Vivo x200 Ultra: ವಿವೋ X200 ಅಲ್ಟ್ರಾ ಚೀನಿ ಮಾರುಕಟ್ಟೆಗೆ ಬಂದಿದೆ. ಇದರ ಹಿಂದಿನ ಎಕ್ಸ್ ಸೀರಿಸ್ನ ಸ್ಮಾರ್ಟ್‌ಫೋನ್‌ಗಳಂತೆ, Vivo X200 ಅಲ್ಟ್ರಾವನ್ನೂ ಸಹ Zeiss ಬ್ರ್ಯಾಂಡ್ ಕ್ಯಾಮೆರಾ ಸಿಸ್ಟಮ್ನೊಂದಿಗೆ ಬಿಡುಗಡೆ ಮಾಡಲಾಗಿದೆ. Vivo X200 ಮತ್ತು Vivo X200 Pro ಸ್ಮಾರ್ಟ್‌ಫೋನ್‌ಗಳು ಅವುಗಳ ಕ್ಯಾಮೆರಾ ಗುಣಮಟ್ಟದಿಂದಾಗಿ ಭಾರತದಲ್ಲಿ ಹೆಚ್ಚು ಬೇಡಿಕೆ ಪಡೆದಿವೆ.
ಪ್ರಸ್ತುತ ವಿವೋ ಎಕ್ಸ್ 200 ಅಲ್ಟ್ರಾವನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಶೀಘ್ರದಲ್ಲೇ ಭಾರತಕ್ಕೂ ಬರುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳಲ್ಲಿ 200-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಆಪ್ಶನಲ್ ಫೋಟೋಗ್ರಫಿ ಕಿಟ್ ಕೂಡ ಸೇರಿದೆ. ಅಂದ್ರೆ ವಿವೋ X200 ಅಲ್ಟ್ರಾ ಕ್ಯಾಮೆರಾಗೆ ಪ್ರತ್ಯೇಕ ಲೆನ್ಸ್ ಜೋಡಿಸಲು ಸಾಧ್ಯವಾಗುತ್ತದೆ. ಈ ಕಿಟ್‌ನ ಸಹಾಯದಿಂದ ವಿವೋ X200 ಅಲ್ಟ್ರಾ DSLR ಕ್ಯಾಮೆರಾಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ವಿವೋ X200 ಅಲ್ಟ್ರಾ ಬೆಲೆ: ಫೋನಿನ ಮೂಲ ರೂಪಾಂತರವನ್ನು 75,500 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ. ಇದು ಅದರ 12GB + 256GB ರೂಪಾಂತರದ ಬೆಲೆ. 6GB + 512GB ರೂಪಾಂತರವನ್ನು 84,000 ರೂ.ಗೆ ಬಿಡುಗಡೆ ಮಾಡಲಾಗಿದೆ ಮತ್ತು 16GB + 1TB ರೂಪಾಂತರವನ್ನು 92,000 ರೂ.ಗೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 29ರಿಂದ ಚೀನಾದಲ್ಲಿ ಖರೀದಿಗೆ ಲಭ್ಯವಿರಲಿದೆ. ಪ್ರಸ್ತುತ ಪ್ರೀ-ಬುಕಿಂಗ್ ವಿವೋ ವೆಬ್‌ಸೈಟ್‌ನಲ್ಲಿ ಪ್ರಾರಂಭವಾಗಿದೆ. 16GB + 1TB ಯ ಉನ್ನತ ರೂಪಾಂತರದೊಂದಿಗೆ ಫೋಟೋಗ್ರಫಿ ಕಿಟ್ ಸಹ ಲಭ್ಯವಿರುತ್ತದೆ ಎಂಬುದು ಗಮನಿಸಬೇಕಾದ ಅಂಶ.
ವಿವೋ X200 ಅಲ್ಟ್ರಾ ಸ್ಪೆಸಿಫಿಕೇಶನ್: Vivo X200 Ultra ಫೋನ್ ಆಂಡ್ರಾಯ್ಡ್ 15ನಲ್ಲಿ ಚಾಲನೆಯಲ್ಲಿರುವ Funtouch OS 15ನೊಂದಿಗೆ ಬರುತ್ತದೆ. ಇದರಲ್ಲಿ ನೀವು 6.82-ಇಂಚಿನ 2K, LTPO AMOLED ಡಿಸ್ಪ್ಲೇಯನ್ನು ಪಡೆಯುತ್ತೀರಿ. ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 4,500 ನೀಟ್ಸ್ ಬ್ರೈಟ್ನೆಸ್ ಅನ್ನು ಸಪೋರ್ಟ್ ಮಾಡುತ್ತದೆ. ಸ್ಕ್ರೀನ್ ಮೇಲೆ ನೀವು ಆರ್ಮರ್ ಗ್ಲಾಸ್ ಕೋಟಿಂಗ್ ಸಹ ಪಡೆಯುತ್ತೀರಿ. ಇದು ಪ್ರಮುಖ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ LPDDR5X RAM ಮತ್ತು UFS 4.1 ಸ್ಟೋರೇಜ್ ಹೊಂದಿದೆ.
ಜೈಸ್ ಬ್ರ್ಯಾಂಡ್‌ನೊಂದಿಗೆ ಬರುವ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಫೋನ್ ಹೊಂದಿರುತ್ತದೆ. ಇದು f/1.69 ಅಪರ್ಚರ್ ಹೊಂದಿರುವ 50MP ಸೋನಿ LYT-818 35mm ಪ್ರಾಥಮಿಕ ಕ್ಯಾಮೆರಾ, f/2.0 ಅಪರ್ಚರ್ ಹೊಂದಿರುವ 50MP ಸೋನಿ LYT-818 ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು f/1.69 ಅಪರ್ಚರ್ ಹೊಂದಿರುವ 200MP 85mm Zeiss APO ಟೆಲಿಫೋಟೋ ಲೆನ್ಸ್ ಹೊಂದಿರುತ್ತದೆ. ಸೆಲ್ಫಿಗಳಿಗಾಗಿ 50MP ಕ್ಯಾಮೆರಾ ಹೊಂದಿದೆ.
ವಿಶೇಷ ಫೋಟೋಗ್ರಫಿ ಕಿಟ್: DSLRನಂತೆಯೇ ಚಿತ್ರಗಳನ್ನು ಕ್ಲಿಕ್ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ. ಫೋನ್‌ನೊಂದಿಗೆ ಬಳಕೆದಾರರು ಆಪ್ಶನಲ್ ಫೋಟೋಗ್ರಫಿ ಕಿಟ್ ಪಡೆಯುತ್ತಾರೆ. ಕಿಟ್ Zeiss 2.35x ಟೆಲಿ-ಕನ್ವರ್ಟರ್ ಲೆನ್ಸ್ ಒಳಗೊಂಡಿದೆ. ಲೆನ್ಸ್ ಅನ್ನು ಫೋನ್‌ನಲ್ಲಿ ಅಳವಡಿಸುವ ಮೂಲಕ ಬಳಕೆದಾರರು 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾವನ್ನು 200mm (8.7x ಆಪ್ಟಿಕಲ್ ಜೂಮ್) ಫೋಕಲ್ ಲೆಂತ್ ಆಗಿ ಪರಿವರ್ತಿಸಬಹುದು.
ಈ ಕಿಟ್‌ನಲ್ಲಿ ಕ್ಯಾಮೆರಾ ಗ್ರಿಪ್ ಕೂಡ ಒದಗಿಸಲಾಗಿದ್ದು, ಇದು 2300mAh ಇನ್ಬಿಲ್ಟ್ ಬ್ಯಾಟರಿಯನ್ನು ಹೊಂದಿದೆ. ಇದು ಫೋನ್ ಅನ್ನು ಅಲ್ಪಾವಧಿಗೆ ಚಾರ್ಜ್ ಮಾಡಬಹುದು. ಇದಲ್ಲದೆ ಗ್ರಿಪ್‌ನಲ್ಲಿ ಪ್ರತ್ಯೇಕ ವಿಡಿಯೋ ಶಟರ್ ಬಟನ್ ಮತ್ತು ಶೋಲ್ಡರ್ ಸ್ಟ್ರ್ಯಾಪ್ ಒದಗಿಸಲಾಗಿದೆ.
ಇದನ್ನೂ ಓದಿ: ಭಾರತದ ನಕ್ಷೆಯನ್ನು ತಪ್ಪಾಗಿ ಬಿಂಬಿಸಿದ ಚೀನಿ ಆ್ಯಪ್! ಕೇಂದ್ರ ತಾಕೀತು, ಕ್ಷಣಾರ್ಧದಲ್ಲೇ ಪ್ಲೇಸ್ಟೋರ್ನಿಂದ ಕಿತ್ತೆಸೆದ ಗೂಗಲ್!