ETV Bharat / technology

ವಾಟ್ಸ್​​ಆ್ಯಪ್​​​ನಲ್ಲಿ ಹಲವು ವೈಶಿಷ್ಟ್ಯಗಳ ಪರಿಚಯ; ಇನ್ಮುಂದೆ ಗ್ರೂಪ್​ ಚಾಟ್​ನಲ್ಲಿ ಕಾಣುತ್ತೆ ಆನ್​ಲೈನ್​ ಸ್ಟೇಟಸ್​! - WHATSAPP NEW FEATURE

WhatsApp New Feature: ಇತ್ತೀಚೆಗೆ, ವಾಟ್ಸಾಪ್‌ನಲ್ಲಿ ಹತ್ತಾರು ಹೊಸ ಫೀಚರ್ಸ್​ಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಅದನ್ನು ಬಳಸುವುದು ಇನ್ನಷ್ಟು ಸುಲಭ ಮತ್ತು ಹೆಚ್ಚು ಮೋಜಿನದ್ದಾಗಿದೆ. ಈ ಹೊಸ ವೈಶಿಷ್ಟ್ಯ ಬಗ್ಗೆ ತಿಳಿಯೋಣ ಬನ್ನಿ.

WHATSAPP NEW CHANNEL FEATURES  WHATSAPP  WHATSAPP NEW CALL FEATURES  WHATSAPP NEW CHAT FEATURES
ವಾಟ್ಸಾಪ್​ನಲ್ಲಿ ಹಲವು ವೈಶಿಷ್ಟ್ಯಗಳು ಪರಿಚಯ (Image Credit: WhatsApp Blog)
author img

By ETV Bharat Tech Team

Published : April 11, 2025 at 2:59 PM IST

3 Min Read

WhatsApp New Feature: ತನ್ನ ಬಳಕೆದಾರರನ್ನು ಆಕರ್ಷಿಸಲು ಮತ್ತು ಹೆಚ್ಚು ಸಂತಸಗೊಳಿಸಲು ವಾಟ್ಸ್​ಆ್ಯಪ್​ ಆಗಾಗ್ಗೆ ಹೊಸ - ಹೊಸ ಫೀಚರ್​​ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಆನ್‌ಲೈನ್ ಇಂಟಿಕೇಟರ್​, ಈವೆಂಟ್ ಅಪ್​ಡೇಟ್ಸ್​, ಹೈಲೈಟ್ ನೋಟಿಫಿಕೇಶನ್​ ಮತ್ತು ಡಾಕ್ಯುಮೆಂಟ್ ಸ್ಕ್ಯಾನಿಂಗ್‌ನಂತಹ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ಬಗ್ಗೆ ತಿಳಿದುಕೊಳ್ಳೊಣ ಬನ್ನಿ.

ವಾಟ್ಸ್​​ಆ್ಯಪ್​​ ಕಾಲಕಾಲಕ್ಕೆ ಅನೇಕ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ, ಈ ವೈಯಕ್ತಿಕ ಮೆಸೇಜಿಂಗ್​ ಆ್ಯಪ್​ ಇಂತಹ ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಇದರ ಬಳಕೆ ಇನ್ನಷ್ಟು ಸುಲಭ ಮತ್ತು ಹೆಚ್ಚು ಮೋಜಿನದಾಗಿದೆ. ನೀವು ಈ ವೈಶಿಷ್ಟ್ಯಗಳನ್ನು ಬಳಸಿದರೆ, WhatsApp ಕೇವಲ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗುವುದಿಲ್ಲ, ನಿಮಗೆ ಬೇರೆಯೇ ಅನುಭವ ನೀಡುತ್ತದೆ.

ವಾಟ್ಸ್​​ಆ್ಯಪ್​​​ನಲ್ಲಿ ಕಾಣುತ್ತೆ ಆನ್​ಲೈನ್​ ಸ್ಟೇಟಸ್​: ವಾಟ್ಸ್​​ಆ್ಯಪ್​ ಹೊಸ ಅಪ್​ಡೇಟ್​ ನಂತರ ಯಾವುದೇ ಗ್ರೂಪ್​ ಚಾಟ್‌ನಲ್ಲಿ ಎಷ್ಟು ಜನರು ಆನ್‌ಲೈನ್‌ನಲ್ಲಿದ್ದಾರೆ ಎಂಬುದನ್ನು ನೀವು ಈಗ ನೋಡಲು ಸಾಧ್ಯವಾಗುತ್ತದೆ. ಇದಕ್ಕೂ ಮೊದಲು ಗ್ರೂಪ್​ನಲ್ಲಿ ಯಾರು ಆನ್‌ಲೈನ್‌ನಲ್ಲಿದ್ದಾರೆಂದು ತಿಳಿದಿರಲಿಲ್ಲ. ಇದು ನಿಮ್ಮ ಗ್ರೂಪ್​ ಚಾಟ್ ಅನುಭವವನ್ನು ಸುಧಾರಿಸುತ್ತದೆ.

ವಾಟ್ಸಾಆ್ಯಪ್​​​ನಲ್ಲಿ ಗ್ರೂಪ್​ ನೋಟಿಫಿಕೇಶನ್​ ಮ್ಯಾನೇಜ್: ನೀವು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಹಳಷ್ಟು ಮೆಸೇಜ್​ಗಳನ್ನು ಸ್ವೀಕರಿಸಿದರೆ ಮತ್ತು ನಿಮಗೆ ಬೇಕಾದ ಸಂದೇಶಗಳನ್ನು ಕಂಡು ಹಿಡಿಯುವುದು ನಿಮಗೆ ತಲೆನೋವಾಗಿದ್ದರೆ, ನೀವು ಹೈಲೈಟ್ ನೋಟಿಫಿಕೇಶನ್​ ಫೀಚರ್​ ಬಳಸಬಹುದು. ಅದನ್ನು ಆನ್ ಮಾಡಿದ ನಂತರ ನಿಮ್ಮನ್ನು ಉಲ್ಲೇಖಿಸಿರುವ ಯಾವುದೇ ಗುಂಪಿನಲ್ಲಿ ಹೈಲೈಟ್ ಮಾಡಲಾದ ನೋಟಿಫಿಕೇಶನ್​ಗಳನ್ನು ನೀವು ಕಾಣುತ್ತೀರಿ. ಇದು ಲಾಂಗ್​ ಗ್ರೂಪ್​ ಚಾಟ್‌ಗಳಲ್ಲಿ ನೀವು ಕೇಳಲು ಬಯಸುವ ಸಂಭಾಷಣೆ ತ್ವರಿತವಾಗಿ ಹುಡುಕಲು ನಿಮಗೆ ಸುಲಭಗೊಳಿಸುತ್ತದೆ.

Tappable Reactions: ಬಳಕೆದಾರರು ಈಗ ಇತರರು ಯಾವ ರೀಯಾಕ್ಷನ್​ ಬಳಸಿದ್ದಾರೆ ಎಂಬುದನ್ನು ನೋಡಬಹುದು ಮತ್ತು ಅದೇ ಪ್ರತಿಕ್ರಿಯೆಯನ್ನು ತಕ್ಷಣವೇ ನೀಡಲು ಆ ರೀಯಾಕ್ಷನ್​ ಅನ್ನು ಟ್ಯಾಪ್ ಮಾಡಬಹುದಾಗಿದೆ.

ಐಫೋನ್‌ಗಾಗಿ ವಾಟ್ಸ್​ಆ್ಯಪ್​​​​ನಲ್ಲಿ ವಿಶೇಷ ವೈಶಿಷ್ಟ್ಯ: ನೀವು ಐಫೋನ್ ಬಳಕೆದಾರರಾಗಿದ್ದರೆ.. ವಾಟ್ಸ್​ಆ್ಯಪ್​ ನಿಮಗಾಗಿ ಒಂದು ವಿಶೇಷ ವೈಶಿಷ್ಟ್ಯವನ್ನು ಸೇರಿಸಿದೆ. ಅಟ್ಯಾಚ್ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು WhatsApp ನಿಂದ ಡೈರೆಕ್ಟ್​ ಆಗಿ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತದೆ. ಅಟ್ಯಾಚ್​ ಮಾಡಲಾದ ಫೈಲ್​ ಅನ್ನು ನೀವು ಟ್ಯಾಪ್ ಮಾಡಿದಾಗ ನಿಮಗೆ ಸ್ಕ್ಯಾನ್ ಡಾಕ್ಯುಮೆಂಟ್ ಎಂಬ ಆಯ್ಕೆ ಸಿಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದು ಗಮನಾರ್ಹ..

ಡೀಫಾಲ್ಟ್ ಅಪ್ಲಿಕೇಶನ್ ಆಗಿ ಮಾಡಿ ವಾಟ್ಸ್​ಆ್ಯಪ್​: ಐಫೋನ್ ಬಳಕೆದಾರರು ಈಗ ವಾಟ್ಸ್​ಆ್ಯಪ್​ ಅನ್ನು ತಮ್ಮ ಡೀಫಾಲ್ಟ್ ಮೆಸೇಜಿಂಗ್ ಮತ್ತು ಕಾಲಿಂಗ್​ ಅಪ್ಲಿಕೇಶನ್ ಆಗಿ ಬಳಸಬಹುದು. ಬಳಕೆದಾರರು ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಈ ಸೆಟ್ಟಿಂಗ್ ಅನ್ನು ಆನ್ ಮಾಡಬಹುದು. ನಂತರ ಅವರ ಐಫೋನ್‌ನಲ್ಲಿ ವಾಟ್ಸ್​ಆ್ಯಪ್​ ಡೀಫಾಲ್ಟ್ ಕಾಲಿಂಗ್​ ಮತ್ತು ಮೆಸೇಜ್​ ಕಳುಹಿಸುವ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತದೆ. ಐಫೋನ್‌ನಲ್ಲಿ ವಾಟ್ಸ್​ಆ್ಯಪ್​ ಹೆಚ್ಚಾಗಿ ಬಳಸುವ ಬಳಕೆದಾರರಿಗೆ ಇದು ಅನುಕೂಲಕರವಾಗಿರುತ್ತದೆ. ಇದಾದ ನಂತರ, ಅವರ ಕರೆ ಮತ್ತು ಸಂದೇಶ ಕಳುಹಿಸುವ ಕೆಲಸವು ವಾಟ್ಸ್​​ಆ್ಯಪ್​​ ಅಪ್ಲಿಕೇಶನ್ ಮೂಲಕ ಮಾತ್ರ ಮಾಡಲಾಗುತ್ತದೆ.

ವಿಡಿಯೋ ಕಾಲ್ಸ್​ಗೆ ಜೂಮ್ ಆಪ್ಶನ್​: ನೀವು ಐಫೋನ್ ಬಳಕೆದಾರರಾಗಿದ್ದರೆ ನಿಮ್ಮ ಸ್ವಂತ ಅಥವಾ ನಿಮ್ಮ ಗೆಳೆಯರ ವಿಡಿಯೋ ಹತ್ತಿರದಿಂದ ನೋಡಲು ನೀವು ವಿಡಿಯೋ ಕಾಲ್​ನಲ್ಲಿದ್ದಾಗ ಜೂಮ್​ ಮಾಡಬಹುದು.

ಚಾಟ್‌ನಿಂದ ಕಾಲ್​ ಆ್ಯಡ್​ ಮಾಡಿ: ಚಾಟ್ ಥ್ರೆಡ್‌ನಿಂದ ನೇರವಾಗಿ ನಡೆಯುತ್ತಿರುವ 1:1 ಕರೆಗೆ ಯಾರನ್ನಾದರೂ ಸೇರಿಸಲು ನೀವು ಬಯಸಿದರೆ, ಮೇಲ್ಭಾಗದಲ್ಲಿರುವ ಕಾಲ್​ ಐಕಾನ್ ಟ್ಯಾಪ್ ಮಾಡಿ ಮತ್ತು 'Add to Call' ಆಯ್ಕೆಮಾಡಿ.

ವಿಡಿಯೋ ಕರೆಗಳು ಸುಲಭ: ವಾಟ್ಸ್​​ಆ್ಯಪ್​ ಈಗ ತನ್ನ ವಿಡಿಯೋ ಕಾಲ್​ ಟೆಕ್ನಾಲಜಿ ಹೆಚ್ಚು ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ್ದಾಗಿ ಅಪ್​ಡೇಟ್​ ಮಾಡಿದೆ. ಕಂಪನಿಯ ರೂಟಿಂಗ್ ವ್ಯವಸ್ಥೆಯು ಡ್ರಾಪ್ಡ್ ಕಾಲ್ಸ್​ ಮತ್ತು ವಿಡಿಯೋ ಫ್ರೀಜಿಂಗ್ ಅನ್ನು ಕಡಿಮೆ ಮಾಡಲು ಉತ್ತಮ ಸಂಪರ್ಕ ಮಾರ್ಗವನ್ನು ಕಂಡುಕೊಳ್ಳುತ್ತದೆ. ಈ ವರ್ಧಿತ ಬ್ಯಾಂಡ್‌ವಿಡ್ತ್ ಪತ್ತೆ ಮಾಡಿ ನಿಮ್ಮ ವಿಡಿಯೋ ಕರೆಗಳನ್ನು HD ಗುಣಮಟ್ಟಕ್ಕೆ ಅಪ್‌ಗ್ರೇಡ್ ಮಾಡಲು ಸಹಾಯ ಮಾಡುತ್ತದೆ.

ಚಾನೆಲ್‌ಗಳಿಗಾಗಿ ವಿಡಿಯೋ ನೋಟ್ಸ್​: WhatsApp ಚಾನೆಲ್ ನಿರ್ವಾಹಕರು ಈಗ ತಮ್ಮ ಫಾಲೋವರ್ಸ್​ನೊಂದಿಗೆ ಶಾರ್ಟ್​ ವಿಡಿಯೋಗಳನ್ನು (60 ಸೆಕೆಂಡುಗಳವರೆಗೆ ಸೀಮಿತ) ತಕ್ಷಣ ರೆಕಾರ್ಡ್ ಮಾಡಬಹುದು ಮತ್ತು ಶೇರ್​ ಮಾಡಿಕೊಳ್ಳಬಹುದು.

ಚಾನೆಲ್‌ಗಳಲ್ಲಿನ ಟ್ರಾನ್ಸ್​ಸ್ಕ್ರಿಪ್ಟ್ಸ್​: ಚಾಟ್‌ಗಳಂತೆಯೇ, ಬಳಕೆದಾರರು ಆತುರದಲ್ಲಿದ್ದಾಗ ಮತ್ತು ಸಂದೇಶವನ್ನು ಕೇಳಲು ಸಾಧ್ಯವಾಗದಿದ್ದಾಗ WhatsApp ಚಾನೆಲ್‌ಗಳಲ್ಲಿ ಧ್ವನಿ ಸಂದೇಶಗಳ ಲಿಖಿತ ಸಾರಾಂಶವನ್ನು ಈಗ ಪಡೆಯಬಹುದು.

QR ಕೋಡ್‌ಗಳು: WhatsApp ಚಾನೆಲ್ ನಿರ್ವಾಹಕರು ಈಗ QR ಕೋಡ್ ಅನ್ನು ಹಂಚಿಕೊಳ್ಳಬಹುದು. ಇದು ಹೊಸ ಬಳಕೆದಾರರನ್ನು ತಮ್ಮ ಚಾನಲ್‌ಗೆ ನಿರ್ದೇಶಿಸುತ್ತದೆ. ನಿರ್ವಾಹಕರು ತಮ್ಮ ಪ್ರೇಕ್ಷಕರನ್ನು ಸುಲಭವಾಗಿ ಶೇರ್​ ಮಾಡಲು ಮತ್ತು ಬೆಳೆಸಲು ಅನುವು ಮಾಡಿಕೊಡುತ್ತದೆ.

ಓದಿ: ಎಕ್ಸ್ ​200 ಸೀರಿಸ್​, ಹೊಸ ಟ್ಯಾಬ್ಲೆಟ್ಸ್​, ಸ್ಮಾರ್ಟ್​ವಾಚ್​ ಬಿಡುಗಡೆಗೆ ಸಜ್ಜುಗೊಂಡಿದೆ ವಿವೋ! ಯಾವಾಗ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.