ಈನಾಡು ಸುವರ್ಣ ಮಹೋತ್ಸವ ಸಂಭ್ರಮಾಚರಣೆ: LIVE - Eenadu Golden Jubilee

By ETV Bharat Karnataka Team

Published : Aug 10, 2024, 4:23 PM IST

Updated : Aug 10, 2024, 5:34 PM IST

thumbnail
ಹೈದರಾಬಾದ್: ದೇಶದಲ್ಲಿ ಅತೀ ಹೆಚ್ಚು ಓದುಗರನ್ನು ಹೊಂದಿರುವ ತೆಲುಗು ಭಾಷೆಯ 'ಈನಾಡು' ದಿನಪತ್ರಿಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಹೈದರಾಬಾದ್​ನಲ್ಲಿರುವ ಈನಾಡು ಪ್ರಧಾನ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕಚೇರಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.ಈನಾಡು ಕೇವಲ ಸುದ್ದಿ ತಲುಪಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಾಮಾಜಿಕ ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಯಾಗಿ ಬೆಳೆದಿದೆ. ದನಿ ಇಲ್ಲದವರಿಗೆ ಮತ್ತು ಸಂಕಷ್ಟದಲ್ಲಿರುವವರ ವಾಣಿಯಾಗಿ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ತೀರದಲ್ಲಿ ಆಗಸ್ಟ್ 10, 1974 ರಂದು ಈನಾಡು ಪತ್ರಿಕೆ ಆರಂಭವಾಯಿತು. ಆ ಬಳಿಕ ಹಂತಹಂತವಾಗಿ ವಿಸ್ತಾರವಾಗಿ ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಅಕ್ಷರಯೋಧ ರಾಮೋಜಿ ರಾವ್‌ ಅವರ ವಿಚಾರಧಾರೆಗಳಿಗೆ ನಾಂದಿ ಹಾಡಿರುವ ‘ಈನಾಡು’ ಕಾಲಕಾಲಕ್ಕೆ ತಾಜಾತನವನ್ನು ತರುತ್ತಾ ಮಾಹಿತಿ ಕ್ರಾಂತಿಯಾಗಿ ಹೊರಹೊಮ್ಮಿದೆ.4,500 ರ ಪ್ರತಿಗಳೊಂದಿಗೆ ಆರಂಭವಾದ ಪತ್ರಿಕೆ ಈಗ 13 ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟವಾಗುವ ಮಟ್ಟಕ್ಕೆ ತಲುಪಿ ನಂಬರ್ ಒನ್ ತೆಲುಗು ದಿನಪತ್ರಿಕೆಯಾಗಿದೆ.
Last Updated : Aug 10, 2024, 5:34 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.