Vivo V50 Elite Edition: ನಾಳೆ ವಿವೋ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. 'ವಿವೋ ವಿ50 ಎಲೈಟ್ ಎಡಿಷನ್' ಹೆಸರಿನಲ್ಲಿ ದೇಶಿಯ ಮಾರುಕಟ್ಟೆಗೆ ಬರುತ್ತಿರುವ ಈ ಸ್ಮಾರ್ಟ್ಫೋನಿನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ವಿವೋ ಎಕ್ಸ್ ಫೋನ್ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ.
ಕಂಪನಿಯ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಫೋನಿನ ರಿಯರ್ನಲ್ಲಿ ಸರ್ಕಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಗೋಚರಿಸುತ್ತದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ವಿವೋ ವಿ50 ಫೋನ್‌ನ ಟ್ಯಾಬ್ಲೆಟ್ ಆಕಾರದ ಕ್ಯಾಮೆರಾ ಮಾಡ್ಯೂಲ್‌ಗಿಂತ ಇದು ಭಿನ್ನವಾಗಿದೆ. 'ವಿವೋ ವಿ50 ಎಲೈಟ್ ಎಡಿಷನ್' ಫೋನಿನ ವೈಶಿಷ್ಟ್ಯಗಳ ಕುರಿತು ಕಂಪನಿ ಹೆಚ್ಚಿನ ಮಾಹಿತಿ ಒದಗಿಸಿಲ್ಲ. ಆದರೆ ತಂತ್ರಜ್ಞಾನ ತಜ್ಞರು 'ವಿವೋ ವಿ50'ನ ಬಹುತೇಕ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳುತ್ತಿದ್ದಾರೆ.
ವಿವೋ ಫೆಬ್ರವರಿಯಲ್ಲಿ ಸ್ನಾಪ್‌ಡ್ರಾಗನ್ 7 ಜೆನ್ 3ರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ 'ವಿವೋ ವಿ 50' ಬಿಡುಗಡೆ ಮಾಡಿತು. ಈಗ 'ವಿವೋ ವಿ50 ಸೀರಿಸ್'ನಲ್ಲಿ ಹೊಸ ಮಾದರಿಯನ್ನು ಪರಿಚಯಿಸಲು ಸಿದ್ಧವಾಗಿದೆ. ‘ವಿವೋ ವಿ50’ ಸೀರಿಸ್ ಪ್ರಸ್ತುತ ‘ವಿವೋ ವಿ50’ ಮತ್ತು ‘ವಿವೋ ವಿ50ಇ’ ಎಂಬ ಎರಡು ಮಾದರಿಗಳನ್ನು ಹೊಂದಿದೆ. ‘ಎಲೈಟ್ ಆವೃತ್ತಿ’ ಈಗ ಈ ಸೀರಿಸ್ನ ಮೂರನೇ ಮಾದರಿಯಾಗಲಿದೆ.
ವಿವೋ V50 ಎಲೈಟ್ ಎಡಿಷನ್ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು(ಸಂಭಾವ್ಯ):
ಡಿಸ್ಪ್ಲೇ: 6.77-ಇಂಚಿನ ಫುಲ್-HD+ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 4,500 ನೀಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿದೆ.
ಪ್ರೊಸೆಸರ್: ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್
ಬ್ಯಾಟರಿ: 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. 6000mAh ಬ್ಯಾಟರಿಯೊಂದಿಗೆ ಬರಬಹುದು.
RAM ಮತ್ತು ಸ್ಟೋರೇಜ್: 12GB ವರೆಗೆ LPDDR4X RAM ಮತ್ತು 512GB ವರೆಗೆ UFS 2.2 ಸ್ಟೋರೇಜ್ ಹೊಂದಿರಬಹುದು.
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 15 ಆಧಾರಿತ FuntouchOS 15ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್: ZEISS ಬೆಂಬಲಿತ 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯಿದೆ.
ಪ್ರೊಟೆಕ್ಷನ್: ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.
ವಿವೋ ವಿ50 ಬೆಲೆಗಳು: 8GB + 128GB ರೂಪಾಂತರದ ಬೆಲೆ ರೂ. 34,999, 8GB + 256GB ರೂಪಾಂತರದ ಬೆಲೆ ರೂ. 36,999 ಮತ್ತು 12GB + 512GB ರೂಪಾಂತರದ ಬೆಲೆ ರೂ. 40,999 ಆಗಿದೆ.
ರೋಸ್ ರೆಡ್, ಸ್ಟಾರಿ ಬ್ಲೂ ಮತ್ತು ಟೈಟಾನಿಯಂ ಗ್ರೇ ಕಲರ್ ಆಪ್ಶನ್ಗಳಲ್ಲಿ ಫೋನ್ ಲಭ್ಯವಿದೆ. ಬಹುತೇಕ ಇದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ನೀಡುವ ಸಾಧ್ಯತೆಯಿರುವ 'ವಿವೋ ವಿ50 ಎಲೈಟ್ ಎಡಿಷನ್' ಅನ್ನು ಕಂಪನಿ ಯಾವ ಬೆಲೆಗೆ ತರುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಡೇಟಾ ಬಳಕೆ: ಭಾರಿ ಆದಾಯದ ನಿರೀಕ್ಷೆಯಲ್ಲಿ ಟೆಲಿಕಾಂ ಕಂಪನಿಗಳು