ಫರಿದಾಬಾದ್ ರೈಲ್ವೆ ಕೆಳ ಸೇತುವೆಯಡಿ 10 ಅಡಿ ಮಳೆನೀರು: ಕಾರು ಸಿಲುಕಿ ಇಬ್ಬರು ಯುವಕರ ಸಾವು - Car got stuck two died
Published : Sep 14, 2024, 7:24 PM IST
ಫರಿದಾಬಾದ್: ಹರಿಯಾಣದ ಫರಿದಾಬಾದ್ನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಓಲ್ಡ್ ಫರಿದಾಬಾದ್ ರೈಲ್ವೆ ಅಂಡರ್ ಪಾಸ್ನಲ್ಲಿ ಸುಮಾರು 10 ಅಡಿ ನೀರು ತುಂಬಿದೆ. ಇದನ್ನು ಗಮನಿಸದೇ, ಗುರುಗ್ರಾಮ್ ಎಚ್ಡಿಎಫ್ಸಿ ಬ್ಯಾಂಕ್ ಮ್ಯಾನೇಜರ್ ಹಾಗೂ ಕ್ಯಾಷಿಯರ್ ಶಾರ್ಟ್ ಕಟ್ ತೆಗೆದುಕೊಳ್ಳುವ ಸಲುವಾಗಿ ಅಂಡರ್ಪಾಸ್ಗೆ ಪ್ರವೇಶಿಸಿದ್ದು, ಅಂಡರ್ಪಾಸ್ನ ಮಳೆಯ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗುರುಗ್ರಾಮ್ನಿಂದ ಫರಿದಾಬಾದ್ಗೆ ಬರುತ್ತಿದ್ದ ಅವರು, ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವ ಬಗ್ಗೆ ತಿಳಿಯದೇ, ಶಾರ್ಟ್ಕಟ್ ತೆಗೆದುಕೊಳ್ಳುವ ಸಲುವಾಗಿ ಅಂಡರ್ಪಾಸ್ಗೆ ಕಾರು ನುಗ್ಗಿಸಿದ್ದಾರೆ. ಅಂಡರ್‌ಪಾಸ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾರು ನೀರಿನಲ್ಲಿ ಮುಳುಗಿ ಸ್ವಯಂಚಾಲಿತವಾಗಿ ಲಾಕ್ ಆಗಿದೆ. ಇದರಿಂದ ಕಾರಿನಲ್ಲಿದ್ದ ಯುವಕರಿಬ್ಬರು ಹೊರ ಬರಲಾಗದೇ, ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಕ್ಯಾಷಿಯರ್ ವಿರಾಜ್ ದ್ವಿವೇದಿ ಹಾಗೂ ಬ್ಯಾಂಕ್ ಮ್ಯಾನೇಜರ್ ಪುಣ್ಯ ಶ್ರೇಯ್ ಶರ್ಮಾ ಸಾವನ್ನಪ್ಪಿದವರು.
ರೈಲ್ವೆ ಕೆಳ ಸೇತುವೆ ಬಳಿ ಪೊಲೀಸ್ ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಅಂಡರ್‌ಪಾಸ್‌ನಲ್ಲಿ ವಾಹನಗಳು ಹೋಗದಂತೆ ಎಲ್ಲರಿಗೂ ಸೂಚನೆ ನೀಡಲಾಗಿತ್ತು. ಇಬ್ಬರಿಗೂ ಆ ಮಾರ್ಗವಾಗಿ ಹೋಗದಂತೆ ಪೊಲೀಸರು ನಿಷೇಧ ಹೇರಿದ್ದರು. ಆದರೂ ಇಬ್ಬರೂ ಆ ಮಾರ್ಗವಾಗಿ ತೆರಳಿದ್ದರು. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ನೋಡಿ: ಗುಜರಾತ್ನಲ್ಲಿ ಭಾರಿ ಮಳೆ: ಸರ್ದಾರ್ ಸರೋವರ್ ಅಣೆಕಟ್ಟೆಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - SARDAR SAROVAR DAM