ETV Bharat / technology

ಉಡುಪಿ ವಿಜ್ಞಾನಿಯ ಹೊಸ ಆವಿಷ್ಕಾರ: 10 ಕಿ. ಮೀ. ದೂರದ ಸ್ಪಷ್ಟ ಚಿತ್ರಣ ತೋರಿಸುತ್ತೆ ಈ ವಿಶೇಷ ಬೈನಾಕುಲರ್​ - LONG RANGE BINACULAR

ಕೃಷ್ಣನೂರಿನಲ್ಲಿ ಮಾಡಲಾದ ಆವಿಷ್ಕಾರವೊಂದು ವಿಶ್ವ ದಾಖಲೆಯತ್ತ ದಾಪುಗಾಲಿಡುತ್ತಿದೆ. ಉಡುಪಿ ಮೂಲದ ವಿಜ್ಞಾನಿಯ ವಿಶಿಷ್ಟ ಉಪಕರಣಕ್ಕೆ ಇದೀಗ ವಿಶ್ವ ದಾಖಲೆಯ ಗರಿ. ಯಾವುದು ಈ ಉಪಕರಣ, ಏನಿದರ ವಿಶೇಷ ಎಂಬುದರ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

author img

By ETV Bharat Tech Team

Published : Sep 12, 2024, 3:36 PM IST

Updated : Sep 12, 2024, 4:25 PM IST

LONG RANGE BINACULAR
ವಿಶೇಷ ಬೈನಾಕುಲರ್​ ತಯಾರಿಸಿದ ಉಡುಪಿ ವಿಜ್ಞಾನಿ (ETV Bharat)
ವಿಶ್ವ ದಾಖಲೆಗೆ ಈ ಆವಿಷ್ಕಾರ ಸಜ್ಜು: ವಿಶೇಷ ಬೈನಾಕುಲರ್​ ತಯಾರಿಸಿದ ಉಡುಪಿ ವಿಜ್ಞಾನಿ (ETV Bharat)

ಉಡುಪಿ: ಸಾಂಸ್ಕೃತಿಕ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸದಾ ಸಾಧನೆ ಮಾಡುತ್ತಿರುವ ಉಡುಪಿಯ ಜನರು ಇದೀಗ ವಿಜ್ಞಾನ ಕ್ಷೇತ್ರದಲ್ಲೂ ಸಹ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಉಡುಪಿಯ ಪರ್ಕಳ ಮೂಲದ ವಿಜ್ಞಾನಿಯೊಬ್ಬರು ನಿರ್ಮಿಸಿದ ದೂರದರ್ಶಕ ಇಂದು ವಿಶ್ವ ದಾಖಲೆ ಮಟ್ಟಕ್ಕೆ ತಲುಪಿದೆ.

ಉಡುಪಿ ವಿಜ್ಞಾನಿ ವಿ ಮನೋಹರ್ ಅವರು ಶಕ್ತಿಯುತ ದೂರದರ್ಶಕವೊಂದನ್ನು ನಿರ್ಮಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ವಿ ಮನೋಹರ್ ಕಳೆದ ಹಲವಾರು ವರ್ಷಗಳಿಂದ ದೂರದರ್ಶಕ ಮತ್ತು ಇದಕ್ಕೆ ಸಂಬಂಧಿಸಿದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಉನ್ನತ ಮಟ್ಟದ ಕೆಲಸವನ್ನು ಕೂಡಾ ಮಾಡಿದ್ದಾರೆ. ಈ ಹಿಂದೆ ಸೂರ್ಯಗ್ರಹಣ, ಚಂದ್ರಗ್ರಹಣ ಮುಂತಾದ ಸಂದರ್ಭಗಳಲ್ಲಿ ಸ್ಥಳೀಯ ಉತ್ಸಾಹಿ ಜನರ ಜೊತೆಗೂಡಿ ದೂರದರ್ಶಕದ ಮೂಲಕ ಗ್ರಹಣ ವೀಕ್ಷಣೆಗೂ ಕೂಡಾ ಅವಕಾಶ ಕಲ್ಪಿಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರೆದು ಎರಡೂ ಕಣ್ಣುಗಳ ಮೂಲಕ ಆಕಾಶವನ್ನು ಗ್ರಹಿಸುವ ಪ್ರಪಂಚದಲ್ಲಿಯೇ ವಿಶಿಷ್ಟ ದೂರದರ್ಶಕವನ್ನು ತಮ್ಮ ಕೈಚಳಕದಿಂದ ನಿರ್ಮಿಸಿ ಇದನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.

10 ಕಿ.ಮೀ.​ವರೆಗಿನ ವಸ್ತುವನ್ನು ವೀಕ್ಷಿಸುವ ದೂರದರ್ಶಕ: ಈ ದೂರದರ್ಶಕದ ಮುಖೇನವಾಗಿ 200 ರಿಂದ 240 ಎಕ್ಸ್ ಎಂದರೆ ಸುಮಾರು 10 ಕಿಲೋ ಮೀಟರ್ ದೂರದವರೆಗಿನ ವಸ್ತುಗಳನ್ನು ಎರಡೂ ಕಣ್ಣುಗಳಿಂದ ಸ್ವಷ್ಟವಾಗಿ ನೋಡಿ ಗುರುತಿಸಬಹುದು. ಈ ದೂರದರ್ಶಕಕ್ಕೆ ವಿ ಮನೋಹರ್ ಅವರಿಗೆ ಈಗಾಗಲೇ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ ಲಂಡನ್ ಮತ್ತು ಇಂಡಿಯನ್ ಗ್ಲೋರಿ ಅವಾರ್ಡ್ಸ್ 2024 ಲಭಿಸಿದೆ. ಈಗಾಗಲೇ ಗಿನ್ನೆಸ್ ರೆಕಾರ್ಡ್​​ಗೆ ಕೂಡಾ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಇದು ಲಭಿಸುವ ಸಾಧ್ಯತೆ ಕೂಡಾ ಇದೆ. ಎರಡೂ ಕಣ್ಣುಗಳಲ್ಲಿ ನೋಡುವುದರಿಂದಾಗಿ ವೀಕ್ಷಕರಿಗೆ ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕದೇ ಸುಲಭವಾಗಿ ದೂರದರ್ಶಕದ ಮೂಲಕವಾಗಿ ದೂರದ ವಸ್ತುಗಳನ್ನು ವೀಕ್ಷಿಸಬಹುದಾಗಿದೆ.

ರಕ್ಷಣಾ ಕ್ಷೇತ್ರಕ್ಕೂ ಉಪಯೋಗ; ಇನ್ನು ವಿ.ಮನೋಹರ್ ಅವರು ಇದರ ಬಗ್ಗೆ ಈಟಿವಿ ಭಾರತದವರಿಗೆ ಮಾಹಿತಿಯನ್ನು ನೀಡಿ, ಈ ದೂರದರ್ಶಕ ಸುಮಾರು 10 ಕಿಲೋ ಮೀಟರ್ ವರೆಗಿನ ವಸ್ತುಗಳನ್ನು ವೀಕ್ಷಿಸಬಹುದಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಬಹು ಉಪಯೋಗಿಯಾಗಿ ಇವುಗಳನ್ನು ಬಳಕೆ ಮಾಡಬಹುದಾಗಿದೆ. ಮಾತ್ರವಲ್ಲದೇ ಸೂರ್ಯಗ್ರಹಣ, ಚಂದ್ರಗ್ರಹಣ ವೀಕ್ಷಣೆಗೂ ಸಹ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಉಡುಪಿಯಂತಹ ಒಂದು ಪುಟ್ಟ ಊರಿನಲ್ಲಿ ಇದ್ದುಕೊಂಡು, ಇಲ್ಲಿನ ಪ್ರತಿಷ್ಠಿತ ಎಂಐಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿ ಮನೋಹರ್ ಅವರ ಸಾಧನೆ ನಿಜಕ್ಕೂ ಅದ್ವಿತೀಯ. ಇವರ ಸಾಧನೆಯನ್ನು ಸರ್ಕಾರಗಳು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ. ಅದು ಮಾತ್ರವಲ್ಲದೇ ಜನಸಾಮಾನ್ಯರಿಗೆ ಇಂತಹ ವೈಜ್ಞಾನಿಕ ವಿಚಾರಗಳಲ್ಲಿ ಆಸಕ್ತಿ ಮೂಡಿಸಿ ಅವುಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಿಪೇಯ್ಡ್​-ಪೋಸ್ಟ್​ಪೇಯ್ಡ್​ ಕನೆಕ್ಷನ್​ ಬಗ್ಗೆ ನಿಮಗೆಷ್ಟು ಗೊತ್ತು, ಇದರಲ್ಲಿ ಯಾವ ಯೋಜನೆ ಬೆಸ್ಟ್? - Prepaid vs Postpaid

Last Updated : Sep 12, 2024, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.