ETV Bharat / technology

ಚಾಟ್​ ಲೀಕ್, ಕಿರಿಕಿರಿ ಮೆಸೇಜ್‌ಗೆ​ ಫುಲ್​ ಸ್ಟಾಪ್​! ವಾಟ್ಸ್‌ಆ್ಯಪ್​ನಿಂದ ಹೊಸ ಫೀಚರ್ಸ್​, ಹೀಗೆ ಆ್ಯಕ್ಟಿವೇಟ್‌​ ಮಾಡಿ - WHATSAPP NEW PRIVACY FEATURES

WhatsApp New Privacy Features: ವಾಟ್ಸ್‌ಆ್ಯಪ್​ ತನ್ನ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕೆಲವು ಪ್ರೈವೈಸಿ ಫೀಚರ್​ಗಳನ್ನು ಪರಿಚಯಿಸಿದೆ.

BLOCK UNKNOWN ACCOUNT MESSAGES  ADVANCED CHAT PRIVACY  WHATSAPP NEW FEATURES  WHATSAPP SETTINGS
ವಾಟ್ಸ್‌ಆ್ಯಪ್ ಹೊಸ ಫೀಚರ್​ ತಿಳಿಯಿರಿ. (WhatsApp Blog)
author img

By ETV Bharat Tech Team

Published : April 25, 2025 at 3:23 PM IST

2 Min Read

WhatsApp New Privacy Features: ನೀವು ವಾಟ್ಸ್‌ಆ್ಯಪ್‌​ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಕಿರುಕುಳ ನೀಡುವ ಸಂದೇಶಗಳನ್ನು ಸ್ವೀಕರಿಸುತ್ತಿದ್ದರೆ ಮತ್ತು ನಿಮ್ಮ ಚಾಟ್​ಗಳು ಹೊರಗಡೆ ಶೇರ್​ ಆಗುತ್ತಿದ್ದರೆ, ಇದಕ್ಕೆ ಕಡಿವಾಣ ಹಾಕಲು ವಾಟ್ಸ್‌ಆ್ಯಪ್​ ಕೆಲವು ಫೀಚರ್​ಗಳನ್ನು ಪರಿಚಯಿಸಿದೆ. ಈ ಫೀಚರ್​ಗಳನ್ನು​ ಆ್ಯಕ್ಟಿವೇಟ್‌ ಮಾಡುವ ಮೂಲಕ ನೀವು ಅವರನ್ನು ಸುಲಭವಾಗಿ ಬ್ಲಾಕ್​ ಮಾಡಬಹುದು ಮತ್ತು ನಿಮ್ಮ ಚಾಟ್​ ಶೇರ್ ಆಗದಂತೆ ಎಚ್ಚರ ವಹಿಸಬಹುದು.

'ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ'ಯನ್ನು ಬಿಡುಗಡೆ ಮಾಡುವುದರೊಂದಿಗೆ ವಾಟ್ಸ್‌ಆ್ಯಪ್ ತನ್ನ ಪ್ರೈವೆಸಿ-ಸೆಂಟರ್ಡ್ ವೈಶಿಷ್ಟ್ಯಗಳ ವಿಸ್ತರಣೆಯನ್ನು ಘೋಷಿಸಿದೆ. ಒನ್-ಆನ್-ಒನ್ ಮತ್ತು ಗ್ರೂಪ್ ಚಾಟ್‌ ಎರಡರಲ್ಲೂ ಇದು ಲಭ್ಯ. ಹೊಸ ಪ್ರೈವೆಸಿ ಫೀಚರ್​ ಇತರರು ವಾಟ್ಸ್‌ಆ್ಯಪ್‌ನ ಹೊರಗೆ ವಿಷಯವನ್ನು ತೆಗೆದುಕೊಳ್ಳುವುದನ್ನು ತಡೆಯುವ ಗುರಿ ಹೊಂದಿದೆ.

ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ ಬಳಕೆದಾರರಿಗೆ ಚಾಟ್‌ಗಳನ್ನು ಶೇರ್​ ಮಾಡುವುದನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ. ನೀವು ಇತರ ಬಳಕೆದಾರರ ಫೋನ್‌ಗಳಿಗೆ ಕಳುಹಿಸುವ ಫೋಟೋಗಳು ಅಥವಾ ವಿಡಿಯೋಗಳಂತಹ ಮಾಧ್ಯಮ ಫೈಲ್‌ಗಳ ಸೆಲ್ಫ್​-ಡೌನ್‌ಲೋಡ್ ಅನ್ನೂ ಸಹ ಇದು ನಿರ್ಬಂಧಿಸುತ್ತದೆ. ಹೆಚ್ಚುವರಿಯಾಗಿ ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ ವೈಶಿಷ್ಟ್ಯವು AI ವೈಶಿಷ್ಟ್ಯಗಳಿಗಾಗಿ (ಮೆಟಾ AI) ನಿಮ್ಮ ಸಂದೇಶಗಳ ಬಳಕೆಯನ್ನೂ ಸಹ ನಿಲ್ಲಿಸುತ್ತದೆ.

ಹೊಸ ಸುಧಾರಿತ ಚಾಟ್ ಗೌಪ್ಯತೆ ವೈಶಿಷ್ಟ್ಯವು ಬಳಕೆದಾರರಿಗೆ ಅವರ ಸಂಭಾಷಣೆಯನ್ನು ಪ್ಲಾಟ್‌ಫಾರ್ಮ್‌ನ ಹೊರಗೆ ಹಂಚಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಭರವಸೆ ನೀಡುತ್ತದೆ ಅಂತಾ ವಾಟ್ಸ್‌ಆ್ಯಪ್ ಹೇಳುತ್ತದೆ. ನಿಮಗೆ ಎಲ್ಲರ ಪರಿಚಯ ಬಹಳ ಇರುವುದಿಲ್ಲ. ಆದರೆ ನೀವು ಕೆಲವು ಸೂಕ್ಷ್ಮವಾಗಿರುವ ವಿಷಯಗಳನ್ನು ಚರ್ಚಿಸಲು ಬಯಸುವ ಗ್ರೂಪ್​ನಲ್ಲಿ ಈ ಫೀಚರ್​ ಹೆಚ್ಚು ಸಹಾಯಕವಾಗಿರುತ್ತದೆ ಎಂದು ಅದು ವಾಟ್ಸ್‌ಆ್ಯಪ್ ಹೇಳಿದೆ.

ಉದಾಹರಣೆಗೆ, ಸಪೋರ್ಟ್​ ಗ್ರೂಪ್​ನಲ್ಲಿ ಆರೋಗ್ಯ ಸವಾಲುಗಳ ಬಗ್ಗೆ ಮಾತನಾಡುವುದು ಅಥವಾ ನಿಮಗೆ ಮುಖ್ಯವಾದ ವಿಷಯದ ಬಗ್ಗೆ ಸಮುದಾಯವನ್ನು ಸಂಘಟಿಸುವುದು ಎಂದು ವಾಟ್ಸ್‌ಆ್ಯಪ್​ ಹೇಳಿದೆ.

ಅಡ್ವಾನ್ಸ್ಡ್ ಚಾಟ್ ಪ್ರೈವೆಸಿ ವೈಶಿಷ್ಟ್ಯವು ವಾಟ್ಸ್‌ಆ್ಯಪ್‌ನ ಇತ್ತೀಚಿನ ಆವೃತ್ತಿಯಲ್ಲಿ ಎಲ್ಲರಿಗೂ ಲಭ್ಯವಾಗಲು ಪ್ರಾರಂಭಿಸಿದೆ. ಬಳಕೆದಾರರು ಚಾಟ್ ನೇಮ್​ ಟ್ಯಾಪ್ ಮಾಡುವ ಮೂಲಕ ಮತ್ತು ನಂತರ ಸುಧಾರಿತ ಚಾಟ್ ಪ್ರೈವೆಸಿಯನ್ನು ಟ್ಯಾಪ್ ಮಾಡುವ ಮೂಲಕ ಅದನ್ನು ಆ್ಯಕ್ಟಿವ್​ಗೊಳಿಸಬಹುದು.

ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಸಂದೇಶಗಳು ಬರುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ಈ ಸಂದೇಶಗಳು ತುಂಬಾ ಹೆಚ್ಚಾಗಿರುವುದರಿಂದ ಅವು ತಲೆನೋವು ಉಂಟುಮಾಡುತ್ತವೆ. ಆದರೆ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಈ ಕಿರಿಕಿರಿ ಸಂದೇಶಗಳನ್ನು ಆಟೋಮೆಟಿಕ್​ ಆಗಿ ಬ್ಲಾಕ್​ ಮಾಡುವ ವಿಶಿಷ್ಟ ವೈಶಿಷ್ಟ್ಯವಿದೆ. ಅದರ ಬಗ್ಗೆ ತಿಳಿಯೋಣ.

ವಾಟ್ಸ್‌ಆ್ಯಪ್ ಇತ್ತೀಚೆಗೆ 'Block Unknown Account Messages' ಎಂಬ ಗೌಪ್ಯತೆ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಅಪರಿಚಿತ ಸಂಖ್ಯೆಯು ನಿಮಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿದಾಗ ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಿದೆ. ಮೊದಲು ಈ ರೀತಿ ಏನೂ ಇರಲಿಲ್ಲ, ಆದರೆ ಈಗ ಈ ವೈಶಿಷ್ಟ್ಯದ ಮೂಲಕ ನೀವು ಈ ತೊಂದರೆದಾಯಕ ಸಂದೇಶಗಳನ್ನು ಸುಲಭವಾಗಿ ತೊಡೆದುಹಾಕಬಹುದು.

ಈ ವೈಶಿಷ್ಟ್ಯವನ್ನು ಆ್ಯಕ್ಟಿವೇಟ್​ ಮಾಡುವುದು ಹೇಗೆ?

  • ಮೊದಲಿಗೆ, ನಿಮ್ಮ ವಾಟ್ಸ್‌ಆ್ಯಪ್ ಅಪ್ಲಿಕೇಶನ್ ಓಪನ್​ ಮಾಡಿ.
  • ನಂತರ ಬಲಭಾಗದಲ್ಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
  • ಈಗ ಪ್ರೈವೆಸಿ ಆಪ್ಶನ್​ ಮೇಲೆ ಕ್ಲಿಕ್ ಮಾಡಿ.
  • ನೀವು ಕೆಳಗೆ ಸ್ಕ್ರಾಲ್ ಮಾಡಿದಾಗ ನಿಮಗೆ ಅಡ್ವಾನ್ಸ್ಡ್​ ಆಪ್ಶನ್​ ಕಾಣಿಸುತ್ತದೆ. ನೀವು ಇಲ್ಲಿ ಕ್ಲಿಕ್ ಮಾಡಿದ ತಕ್ಷಣ, ‘Block Unknown Account Messages’ ವೈಶಿಷ್ಟ್ಯವು ಗೋಚರಿಸುತ್ತದೆ.
  • ಆಗ ಅದನ್ನು ಆ್ಯಕ್ಟಿವೇಟ್​ ಮಾಡಿ.

ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಾಗ ಯಾವುದೇ ಅಪರಿಚಿತ ಸಂಖ್ಯೆಯಿಂದ ಪುನರಾವರ್ತಿತ ಸಂದೇಶಗಳು ನಿಮಗೆ ತೊಂದರೆ ಉಂಟುಮಾಡುವುದಿಲ್ಲ. ಈ ವೈಶಿಷ್ಟ್ಯವು ನಿಮ್ಮ ವಾಟ್ಸ್‌ಆ್ಯಪ್ ಅನ್ನು ಇನ್ನಷ್ಟು ಸುರಕ್ಷಿತ ಮತ್ತು ಆರಾಮದಾಯಕವಾಗಿಸುತ್ತದೆ.

ಆದ್ದರಿಂದ ಮುಂದಿನ ಬಾರಿ ಯಾವುದೇ ಅಪರಿಚಿತ ಸಂಖ್ಯೆಯು ನಿಮಗೆ ನಿರಂತರವಾಗಿ ತೊಂದರೆ ನೀಡುವ ಸಂದೇಶಗಳನ್ನು ಕಳುಹಿಸುತ್ತಿದ್ದರೆ ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದಾಗಿದೆ.

ಇದನ್ನೂ ಓದಿ: ಐಫೋನ್​ ಕ್ರೇಜ್​, ಸೂಪರ್​​ ಸೇಲ್​: ಭಾರತದಲ್ಲಿ ಮತ್ತೆರಡು ಆ್ಯಪಲ್​ ಸ್ಟೋರ್ ತೆರೆಯಲು ಕಂಪನಿ ಬಿಗ್​ ಪ್ಲಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.