ETV Bharat / technology

ಬಜೆಟ್​ ದರದಲ್ಲಿ ಹೊಸ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೋ! ಹೇಗಿವೆ ಗೊತ್ತಾ ಫೀಚರ್ಸ್​, ಬೆಲೆ? - VIVO T4 LITE 5G LAUNCHED

Vivo T4 Lite 5G Launched: ವಿವೋ ತನ್ನ ಹೊಸ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಿದೆ. ಅದು ಸಹ ಬಜೆಟ್​ ದರದಲ್ಲಿ. ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಈ ರೀತಿ ಇವೆ..

CHEAPEST 5G SMARTPHONE  VIVO T4 LITE 5G LAUNCHED IN INDIA  VIVO T4 LITE 5G PRICE  VIVO LOW PRICE MOBILE 5G
ಬಜೆಟ್​ ದರದಲ್ಲಿ ಹೊಸ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೋ (Photo Credit: Vivo)
author img

By ETV Bharat Tech Team

Published : June 24, 2025 at 1:48 PM IST

2 Min Read

Vivo T4 Lite 5G Launched: ವಿವೋ ತನ್ನ ಇತ್ತೀಚಿನ ಬಜೆಟ್ 5G ಸ್ಮಾರ್ಟ್‌ಫೋನ್ ವಿವೋ T4 ಲೈಟ್ 5G ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಇತರೆ ಮಾಹಿತಿಯ ವಿವರ ಇಲ್ಲಿದೆ..

ಈ ಬಜೆಟ್ ಫೋನ್‌ನಲ್ಲಿ ನೀವು 90Hz ರಿಫ್ರೆಶ್ ರೇಟ್​, HD + LCD ಡಿಸ್​ಪ್ಲೇ, ನಾಚ್ ಡಿಸೈನ್​, 5MP ಫ್ರಂಟ್​ ಕ್ಯಾಮೆರಾ, 8GB ವರೆಗೆ RAM, ಡೈಮೆನ್ಸಿಟಿ ಪ್ರೊಸೆಸರ್, 8GB ವರ್ಚುವಲ್ RAM ಆಂಡ್ರಾಯ್ಡ್ 15, 2 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್​ಡೇಟ್ಸ್​ ಮತ್ತು 3 ವರ್ಷಗಳವರೆಗೆ ಭದ್ರತಾ ಅಪ್​ಡೇಟ್ಸ್​ ಸಹ ಈ ಹೊಸ ಸ್ಮಾರ್ಟ್​ಫೋನ್​ ಹೊಂದಿದೆ.

Vivo T4 Lite 5G ವಿಶೇಷತೆಗಳು: Vivo T4 Lite 5G ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಫೋನ್ 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ ಡಿಸ್​ಪ್ಲೇಯನ್ನು ಹೊಂದಿದೆ. 1000 ನೀಟ್ಸ್​ವರೆಗಿನ ಬ್ರೈಟ್​ನೆಸ್​ ಹೊಂದಿದೆ.

ಫೋನ್‌ಗೆ ಶಕ್ತಿ ತುಂಬಲು ಇದು ಆಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಮತ್ತು ಆರ್ಮ್ ಮಾಲಿ-G57 MC2 GPU ಅನ್ನು ಪಡೆಯುತ್ತಿದೆ. ಈ ಸಾಧನವು 4GB / 6GB / 8GB LPDDR4x RAM 128GB / 256GB ಸ್ಟೋರೇಜ್​ನೊಂದಿಗೆ ಬರುತ್ತದೆ. ಮೈಕ್ರೊ SD ಬೆಂಬಲವು ಸಹ ಲಭ್ಯವಿದ್ದು, ಇದರಿಂದ ನೀವು ಸ್ಟೋರೇಜ್​ ಅನ್ನು 1TB ವರೆಗೆ ಹೆಚ್ಚಿಸಬಹುದು.

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಸಾಧನವು ಸೋನಿ ಸೆನ್ಸಾರ್ ಹೊಂದಿರುವ 50MP ರಿಯರ್​ ಕ್ಯಾಮೆರಾ, f/1.8 ಅಪರ್ಚರ್, LED ಫ್ಲ್ಯಾಷ್, f/2.4 ಅಪರ್ಚರ್ ಹೊಂದಿರುವ 2MP ಡೆಪ್ತ್ ಸೆನ್ಸಾರ್ ಮತ್ತು f/2.2 ಅಪರ್ಚರ್ ಹೊಂದಿರುವ 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಪ್ರೋಟೆಕ್ಷನ್​ಗಾಗಿ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೊ ಜ್ಯಾಕ್, ಟಾಪ್-ಪೋರ್ಟ್ ಹೊಂದಿದೆ. ಈ ಸಾಧನವು 5G, Wi-Fi 802.11 ac (2.4GHz + 5GHz), ಬ್ಲೂಟೂತ್ 5.4, GPS ಕನೆಕ್ಟಿವಿಟಿ ಹೊಂದಿದೆ. ಇದಲ್ಲದೆ ಈ ಫೋನ್ 15W ಫಾಸ್ಟ್ ಚಾರ್ಜಿಂಗ್ ಸಪೋರ್ಟ್​ ಜೊತೆ 6000mAh ಬಿಗ್​ ಬ್ಯಾಟರಿ ಹೊಂದಿದೆ.

Vivo T4 Lite 5G ಬೆಲೆ ಮತ್ತು ಲಭ್ಯತೆ: ಕಂಪನಿಯು ಪ್ರಿಸ್ಮ್ ಬ್ಲೂ ಮತ್ತು ಟೈಟಾನಿಯಂ ಗೋಲ್ಡ್ ಕಲರ್​ನಲ್ಲಿ Vivo T4 Lite 5G ಅನ್ನು ಪರಿಚಯಿಸಿದೆ. 4GB + 128GB ಮಾದರಿಯ ಬೆಲೆ ರೂ. 9,999, 6GB + 128GB ಮಾದರಿಯ ಬೆಲೆ ರೂ. 10,999 ಮತ್ತು ಟಾಪ್-ಎಂಡ್ 8GB + 256GB ಮಾದರಿಯ ಬೆಲೆ ರೂ. 12,999.

ಜುಲೈ 2 ರಿಂದ ನೀವು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಖರೀದಿಸಲು ಸಾಧ್ಯವಾಗುತ್ತದೆ. ಕಂಪನಿಯು HDFC ಬ್ಯಾಂಕ್, SBI ಮತ್ತು Axis ಬ್ಯಾಂಕ್ ಕಾರ್ಡ್‌ಗಳೊಂದಿಗೆ ಫೋನ್ ಖರೀದಿಸಿದರೆ 500 ರೂ. ರಿಯಾಯಿತಿಯನ್ನು ಸಹ ಪಡೆಯುತ್ತೀರಿ.

ಓದಿ: ಸ್ಯಾಮ್​ಸಂಗ್​ ಅನ್​ಪ್ಯಾಕ್ಡ್​ ಇವೆಂಟ್ ಯಾವಾಗ, ಎಲ್ಲಿ? ಇಲ್ಲಿದೆ ಫುಲ್​ ಡಿಟೇಲ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.