ETV Bharat / technology

ಸ್ಟೈಲಿಶ್​​ ಡಿಸೈನ್​, ಮಾರ್ಡನ್​ ಕ್ಯಾಮೆರಾ ಫೀಚರ್​: ದೇಶಿಯ ಮಾರುಕಟ್ಟೆಗೆ ಅಪ್ಪಳಿಸಿದ ವಿವೋ ನ್ಯೂ ಫೋನ್​ - VIVO V50E LAUNCHED IN INDIA

Vivo V50e Launched in India: ವಿವೋ ಭಾರತೀಯ ಮಾರುಕಟ್ಟೆಗೆ ತನ್ನ ಸ್ಟೈಲಿಶ್ ವಿ ಸೀರಿಸ್​ನ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್ಸ್​ ಬಗ್ಗೆ ತಿಳಿದುಕೊಳ್ಳೊಣ ಬನ್ನಿ.

VIVO V50E LAUNCHED IN INDIA  VIVO V50E CAMERA SENSOR  VIVO V50E PORTRAIT SO PRO  VIVO V50E SPECIFICATIONS
ಸ್ಟೈಲೀಶ್​ ಡಿಸೈನ್​, ಮಾರ್ಡನ್​ ಕ್ಯಾಮೆರಾ ಫೀಚರ್​ (Photo Credit- Vivo)
author img

By ETV Bharat Tech Team

Published : April 11, 2025 at 2:17 PM IST

3 Min Read

Vivo V50e Launched in India: ಜಾಗತಿಕ ಸ್ಮಾರ್ಟ್‌ಫೋನ್ ಬ್ರಾಂಡ್ ವಿವೋ ದೇಶಿಯ ಮಾರುಕಟ್ಟೆಗೆ ತನ್ನ ಸ್ಟೈಲಿಶ್ ವಿ ಸೀರಿಸ್​ನ 'ವಿವೋ ವಿ50ಇ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಆಧುನಿಕ ಪೊರ್ಟ್ರಯಟ್​ ಫೀಚರ್ಸ್​, ಲಗ್ಜರಿಯಸ್​ ಡಿಸೈನ್​ ಜೊತೆ ಸೋನಿ ಮಲ್ಟಿಫೋಕಲ್ ಪ್ರೊ ಪೊರ್ಟ್ರಯಟ್​ ಕ್ಯಾಮೆರಾ ಸಿಸ್ಟಮ್ ಮತ್ತು 50 - MP ಐ-ಎಎಫ್ ಗ್ರೂಪ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಅಲ್ಟ್ರಾ-ಸ್ಲಿಮ್ ಕ್ವಾಡ್-ಕರ್ವ್ಡ್ ಡಿಸ್​ಪ್ಲೇ ಮತ್ತು ಕೇವಲ 0.739 ಸೆಂ.ಮೀ ಅಳತೆಯ ಸ್ಲಿಮ್ ಬಾಡಿಯೊಂದಿಗೆ ಬರುತ್ತದೆ. ಮತ್ಯಾಕೆ ತಡ ಈ ಹೊಸ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.

ವಿವೋ V50e ವೇರಿಯಂಟ್​ ಪ್ರಕಾರ ಬೆಲೆಗಳು, ಕಲರ್ಸ್​: 8 GB + 128 GB ರೂಪಾಂತರದ ಬೆಲೆ ರೂ. 28,999 ಮತ್ತು 8 GB + 256 GB ರೂಪಾಂತರದ ಬೆಲೆ ರೂ. 30,999 ಆಗಿದೆ. ಕಂಪನಿಯು ಈ ಫೋನ್ ಅನ್ನು ಸಫೈರ್​ ಬ್ಲೂ ಮತ್ತು ಪರ್ಲ್​ ವೈಟ್​ ಎಂಬ ಎರಡು ಆಕರ್ಷಕ ಕಲರ್​ಗಳಲ್ಲಿ ಬಿಡುಗಡೆ ಮಾಡಿದೆ.

ಸೆಲ್​ ಡಿಟೈಲ್ಸ್​: ಈ ಸ್ಮಾರ್ಟ್‌ಫೋನ್ ಏಪ್ರಿಲ್ 17 ರಿಂದ ವಿವೋ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಎಲ್ಲ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಗುರುವಾರದಿಂದಲೇ ಗ್ರಾಹಕರು ವಿವೋ ವಿಶೇಷ ಮಳಿಗೆಗಳು ಮತ್ತು ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಇದನ್ನು ಮೊದಲೇ ಬುಕ್ ಮಾಡಬಹುದು.

ಆನ್‌ಲೈನ್ ಆಫರ್ಸ್​: HDFC ಬ್ಯಾಂಕ್ ಮತ್ತು SBI ಕಾರ್ಡ್ ಪಾವತಿಗಳೊಂದಿಗೆ ಗ್ರಾಹಕರು ಈ ಫೋನ್‌ನಲ್ಲಿ ಶೇ.10 ರಷ್ಟುವರೆಗೆ ಇನ್​ಸ್ಟಂಟ್​ ಡಿಸ್ಕೌಂಟ್​ ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡಿಕೊಂಡರೆ, ನೀವು ಶೇ.10 ರಷ್ಟವರೆಗೆ ವಿನಿಮಯ ಬೋನಸ್ ಮತ್ತು 6 ತಿಂಗಳವರೆಗೆ ನೋ ಕಾಸ್ಟ್​ ಆಫ್​ EMI ಆಪ್ಶನ್​ ಸಹ ಪಡೆಯಬಹುದು. ಹೆಚ್ಚುವರಿಯಾಗಿ ಕಂಪನಿಯು 'ವಿವೋ TWS' ಇಯರ್‌ಬಡ್‌ಗಳನ್ನು ಕೇವಲ ರೂ.1,499 ರೂಗೆ ನೀಡುತ್ತಿದೆ.

ಆಫ್‌ಲೈನ್ ಆಫರ್‌ಗಳು: SBI, HSBC, Amex, DBS, IDFC, Kotak ಮತ್ತು ಇತರ ಬ್ಯಾಂಕ್‌ಗಳಲ್ಲಿ ಶೇ.10 ರಷ್ಟವರೆಗೆ ಇನ್​ಸ್ಟಂಟ್​ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಿರಿ. 9 ತಿಂಗಳ ಶೂನ್ಯ ಡೌನ್ ಪೇಮೆಂಟ್ ಹಣಕಾಸು ಆಯ್ಕೆಯೂ ಲಭ್ಯವಿದೆ. ವಿವೋ ವಿ - ಶೀಲ್ಡ್ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ಮೇಲೆ ಶೇ 40ರ ವರೆಗೆ ರಿಯಾಯಿತಿ ಇದೆ. ಹೆಚ್ಚುವರಿಯಾಗಿ, ನೀವು 'ಸರ್ವಿಫೈ' ಮತ್ತು 'ಕ್ಯಾಶಿಫೈ' ಮೂಲಕ ಶೇ.10 ರಷ್ಟರವರೆಗೆ ವಿನಿಮಯ ಬೋನಸ್ ಪಡೆಯಬಹುದು.

ಬೆಳಕಿನೊಂದಿಗೆ ಬದಲಾಗುವ ಫೋನ್: ಈ ಹೊಸ 'ವಿವೋ V50e' ಸ್ಮಾರ್ಟ್‌ಫೋನ್‌ನ ಸಫೈರ್ ಬ್ಲೂ ರೂಪಾಂತರದಲ್ಲಿ ಪ್ರತಿಯೊಂದು ಫೋನ್ ವಿಶಿಷ್ಟ ಮಾದರಿ ಹೊಂದಿದೆ. ಇದು ರತ್ನದಂತಹ ಶೈನಿಂಗ್​ ಮತ್ತು ಮಿನರಲ್​ ಟಕ್ಚರ್​ ಒದಗಿಸುತ್ತದೆ. ಇದರ ಪರ್ಲ್​ ವೈಟ್​ ವೇರಿಯಂಟ್​ ನೀರಿನಂತಹ ಎಫೆಕ್ಟ್​ ಹೊಂದಿದೆ ಮತ್ತು ಬೆಳಕಿನೊಂದಿಗೆ ಬದಲಾಗುವ ಮುತ್ತಿನ ಹೊಳಪನ್ನು ಹೊಂದಿದೆ. 0.739cm ಸ್ಲಿಮ್ ಪ್ರೊಫೈಲ್ ಮತ್ತು 17.19cm (6.77 ಇಂಚು) ಅಲ್ಟ್ರಾ-ಸ್ಲಿಮ್ ಕ್ವಾಡ್-ಕರ್ವ್ಡ್ ಡಿಸ್​ಪ್ಲೇ ಹೊಂದಿರುವ ಈ ಫೋನ್ ಆಕರ್ಷಕ ನೋಟದಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ.

ಪೊರ್ಟ್ರಯಟ್​ ಫೋಟೋಗ್ರಫಿ ಎಕ್ಸ್​ಪಿರಿಯನ್ಸ್​: ಈ ಫೋನ್ ಪ್ರಬಲ ಕ್ಯಾಮೆರಾ ಸೆಟಪ್ ಹೊಂದಿದೆ. ಸೋನಿ IMX882 ಸೆನ್ಸಾರ್​ ಹೊಂದಿರುವ OIS ಕಡಿಮೆ ಬೆಳಕಿನಲ್ಲಿಯೂ ಸಹ ಉತ್ತಮ ಗುಣಮಟ್ಟದ ಸ್ಥಿರ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಈ ಸೋನಿ ಮಲ್ಟಿಫೋಕಲ್ ಪ್ರೊ ಪೊರ್ಟ್ರಯಟ್​ ಮೂರು ಫೋಕಲ್ ಲೆಂತ್ ಆಯ್ಕೆಗಳನ್ನು ನೀಡುತ್ತದೆ. 1x (26mm), 1.5x (39mm), ಮತ್ತು 2x (52mm). ಇದರ 50-MP ಐ-ಎಎಫ್ ಗ್ರೂಪ್ ಸೆಲ್ಫಿ ಕ್ಯಾಮೆರಾ 92-ಡಿಗ್ರಿ ಫಿಲ್ಡ್​ ಆಫ್​ ವ್ಯೂನೊಂದಿಗೆ ಬರುತ್ತದೆ. ಇದು ಭಾರತಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೆಡ್ಡಿಂಗ್​ ಪೊರ್ಟ್ರಯಟ್​ ಸ್ಟುಡಿಯೋ ಫೀಚರ್​ ಸಹ ಒಳಗೊಂಡಿದೆ. ಇದು ವಿಶಿಷ್ಟ ಛಾಯಾಗ್ರಹಣ ಅನುಭವವನ್ನು ನೀಡುತ್ತದೆ. ಇದನ್ನು ಮದುವೆಯ ಫೋಟೋಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರೊಟೆಕ್ಷನ್​: ಇದು ಡಸ್ಟ್​ ಮತ್ತು ವಾಟರ್​ ರೆಸಿಸ್ಟೆಂಟ್​ಗಾಗಿ IP68, IP69 ರೇಟಿಂಗ್‌ಗಳೊಂದಿಗೆ ಬರುತ್ತದೆ. ಈ ಫೋನ್ ಅನ್ನು 1.5 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳ ಕಾಲ ಮುಳುಗಿಸಬಹುದು ಎಂದು ಕಂಪನಿ ಹೇಳುತ್ತದೆ. ಇದರ ಡೈಮಂಡ್ ಶೀಲ್ಡ್ ಗ್ಲಾಸ್ ಮತ್ತು ಕಾಂಪ್ರೆಹೆನ್ಸಿವ್​ ಕುಶನಿಂಗ್​ ಸ್ಟ್ರಕ್ಚರ್​ ಡ್ರಾಪ್​ ಪ್ರೊಟೆಕ್ಷನ್​ ಶೇ.50 ರಷ್ಟು ಹೆಚ್ಚಿಸುತ್ತದೆ.

ಬ್ಯಾಟರಿ: ಈ ಫೋನ್ 5600mAh ಬ್ಯಾಟರಿಯನ್ನು ಹೊಂದಿದೆ. ಇದು 90W ಫಾಸ್ಟ್​ ಚಾರ್ಜಿಂಗ್ ಸಪೋರ್ಟ್​ ಮಾಡುತ್ತದೆ.

ಪ್ರೊಸೆಸರ್: ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಇದು 8GB RAM + 8GB ಎಕ್ಸ್​ಟೆಂಡೆಡ್​ RAM ನೊಂದಿಗೆ ಬರುತ್ತದೆ. ಇವು ಬಹು ಕಾರ್ಯವನ್ನು ಸುಲಭಗೊಳಿಸುತ್ತವೆ.

ಸಾಫ್ಟ್‌ವೇರ್: ಇದು ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್ AI ವೈಶಿಷ್ಟ್ಯಗಳು: ಈ ಫೋನ್ ಅದ್ಭುತವಾದ AI ವೈಶಿಷ್ಟ್ಯಗಳನ್ನು ಹೊಂದಿದೆ. ಇದರ AI ಇಮೇಜ್ ಎಕ್ಸ್‌ಪಾಂಡರ್, ಲೈವ್ ಕಾಲ್ ಟ್ರಾನ್ಸ್‌ಲೇಷನ್ ಮತ್ತು AI ಎರೇಸರ್ 2.0 ಉತ್ತಮ ಬಳಕೆದಾರ ಅನುಭವವನ್ನು ಒದಗಿಸುತ್ತವೆ. ಇದರ ಇನ್ನೊಂದು ವಿಶೇಷವೆಂದರೆ ಈ 'ವಿವೋ V50e' ಸ್ಮಾರ್ಟ್‌ಫೋನ್ ಗ್ರೇಟರ್ ನೋಯ್ಡಾದಲ್ಲಿ 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ತಯಾರಾಗುತ್ತಿದೆ.

ಓದಿ: ಹೊಸ ಆಧಾರ್​ ಆ್ಯಪ್​ ಬಿಡುಗಡೆ ಮಾಡಿದ ಕೇಂದ್ರ; ಇನ್ಮುಂದೆ ಭೌತಿಕ​ ಕಾರ್ಡ್​ ಬೇಕಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.