ದಾವಣಗೆರೆ ಶಂಕರ ಮಠದಲ್ಲಿ ಚಂಡಿಕಾ ಹೋಮ: ಎಸ್ಪಿ ಉಮಾ ಪ್ರಶಾಂತ್ಗೆ ಉಡಿ ತುಂಬಿದ ಉತ್ಸವ ಸಮಿತಿ
Published : Oct 11, 2024, 1:17 PM IST
ದಾವಣಗೆರೆ:ಶ್ರೀ ಮಜ್ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಶಾಖಾ ಮಠದಲ್ಲಿ ಇಂದು ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ನಗರದ ಜಯದೇವ ವೃತ್ತದಲ್ಲಿರುವ ಶಂಕರ ಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರೋತ್ಸವ ಪ್ರಯುಕ್ತ ಚಂಡಿಕಾ ಹೋಮದ ಪೂರ್ಣಾಹುತಿ ಕಾರ್ಯಕ್ರಮ ನಡೆಸಲಾಯಿತು.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ಭಾಗವಹಿಸಿ ಚಂಡಿಕಾ ಹೋಮವನ್ನು ಭಕ್ತಿಯಿಂದ ಕಣ್ತುಂಬಿಕೊಂಡರು. ಬಳಿಕ ನಡೆದ ಸಮಂಗಲಿ ಪೂಜೆಯಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಚಂಡಿಕಾ ಹೋಮ ಮುಗಿದಾದ ಬಳಿಕ ಶಂಕರ ಮಠದ ಉತ್ಸವ ಸಮಿತಿಯವರು ಎಸ್ಪಿ ಉಮಾ ಪ್ರಶಾಂತ್ ಅವರಿಗಾಗಿಯೇ ಸುಮಂಗಲಿ ಪೂಜೆ ನಡೆಸಿದರು.
ಹಿಂದೂ ಧರ್ಮದ ಸಂಪ್ರದಾಯದಂತೆ ಎಸ್ಪಿ ಅವರಿಗೆ ಉಡಿ ತುಂಬಿ ಬಾಗಿನ ನೀಡಲಾಯಿತು, ಮಠದ ಪ್ರಧಾನ ಅರ್ಚಕ ಪವನ್ ಕುಲಕರ್ಣಿ, ಮಾಲತೇಶ್ ನಾಡಿಗೇರ್, ಎಂ. ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಕ್ತಾಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ಹೇಗೆ ನಡೆಯುತ್ತದೆ?