ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಂಭ್ರಮ : ವಿಡಿಯೋ - BAGALKOTE HOLI 2025
🎬 Watch Now: Feature Video


Published : March 15, 2025 at 10:42 PM IST
ಬಾಗಲಕೋಟೆ : ರಂಗು ರಂಗಿನ ಹಬ್ಬ ಹೋಳಿಯನ್ನು ಬಾಗಲಕೋಟೆ ನಗರದಲ್ಲಿ ಪರಸ್ಪರ ಬಣ್ಣ ಹಚ್ಚಿ ಶುಭಾಶಯ ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು. ಯುವಕ, ಯುವತಿಯರು ಮತ್ತು ಹಿರಿಯರು ಡಿಜೆ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.
ಬಾಗಲಕೋಟೆ ನಗರದ ಹೋಳಿ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಕಾಮಣ್ಣ ದಹನ ಸೇರಿದಂತೆ ಹಲಗೆ ಬಾರಿಸುವುದು, ಹಲಗೆ ಮೇಳ ಸ್ಪರ್ಧೆ ಆಯೋಜನೆ ಹಾಗೂ ಗಲ್ಲಿ ಗಲ್ಲಿಯಲ್ಲಿಯೂ ಹಲಗೆ ಸದ್ದು ಕೇಳಿಬರುತ್ತದೆ. ಹುಬ್ಬಾ ನಕ್ಷತ್ರದಲ್ಲಿ ಕಾಮದಹನ ಮಾಡಿದ ಬಳಿಕ ಮೂರು ದಿನಗಳ ಕಾಲ ಬಣ್ಣದ ಹಬ್ಬ ಬಾಗಲಕೋಟೆ ನಗರವನ್ನು ರಂಗೇರಿಸುತ್ತದೆ.
ಈ ಹಿಂದೆ ಐದು ದಿನಗಳ ರಂಗೀನಾಟ ಆಡಲಾಗುತ್ತಿತ್ತು. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆಗೂ ಮೊದಲು ಕಿಲ್ಲಾ ಓಣಿ, ವೆಂಕಟಪೇಟೆ, ಹೊಸಪೇಟೆ, ಜೈನ್‌ಪೇಟೆ ಮತ್ತು ಹಳೆಪೇಟೆಗಳಲ್ಲಿ ಐದು ದಿನಗಳ ಕಾಲ ಬಣ್ಣದಾಟ ಭರ್ಜರಿಯಾಗಿ ನಡೆಯುತ್ತಿತ್ತು. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆದ ಬಳಿಕ ನವನಗರ, ವಿದ್ಯಾಗಿರಿಗೆ ಆ ಏರಿಯಾಗಳ ಮುಳುಗಡೆ ಸಂತ್ರಸ್ತರು ಸ್ಥಳಾಂತರಗೊಂಡರು. ಅಲ್ಲಿಂದ ಮೂರು ದಿನಗಳ ಕಾಲ ಮಾತ್ರ ಬಣ್ಣದ ಓಕಳಿ ನಡೆಯುತ್ತಿದೆ.
ಬಾಗಲಕೋಟೆ ನಗರದ ಕೆಲ ಯುವಕ ಸಂಘಟನೆಗಳು ಸೇರಿಕೊಂಡು, ಹೋಳಿ ಹಬ್ಬದಂದು ರೈನ್ ಡ್ಯಾನ್ಸ್ ಏರ್ಪಡಿಸಿದ್ದರಿಂದ ಯುವಕ, ಯುವತಿಯರು ನೀರಿನ ಕೆಳಗೆ ನಿಂತು ಡಿಜೆ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡುತ್ತಾರೆ. ಮೂರು ದಿನಗಳ ಕಾಲ ಹೋಳಿ ಆಚರಣೆ ಬಾಗಲಕೋಟೆ ನಗರ ರಾಜ್ಯದ ಸೆಳೆಯುವಂತೆ ಮಾಡಿದೆ.
ಇದನ್ನೂ ಓದಿ: ಬಾಗಲಕೋಟೆ: ಹೋಳಿ ಹಬ್ಬದ ಹಿನ್ನೆಲೆ ಹಲಗೆ ಮೇಳಕ್ಕೆ ಚಾಲನೆ