thumbnail

ಶಿಕ್ಷಕರೊಂದಿಗೆ ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ಸಚಿವ ಸಂತೋಷ್​ ಲಾಡ್ - Santhosh Lad dance

By ETV Bharat Karnataka Team

Published : Sep 7, 2024, 9:14 AM IST

ಧಾರವಾಡ : ಸದಾ ವಿಭಿನ್ನವಾಗಿ ಗುರುತಿಸಿಕೊಳ್ಳುವ, ಎಲ್ಲರೊಳಗೊಂದಾಗಿ ಬೆರೆಯುವ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಜಾನಪದ ಹಾಡಿಗೆ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು.

ಶುಕ್ರವಾರ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಮತ್ತು ವಿಶಿಷ್ಟವಾದ ಜೋಗುತಿ ಜಾನಪದ ನೃತ್ಯಕ್ಕೆ ಕಲಾವಿದ ಶಿಕ್ಷಕ, ಶಿಕ್ಷಕಿಯರ ಜೊತೆಗೆ ಬೆಂಕಿ ಕುಂಡವನ್ನು ತಲೆ ಮೇಲೆ ಹೊತ್ತು ನೃತ್ಯಕ್ಕೆ ಹೆಜ್ಜೆ ಹಾಕಿ, ಸಚಿವರು ಸಂಭ್ರಮಿಸಿದರು. ಈ ಮೂಲಕ ಶಿಕ್ಷಕರ ಸಂಭ್ರಮದ ಕ್ಷಣದಲ್ಲಿ ಸಚಿವ ಸಂತೋಷ್​ ಲಾಡ್​ ಪಾಲ್ಗೊಂಡರು. 

ಪ್ರೇಕ್ಷಕರ ಮನ ಸೆಳೆದ ನೃತ್ಯ ಪ್ರದರ್ಶನ: ಶಿಕ್ಷಕ ಕಲಾವಿದರ ಸಿರಿಗಂಧ ಜಾನಪದ ಕಲಾಬಳಗದ ಪ್ರಕಾಶ ಕಂಬಳಿ ಮತ್ತು ಜಯಲಕ್ಷ್ಮಿ ಹೆಚ್ ಅವರು ತಮ್ಮ ಸಹ ಕಲಾ ಶಿಕ್ಷಕರೊಂದಿಗೆ ಜಾನಪದ ನೃತ್ಯ ಪ್ರದರ್ಶಿಸಿ, ಪ್ರೇಕ್ಷಕರ ಗಮನ ಸೆಳೆದರು.

ಇದನ್ನೂ ಓದಿ : ಪಾದಯಾತ್ರೆ ಸಮಾರೋಪದ ಮೆರವಣಿಗೆಯಲ್ಲಿ ಮೈತ್ರಿ ಶಾಸಕರಿಂದ ಭರ್ಜರಿ ಡ್ಯಾನ್ಸ್ - ವಿಡಿಯೋ - BJP JDS MLAS DANCE

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.