Vodafone idea 5g Service in Bengaluru: ವೊಡಾಫೋನ್-ಐಡಿಯಾ (Vi) ಈಗ ಬೆಂಗಳೂರಿನಲ್ಲಿ 5G ಸೇವೆ ಪ್ರಾರಂಭಿಸಿದೆ. ಇತ್ತೀಚೆಗೆ ದೆಹಲಿ, NCR, ಚಂಡೀಗಢ, ಮುಂಬೈ ಮತ್ತು ಪಾಟ್ನಾದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಪ್ರಾರಂಭಿಸಿತ್ತು. ಇದು ದೇಶಾದ್ಯಂತ 5G ರೋಲ್‌ಔಟ್ ಅನ್ನು ವೇಗಗೊಳಿಸುವ ಕಾರ್ಯತಂತ್ರದ ಭಾಗವಾಗಿದೆ. ಆಗಸ್ಟ್ 2025ರ ವೇಳೆಗೆ 5G ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿರುವ ಎಲ್ಲಾ 17 ಪ್ರಾಥಮಿಕ ವಲಯಗಳಲ್ಲಿ 5G ರೋಲ್‌ಔಟ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ವಿಐ ಹೊಂದಿದೆ.
ವೊಡಾಫೋನ್ ಐಡಿಯಾ ತನ್ನ 5G ಸೇವೆಯನ್ನು ಸಾಮಾನ್ಯ ಬಳಕೆದಾರರು ಮತ್ತು ವ್ಯವಹಾರಗಳಿಗೆ ವೇಗದ ಇಂಟರ್ನೆಟ್, ಕಡಿಮೆ ಸಮಯ ಮತ್ತು ಉತ್ತಮ ಸಂಪರ್ಕ ಒದಗಿಸಲು ವಿನ್ಯಾಸಗೊಳಿಸಿದೆ.
ಬೆಂಗಳೂರಿನ ಗ್ರಾಹಕರು 5G-ರೆಡಿ ಫೋನ್‌ಗಳನ್ನು ಹೊಂದಿದ್ದು, ರೂ.299ರಿಂದ ಪ್ರಾರಂಭವಾಗುವ ಯೋಜನೆಗಳೊಂದಿಗೆ ರೀಚಾರ್ಜ್ ಮಾಡುತ್ತಾರೆ. ಅವರು ವಿಶೇಷ ಪರಿಚಯಾತ್ಮಕ ಕೊಡುಗೆಯ ಅಡಿಯಲ್ಲಿ ಅನ್ಲಿಮಿಟೆಡ್ 5G ಡೇಟಾ ಬಳಸಬಹುದು. ವಿಡಿಯೋ ಸ್ಟ್ರೀಮಿಂಗ್, ಆನ್‌ಲೈನ್ ಗೇಮ್ಸ್, ವಿಡಿಯೋ ಕಾಲ್ಸ್ ಮತ್ತು ಕ್ಲೌಡ್-ಪವರ್ಡ್ ಅಪ್ಲಿಕೇಶನ್‌ಗಳನ್ನು ಬಳಸುವುದೂ ಸೇರಿದಂತೆ ಸ್ಪೀಡ್ ಇಂಟರ್ನೆಟ್ ಅಗತ್ಯವಿರುವ ಚಟುವಟಿಕೆಗಳನ್ನು ನಿರ್ವಹಿಸಲು 5G ಸೇವೆಯನ್ನು ವಿನ್ಯಾಸಗೊಳಿಸಲಾಗಿದೆ.
Vodafone Idea with Samsung successfully launches 5G, 4G and 2G commercial services in Bengaluru in India, following Chandigarh and Patna launches in April. pic.twitter.com/gr0wgtwmHe
— Samsung Networks (@SamsungNetworks) June 11, 2025
ತಂತ್ರಜ್ಞಾನ ಮತ್ತು ಡಿಜಿಟಲ್ ಅಭಿವೃದ್ಧಿಗೆ ಹೆಸರುವಾಸಿಯಾದ ಬೆಂಗಳೂರಿನಲ್ಲಿ ವೋಡಾಫೋನ್ ಐಡಿಯಾ 5G ಪ್ರಾರಂಭಿಸಲು ಸಂತೋಷವಾಗುತ್ತಿದೆ ಎಂದು ವೊಡಾಫೋನ್ ಐಡಿಯಾದ ಕರ್ನಾಟಕದ ವ್ಯವಹಾರ ಮುಖ್ಯಸ್ಥ ಆನಂದ್ ದಾನಿ ಹೇಳಿದ್ದಾರೆ. ತಮ್ಮ ಹೊಸ 5G ಮತ್ತು ಸುಧಾರಿತ 4G ನೆಟ್‌ವರ್ಕ್‌ನೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಕಂಪನಿ ಬಯಸುತ್ತದೆ ಎಂದಿದ್ದಾರೆ.
ವೊಡಾಫೋನ್ ಐಡಿಯಾ ಸ್ಯಾಮ್‌ಸಂಗ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಇಂಧನ ದಕ್ಷತಾ ಮೂಲಸೌಕರ್ಯ ಮತ್ತು AI-ಚಾಲಿತ ಸೆಲ್ಫ್-ಆರ್ಗೈಜಿಂಗ್ ನೆಟ್‌ವರ್ಕ್ (SON) ಎಂಬ ಸ್ಮಾರ್ಟ್ ತಂತ್ರಜ್ಞಾನವನ್ನು ಸ್ಥಾಪಿಸುತ್ತದೆ. ಇದು ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಆಟೋಮೆಟಿಕ್ ಆಗಿ ಸುಧಾರಿಸುತ್ತದೆ. ನೆಟ್‌ವರ್ಕ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡಲು ವಿವಿಧ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡುವ ಶಕ್ತಿಶಾಲಿ, ಬಹುತಂತ್ರಜ್ಞಾನ ರೇಡಿಯೋಗಳನ್ನು ಅವರು ಬಳಸುತ್ತಿದ್ದಾರೆ.
ಸ್ಯಾಮ್ಸಂಗ್ ಸಹಯೋಗದೊಂದಿಗೆ ವೊಡಾಫೋನ್ ಐಡಿಯಾ ಬಲವಾದ ನೆಟ್‌ವರ್ಕ್ ನಿರ್ಮಿಸಿದೆ. ಬಳಕೆದಾರರು 299 ರೂ.ಗಳ ಯೋಜನೆಯೊಂದಿಗೆ ಅನ್ಲಿಮಿಟೆಡ್ 5G ಡೇಟಾ ಪಡೆಯುತ್ತಾರೆ. 5G ಫೋನ್‌ಗಳನ್ನು ಹೊಂದಿರುವ ಬೆಂಗಳೂರಿನ ವೊಡಾಫೋನ್ ಐಡಿಯಾ ಬಳಕೆದಾರರು ಈಗ Vi 5G ಆನಂದಿಸಲು ಸಾಧ್ಯವಾಗುತ್ತದೆ.
ಟೆಲಿಕಾಂ ವಲಯದ ಕಂಪನಿ ವೊಡಾಫೋನ್ ಐಡಿಯಾ ಲಿಮಿಟೆಡ್ ಬುಧವಾರ ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಅದೂ ಕೂಡ ಉತ್ತಮ ಪ್ರಗತಿ ಕಾಣುತ್ತಿದೆ. ಕಂಪನಿಯ ಷೇರುಗಳು ಲಾಭದೊಂದಿಗೆ ಓಪನ್ ಆಗಿದ್ದು, ಇಂದು ಶೇ.1ರಷ್ಟು ಲಾಭದೊಂದಿಗೆ 7.03 ರೂ. ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದವು.