Vivo T4 5G Launched in India: ವಿವೋದಿಂದ ಹೊಸ ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಗೆ ಅಪ್ಪಳಿಸಿದೆ. ಕಂಪನಿಯು 'ವಿವೋ T4 5G' ಎಂಬ ಮಿಡ್-ಸೆಗ್ಮೆಂಟ್ ಹೆಸರಿನಲ್ಲಿ ಇದನ್ನು ಬಿಡುಗಡೆ ಮಾಡಿದೆ. ಇದು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ ಪ್ರತಿರೋಧಕ್ಕಾಗಿ IP65 ರೇಟಿಂಗ್ ಹೊಂದಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ AI ಎರೇಸ್, AI ಫೋಟೋ ಎನ್‌ಹಾನ್ಸ್, ಲೈವ್ ಟೆಕ್ಸ್ಟ್, AI ನೋಟ್ ಅಸಿಸ್ಟೆಂಟ್, ಸೂಪರ್ ಡಾಕ್ಯುಮೆಂಟ್ಸ್, ಸರ್ಕಲ್ ಟು ಸರ್ಚ್‌ನಂತಹ ಝೆನ್ AI ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..
ವಿವೋ T4 5G ವೈಶಿಷ್ಟ್ಯಗಳು, ಸ್ಪೆಸಿಫಿಕೇಶನ್ಸ್:
ಡಿಸ್ಪ್ಲೇ: ಈ ಫೋನ್ 6.77-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು 120 Hz ರಿಫ್ರೆಶ್ ರೇಟ್ ಮತ್ತು 5,000 ನೀಟ್ಸ್ ಲೋಕಲ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಇದರ ಸ್ಕ್ರೀನ್ನ ಗಾಜಿನ ಕವರ್ ಶೀಲ್ಡ್ ಗ್ಲಾಸ್‌ನೊಂದಿಗೆ ಬರುತ್ತದೆ.
Power up with @vivo_india T4 #5G, driven by the ultra-efficient #Snapdragon 7s Gen 3! ⚡
— Snapdragon India (@Snapdragon_IN) April 22, 2025
Experience peak performance, extended battery life, and seamless multitasking. Are you ready to dominate your day? pic.twitter.com/vLGBr0QSJf
ಬ್ಯಾಟರಿ: ಈ ಫೋನ್ 7300 mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 90W ಚಾರ್ಜರ್ ಸಪೋರ್ಟ್ನೊಂದಿಗೆ ಬರುತ್ತದೆ. ಇದು 90W ವೈರ್ಡ್ ಫ್ಲ್ಯಾಶ್ ಚಾರ್ಜ್, ರಿವರ್ಸ್ ಮತ್ತು ಬೈಪಾಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಪ್ರೊಸೆಸರ್: ಈ Vivo T4 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್ ಅನ್ನು 12 GB RAM ಮತ್ತು 256 GB ಸ್ಟೋರೋಜ್ ಹೊಂದಿದೆ.
ಆಪರೇಟಿಂಗ್ ಸಿಸ್ಟಮ್: ಇದು ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್‌ನೊಂದಿಗೆ 2 ವರ್ಷಗಳ ಆಂಡ್ರಾಯ್ಡ್ ಸಾಫ್ಟ್‌ವೇರ್ ಅಪ್ಡೇಟ್ಸ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಸಹ ಒದಗಿಸುತ್ತದೆ.
Welcome to the Turbo life. Level up on multitasking, last beyond the day, slay with your display, and get clear reels in 4K, with the one and only vivo T4.
— vivo India (@Vivo_India) April 22, 2025
Sale starts on 29th april.
Know more https://t.co/pZQXjK1JQc#vivoT4 #TurboLife #GetSetTurbo pic.twitter.com/wTl8Z3yDHU
ಕ್ಯಾಮೆರಾ ಸೆಟಪ್: ಇದು 50-ಮೆಗಾಪಿಕ್ಸೆಲ್ ಪ್ರೈಮೆರಿ ರಿಯರ್ ಸೆನ್ಸಾರ್ (OIS, f/1.8 ಅಪರ್ಚರ್), 2-ಮೆಗಾಪಿಕ್ಸೆಲ್ ಸೆಕಂಡರಿ ಸೆನ್ಸಾರ್ (f/2.4 ಅಪರ್ಚರ್) ಹೊಂದಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು (f/2.0 ಅಪರ್ಚರ್) ಹೊಂದಿದೆ.
ಕಲರ್ ಆಪ್ಶನ್: ಈ ಫೋನ್ ಮಾರುಕಟ್ಟೆಯಲ್ಲಿ ಫ್ಯಾಂಟಮ್ ಗ್ರೇ ಮತ್ತು ಎಮರಾಲ್ಡ್ ಬ್ಲೇಜ್ ಎರಡು ಕಲರ್ ಆಪ್ಶನ್ಗಳಲ್ಲಿ ಲಭ್ಯವಿದೆ.
ಇತರ ವೈಶಿಷ್ಟ್ಯಗಳು: ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, IP65 ರೇಟಿಂಗ್, 5G, 4G, Wi-Fi, ಬ್ಲೂಟೂತ್ 5.2, GPS, OTG, USB ಟೈಪ್-C ಪೋರ್ಟ್ ಹೊಂದಿದೆ. ಇದರ ಎಮರಾಲ್ಡ್ ಬ್ಲೇಜ್ ರೂಪಾಂತರವು 163.40 x 76.40 x 7.89mm ಅಳತೆಯನ್ನು ಹೊಂದಿದ್ದರೆ, ಫ್ಯಾಂಟಮ್ ಗ್ರೇ ರೂಪಾಂತರವು 7.93mm ಅಳತೆಯನ್ನು ಹೊಂದಿದೆ. ಈ ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ 199 ಗ್ರಾಂ ತೂಗುತ್ತದೆ.
ರೂಪಾಂತರದ ಪ್ರಕಾರ ಇದರ ಬೆಲೆಗಳು: 8 GB/128 GB ರೂಪಾಂತರದ ಬೆಲೆ ರೂ. 21,999, 8 GB/256 GB ರೂಪಾಂತರದ ಬೆಲೆ ರೂ. 23,999 ಮತ್ತು 12 GB/256 GB ರೂಪಾಂತರದ ಬೆಲೆ ರೂ. 25,999 ಆಗಿದೆ.
ಮಾರಾಟದ ವಿವರಗಳು: ಈ ಫೋನ್ ಏಪ್ರಿಲ್ 29 ರಿಂದ ಫ್ಲಿಪ್‌ಕಾರ್ಟ್, ವಿವೋ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.
ಓದಿ: 200MP ಝೈಸ್ ಕ್ಯಾಮೆರಾ, ಫೋಟೋಗ್ರಫಿ ಕಿಟ್, ಡಿಎಸ್ಎಲ್ಆರ್ ಫೀಲಿಂಗ್! ಹೇಗಿದೆ ಗೊತ್ತಾ ವಿವೋ X200 ಅಲ್ಟ್ರಾ?