕೊನೆಗೂ ಬೋನಿಗೆ ಬಿದ್ದ ಚಿರತೆ - Sheep rescued from leopard
Published : Sep 14, 2024, 3:47 PM IST
|Updated : Sep 14, 2024, 3:59 PM IST
ಚಾಮರಾಜನಗರ: ಚಿರತೆಯನ್ನು ಅಟ್ಟಾಡಿಸಿ, ಬೆದರಿಸಿ ಚಿರತೆ ಹೊತ್ತೊಯ್ದಿದ್ದ ಕುರಿಯನ್ನು ಬಚಾಬ್ ಮಾಡಿ ತಂದ ಘಟನೆ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರದಂದು ಈ ರೋಚಕ ಘಟನೆ ನಡೆದಿದೆ. ಕೆಂಪನಪಾಳ್ಯ ಗ್ರಾಮದ ಮುದುಮಲೆ ಗುಡ್ಡದ ಸಮೀಪ ಚಿರತೆಯೊಂದು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ಕುರಿಯನ್ನು ಎತ್ತುಕೊಂಡು ಹೋಗುತ್ತಿತ್ತು. ಈ ವೇಳೆ, ಕುರಿಗಾಹಿ ಮಂಜು ಚಿತ್ರಪ್ಪ ಅದನ್ನು ಗಮನಿಸಿ ಬೆನ್ನಟ್ಟಿಕೊಂಡು ಹೋಗಿ, ಹೆದರಿಸಿದ ವೇಳೆ ಗಾಬರಿಗೊಂಡ ಚಿರತೆಯು ಕುರಿಯನ್ನು ಬಿಟ್ಟು ನೀರಿನ ಪೈಪ್ ಒಳಗೆ ಸೇರಿಕೊಂಡಿದೆ.
ಕುರಿಗಾಹಿ ಮಂಜು ಚಿತ್ರಪ್ಪ ಬದುಕಿದೆಯಾ ಬಡ ಜೀವವೇ ಎಂದು ಕುರಿಯನ್ನು ಕರೆತಂದಿದ್ದಾನೆ. ಬಳಿಕ, ಅರಣ್ಯ ಇಲಾಖೆಗೆ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಬೋನ್ ಮೂಲಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
"ಈಗಾಗಲೇ ಮೂರು ಕುರಿಗಳನ್ನು ಚಿರತೆ ಎತ್ತೊಯ್ದಿವೆ. ಇದನ್ನು ನಾವು ಬಿಡಿಸಿಕೊಂಡು ಬಂದೆವು. ಮೂರು ಕುರಿಗಳು ಎತ್ತೊಯ್ದಿರುವ ಬಗ್ಗೆ ನಾವು ಯಾರಿಗೂ ಹೇಳಿರಲಿಲ್ಲ. ಹಾಗಾಗಿ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ." ಎನ್ನುತ್ತಾರೆ ಮಂಜು ಚಿತ್ರಪ್ಪ.
ಇದನ್ನೂ ನೋದಿ: ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ: ರಾತ್ರಿ ಹೊರ ಬರಲು ಹೆದರುತ್ತಿರುವ ಜನರು! - man died in elephant attack