ETV Bharat / technology

ಏನಿದು ಕೇಂದ್ರ ಸರ್ಕಾರದ ಮಿಷನ್​ ಮೌಸಂ, ಉಪಯೋಗವೇನು?: ಎಐ-ಮಷಿನ್​ ಲರ್ನಿಂಗ್​ನಿಂದ ಹೇಗೆ ಕೆಲಸ ಮಾಡುತ್ತೆ - Mission Mausam

Mission Mausam: ನಿಖರವಾದ ಮುನ್ಸೂಚನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮಷಿನ್​ ಲರ್ನಿಂಗ್​ನಂತಹ ಅತ್ಯಾಧುನಿಕ ಸಾಧನಗಳನ್ನು ಬಳಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮಿಷನ್ ಮೌಸಂ’ ಹೆಸರಿನಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಸಾವಿರ ಕೋಟಿ ರೂ.ಗಳಿಂದ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕೆ ಸಿದ್ಧಪಡಿಸಲಾಗಿದೆ.

author img

By ETV Bharat Tech Team

Published : Sep 15, 2024, 4:44 AM IST

AI AND MACHINE LEARNING  WEATHER MANAGEMENT  ARTIFICIALLY DEVELOP CLOUDS  SATELLITES SUPERCOMPUTERS
ಏನಿದು ಕೇಂದ್ರ ಸರ್ಕಾರದ ಮಿಷನ್​ ಮೌಸಂ (ETV Bharat)

Mission Mausam: ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಅನಿರೀಕ್ಷಿತ ಹವಾಮಾನವನ್ನು ಉಂಟುಮಾಡುತ್ತಿದೆ. ಇಂತಹ ಘಟನೆಗಳನ್ನು ಮೊದಲೇ ಪತ್ತೆ ಹಚ್ಚಲು ಮತ್ತು ನಿಖರವಾದ ಮುನ್ಸೂಚನೆಗಳನ್ನು ನೀಡಲು ಭಾರತ ಸಜ್ಜಾಗಿದೆ. ಈ ಉದ್ದೇಶಕ್ಕಾಗಿ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್​ ಲರ್ನಿಂಗ್​ನಂತಹ ಸುಧಾರಿತ ಸಾಧನಗಳನ್ನು ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಮಿಷನ್ ಮೌಸಂ’ ಹೆಸರಿನಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಸಾವಿರ ಕೋಟಿ ರೂ.ಗಳಿಂದ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕೆ ಸಿದ್ಧಪಡಿಸಲಾಗಿದೆ.

ಭೂವಿಜ್ಞಾನ ಸಚಿವಾಲಯದ ಪ್ರಕಾರ, ಹವಾಮಾನ ಪ್ರಕ್ರಿಯೆಗಳ ಸಂಕೀರ್ಣತೆ ಮತ್ತು ಪ್ರಸ್ತುತ ವೀಕ್ಷಣೆ ಹಾಗೂ ಮಾಡೆಲಿಂಗ್ ಪ್ರಕ್ರಿಯೆಗಳಲ್ಲಿನ ಮಿತಿಗಳಿಂದಾಗಿ, ಉಷ್ಣವಲಯದ ಹವಾಮಾನವನ್ನು ಮುನ್ಸೂಚಿಸುವುದು ಒಂದು ಸವಾಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಸ್ತಾರವಾದ ವೀಕ್ಷಣಾ ದತ್ತಾಂಶದ ಕೊರತೆ ಮತ್ತು ನ್ಯೂಮರಿಕಲ್​ ವೆದರ್ ಪ್ರಿಡಿಕ್ಷನ್​ (NWP) ವ್ಯಾಪ್ತಿಯು ಕೇವಲ 12 ಕಿಮೀ ಅಲ್ಪಾವಧಿಯ ಹವಾಮಾನ ಬದಲಾವಣೆಯನ್ನು ಊಹಿಸಲು ಸವಾಲಾಗಿದೆ. ಅತಿವೃಷ್ಟಿಯಿಂದ ಪ್ರವಾಹ, ಅನಾವೃಷ್ಟಿ, ಮೇಘಸ್ಫೋಟ, ಗುಡುಗು ಮತ್ತು ಪ್ರವಾಹವನ್ನು ಊಹಿಸಲು ಅಸಾಧ್ಯವಾಗುತ್ತಿದೆ.

ಉಪಗ್ರಹಗಳು, ಸೂಪರ್ ಕಂಪ್ಯೂಟರ್: ಇಂತಹ ಸಂಕೀರ್ಣ ಹವಾಮಾನ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಮೇಲ್ಮೈ ಹವಾಮಾನ ಪ್ರಕ್ರಿಯೆಗಳ ಸಂಪೂರ್ಣ ತಿಳಿವಳಿಕೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ನಂಬುತ್ತದೆ. ಇದಕ್ಕಾಗಿ ಎನ್​ಡಬ್ಲ್ಯುಪಿ ವ್ಯಾಪ್ತಿಯನ್ನು ಆರು ಕಿ.ಮೀ.ಗೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯಾಚರಣೆಯು ಕೃತಕ ಮೋಡಗಳನ್ನು ಅಭಿವೃದ್ಧಿಪಡಿಸಲು ಪ್ರಯೋಗಾಲಯವನ್ನು ಒಳಗೊಂಡಿರುತ್ತದೆ. ಅಸ್ತಿತ್ವದಲ್ಲಿರುವ ರಾಡಾರ್‌ಗಳು, ಹೊಸ ಉಪಗ್ರಹ ವ್ಯವಸ್ಥೆಗಳು ಮತ್ತು ಸೂಪರ್‌ ಕಂಪ್ಯೂಟರ್‌ಗಳನ್ನು ವರ್ಧಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಹಂತಗಳಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಕ್ಲೌಡ್ ಚೇಂಬರ್ ಸ್ಥಾಪನೆ: ಮೊದಲ ಹಂತದ ಭಾಗವಾಗಿ ವೀಕ್ಷಣಾಲಯ ಜಾಲವನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲಾಗುವುದು. ಇವುಗಳಲ್ಲಿ ಸುಮಾರು 70 ಡಾಪ್ಲರ್ ರಾಡಾರ್‌ಗಳು, ಸೂಪರ್ ಕಂಪ್ಯೂಟರ್‌ಗಳು, 10 ವಿಂಡ್ ಪ್ರೊಫೈಲರ್‌ಗಳು ಮತ್ತು 10 ರೇಡಿಯೊಮೀಟರ್‌ಗಳನ್ನು ಅಳವಡಿಸಲಾಗುವುದು. ಭಾರತೀಯ ಹವಾಮಾನ ಇಲಾಖೆಯು ಇಲ್ಲಿಯವರೆಗೆ 39 ಡಾಪ್ಲರ್ ರಾಡಾರ್‌ಗಳನ್ನು ಸ್ಥಾಪಿಸಿದೆ. ಆದರೆ, ವಿಂಡ್ ಪ್ರೊಫೈಲರ್‌ಗಳು ಲಭ್ಯವಿಲ್ಲ. ಎರಡನೇ ಹಂತದಲ್ಲಿ, ವೀಕ್ಷಣಾಲಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹಗಳು ಮತ್ತು ವಿಮಾನಗಳನ್ನು ಬಳಸಲಾಗುತ್ತದೆ. ತಾಪಮಾನ ಹೆಚ್ಚಾದಂತೆ ಮೋಡಗಳಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಪುಣೆಯ ಭಾರತೀಯ ಹವಾಮಾನ ಸಂಸ್ಥೆ (ಐಐಟಿಎಂ) ನಲ್ಲಿ ಕ್ಲೌಡ್ ಚೇಂಬರ್ ಸ್ಥಾಪಿಸಲಾಗುವುದು. ಇದು ಮುಂದಿನ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ.

ನೌಕಾಸ್ಟ್ ಸಮಯ ಸುಧಾರಣೆಗೆ ಒತ್ತು: ಒಟ್ಟಾರೆಯಾಗಿ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಗಳ ನಿಖರತೆಯನ್ನು ಐದರಿಂದ ಹತ್ತು ಪ್ರತಿಶತದಷ್ಟು ಹೆಚ್ಚಿಸುವ ಗುರಿಯೊಂದಿಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಿಗೆ ಹವಾಮಾನ ಮುನ್ಸೂಚನೆಗಳ ವಿತರಣೆಯನ್ನು ಸಹ ಒಳಗೊಂಡಿದೆ. ಇದು ಕೃಷಿಗೆ ಅಗತ್ಯವಾದ ನಿಖರವಾದ ಮುನ್ಸೂಚನೆಗಳನ್ನು ಒದಗಿಸುವ ನಿರೀಕ್ಷೆಯಿದೆ. ಪ್ರಸ್ತುತ ಮುನ್ಸೂಚನೆಯನ್ನು ಬದಲಿಸಲು ನೌಕಾಸ್ಟ್ (ಇನ್‌ಸ್ಟಂಟ್ ಎಸ್ಟಿಮೇಟ್ಸ್) ವ್ಯವಸ್ಥೆಯನ್ನು ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ತರಲಾಗುವುದು. ನೌಕಾಸ್ಟ್ ಅನ್ನು ಮೂರು ಗಂಟೆಗಳ ಮೊದಲು ನೀಡಲಾಗುತ್ತದೆ. ಆದರೆ, ಈಗ ಅದನ್ನು ಒಂದು ಗಂಟೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.

ಭಾರತದ ಹವಾಮಾನ ಇಲಾಖೆ (IMD), ಉಷ್ಣವಲಯದ ಹವಾಮಾನ ಶಾಸ್ತ್ರದ ಕೇಂದ್ರ (IITM) ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ಕೇಂದ್ರ (NCMRWF) ಜಂಟಿಯಾಗಿ ಹವಾಮಾನ ಬದಲಾವಣೆ ಮುನ್ಸೂಚನೆಗಳ ಸಮರ್ಥ ತಿಳುವಳಿಕೆ ಮತ್ತು ನಿರ್ವಹಣೆಗಾಗಿ ಈ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುತ್ತವೆ.

ಓದಿ: ಆದಷ್ಟು ಬೇಗ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಕಿಯಾ ಕಾರ್ನಿವಲ್, ಬುಕ್ಕಿಂಗ್​ ಆರಂಭ, ಬೆಲೆ ಎಷ್ಟು!? - New Kia Carnival Booking Starts

ETV Bharat Logo

Copyright © 2024 Ushodaya Enterprises Pvt. Ltd., All Rights Reserved.