Tata Curvv Dark Edition Launched: ಟಾಟಾ ಮೋಟಾರ್ಸ್‌ನ ಕೂಪೆ ಎಸ್‌ಯುವಿ ಟಾಟಾ ಕರ್ವ್ ಡಾರ್ಕ್ ಎಡಿಷನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕಂಪನಿಯು ಈಗಾಗಲೇ ತನ್ನ ಪೋರ್ಟ್‌ಫೋಲಿಯೊದಲ್ಲಿ ಟಾಟಾ ಸಫಾರಿ, ನೆಕ್ಸಾನ್ ಮತ್ತು ಹ್ಯಾರಿಯರ್ ಎಸ್‌ಯುವಿಗಳ ಡಾರ್ಕ್ ಎಡಿಷನ್ ಅನ್ನು ಮಾರಾಟ ಮಾಡಿದೆ. ಈಗ ಈ ಟಾಟಾ ಕರ್ವ್ ಬಗ್ಗೆ ಮಾತನಾಡುವುದಾದ್ರೆ, ಕಂಪನಿಯು ಇದನ್ನು ರೂ. 16.49 ಲಕ್ಷ ರೂ. ದಿಂದ ರೂ 19.52 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಸಿಟ್ರೊಯೆನ್ ತನ್ನ ಕೂಪೆ SUV ಯ ಬಸಾಲ್ಟ್ ಡಾರ್ಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿತು.
ಟಾಟಾ ಕರ್ವ್ ಡಾರ್ಕ್ ಆವೃತ್ತಿಯ ಎಕ್ಸ್ಟೀರಿಯರ್: ಕರ್ವ್ ಡಾರ್ಕ್ ಆವೃತ್ತಿಯು ಹೊಸ ಕಾರ್ಬನ್ ಬ್ಲ್ಯಾಕ್ ಪೇಂಟ್ ಫಿನಿಶ್‌ನೊಂದಿಗೆ ಬರುತ್ತದೆ. ಈ ಪೇಂಟ್ ಫನಿಶ್ನಿಂಗ್ ಹೊರತಾಗಿ, ಕಾರಿನ ಬಂಪರ್, ಗ್ರಿಲ್ ಮತ್ತು 18-ಇಂಚಿನ ಅಲಾಯ್ ವೀಲ್ಗಳಿಗೆ ಫುಲ್ ಬ್ಲ್ಯಾಕ್ ಕಲರ್ ನೀಡಲಾಗಿದೆ. ಈ ಕರ್ವ್ ಕೂಪ್ ಎಸ್‌ಯುವಿ ಮುಂಭಾಗ ಮತ್ತು ಹಿಂಭಾಗದಲ್ಲಿ ಅಗಲವಾದ ಎಲ್‌ಇಡಿ ಲೈಟ್ ಬಾರ್‌ಗಳು ಮತ್ತು ವೀಲ್ ಆರ್ಚ್ಗಳ ಮೇಲೆ ಗ್ಲೋಸಿ ಬ್ಲ್ಯಾಕ್ ಕ್ಲಾಡಿಂಗ್‌ನೊಂದಿಗೆ ಬರುತ್ತದೆ.
While others chase the light, we own the dark.
— Tata Motors Cars (@TataMotors_Cars) April 12, 2025
Introducing the CURVV #DARK Edition.#CURVV #TataMotorsPassengerVehicles #TATAev #DARKRules pic.twitter.com/COW3UYGFli
ಟಾಟಾ ಕರ್ವ್ ಡಾರ್ಕ್ ಎಡಿಷನ್ ಇಂಟೀರಿಯರ್: ಅದರ ಕ್ಯಾಬಿನ್ ನೋಡಿದಾಗ, ಟಾಟಾ ಲೆಥೆರೆಟ್ ಅಪ್ಹೋಲ್ಸ್ಟರಿ, ಸೆಂಟರ್ ಕನ್ಸೋಲ್ ಮತ್ತು ರೂಫ್ ಲೈನರ್‌ನಲ್ಲಿ ಬ್ಲ್ಯಾಕ್ ಥೀಮ್ ಅನ್ನು ಬಳಸಿದೆ. ಇದರೊಂದಿಗೆ ಇದು 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ರಿಕ್ಲೈನಿಂಗ್ ರಿಯರ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಇವುಗಳ ಜೊತೆಗೆ ಈ ಕಾರು ಏರ್ ಪ್ಯೂರಿಫೈಯರ್, ಎಲ್ಲಾ ವೀಲ್ಗಳಿಗೆ ಡಿಸ್ಕ್ ಬ್ರೇಕ್ಗಳು ಮತ್ತು ಸಿಕ್ಸ್ ಏರ್ಬ್ಯಾಗ್ಗಳಂತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಕಂಪನಿಯು ಈ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಅನ್ನು ನೀಡುತ್ತದೆ. ಇದು ಅಮೆಜಾನ್ ಅಲೆಕ್ಸಾವನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ Tata Curve Accomplished + A ರೂಪಾಂತರವು ADAS ಸೂಟ್ ಮತ್ತು ಗೆಸ್ಚರ್-ಕಂಟ್ರೋಲ್ಡ್ ಟೈಲ್‌ಗೇಟ್‌ನೊಂದಿಗೆ ಬರುತ್ತದೆ.
Commanding presence. A force to reckon with. CURVV #DARK is here to rule!#CURVV #TataMotorsPassengerVehicles #DARKRules pic.twitter.com/cxhtwUFkZm
— Tata Motors Cars (@TataMotors_Cars) April 12, 2025
ಟಾಟಾ ಕರ್ವ್ ಡಾರ್ಕ್ ಎಡಿಷನ್ ಬೆಲೆ:
ಟಾಟಾ ಕರ್ವ್ ರೂಪಾಂತರಗಳು | ಸ್ಟ್ಯಾಂಡರ್ಡ್ ಕರ್ವ್ ಬೆಲೆ | ಕರ್ವ್ ಡಾರ್ಕ್ ಎಡಿಷನ್ ಬೆಲೆ | ಬೆಲೆ ವ್ಯತ್ಯಾಸ |
ಅಕಂಪ್ಲಿಶ್ಡ್ S ಟರ್ಬೊ-ಪೆಟ್ರೋಲ್-ಮ್ಯಾನುಯಲ್ | ರೂ. 16.17 ಲಕ್ಷಗಳು | ರೂ. 16.49 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ S ಡೀಸೆಲ್-ಮ್ಯಾನುವಲ್ | ರೂ. 16.37 ಲಕ್ಷಗಳು | ರೂ. 16.69 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ S ಟರ್ಬೊ-ಪೆಟ್ರೋಲ್-ಆಟೋಮೆಟಿಕ್ | ರೂ. 17.67 ಲಕ್ಷಗಳು | ರೂ.. 17.99 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ ಪ್ಲಸ್ A ಟರ್ಬೊ-ಪೆಟ್ರೋಲ್-ಮ್ಯಾನುವಲ್ | ರೂ. 17.67 ಲಕ್ಷಗಳು | ರೂ. 17.99 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ ಪ್ಲಸ್ A ಡೀಸೆಲ್-ಮ್ಯಾನುವಲ್ | ರೂ. 17.70 ಲಕ್ಷಗಳು | ರೂ. 18.02 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ S ಡೀಸೆಲ್-ಆಟೋಮೆಟಿಕ್ | ರೂ. 17.87 ಲಕ್ಷಗಳು | ರೂ. 18.19 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ ಪ್ಲಸ್ A ಟರ್ಬೊ-ಪೆಟ್ರೋಲ್-ಆಟೋಮೆಟಿಕ್ | ರೂ.. 19.17 ಲಕ್ಷಗಳು | ರೂ. 19.49 ಲಕ್ಷಗಳು | ರೂ. 32,000 |
ಅಕಂಪ್ಲಿಶ್ಡ್ ಪ್ಲಸ್ A ಡೀಸೆಲ್-ಆಟೋಮೆಟಿಕ್ | ರೂ. 19.20 ಲಕ್ಷಗಳು | ರೂ. 19.52 ಲಕ್ಷಗಳು | ರೂ. 32,000 |
ಟಾಟಾ ಕರ್ವ್ ಡಾರ್ಕ್ ಎಡಿಷನ್ ಪವರ್‌ಟ್ರೇನ್: ಡಾರ್ಕ್ ಎಡಿಷನ್ ಟಾಟಾ ಕರ್ವ್ ಅನ್ನು ರೇಂಜ್-ಟಾಪ್ ಅಕ್ಕಾಪ್ಲಿಶ್ಡ್ ಟ್ರಿಮ್‌ನಲ್ಲಿ ಮಾತ್ರ ಪರಿಚಯಿಸಲಾಗಿದೆ. ಇದು 1.2-ಲೀಟರ್, ಡೈರೆಕ್ಟ್ ಇಂಜೆಕ್ಷನ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 123bhp ಮತ್ತು 225Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಇದು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 118bhp ಪವರ್ ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ.
ಟಾಟಾ ಕರ್ವ್ EV ಡಾರ್ಕ್ ಎಡಿಷನ್ ಸಹ ಪ್ರಾರಂಭ: ಅದರ ICE ಪ್ರತಿರೂಪದಂತೆ ಟಾಟಾ ಕರ್ವ್ EV ಸಹ ವಿಶೇಷ ಡಾರ್ಕ್ ಆವೃತ್ತಿಯನ್ನು ಹೊಂದಿದೆ. ಇದು ಅದೇ ಬ್ಲ್ಯಾಕ್ ಸ್ಟೈಲಿಂಗ್ ಮತ್ತು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಕಂಪನಿಯು ಈ ಡೇರ್ಡ್ ಆವೃತ್ತಿಯನ್ನು ಕರ್ವ್ EV ಯ ಟಾಪ್-ಸ್ಪೆಕ್ ಎಂಪವರ್ಡ್ ಪ್ಲಸ್ ಎ ರೂಪಾಂತರದಲ್ಲಿ ಪರಿಚಯಿಸಿದೆ. ಇದರ ವಿಶೇಷ ಆವೃತ್ತಿಯನ್ನು ರೂ 22.24 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದೆ. ಇದು ಅದರ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ 25,000 ರೂ. ಹೆಚ್ಚು. ಸ್ಟ್ಯಾಂಡರ್ಡ್ ರೂಪಾಂತರ ಬೆಲೆ ರೂ 21.99 ಲಕ್ಷ (ಎಕ್ಸ್ ಶೋ ರೂಂ).
ಓದಿ: ಯುವಕರನ್ನು ಹುಚ್ಚೆಬ್ಬಿಸುವ ಹಯಾಬುಸಾ ಈಗ ಹೊಸರೂಪದಲ್ಲಿ ಎಂಟ್ರಿ: ಇದರ ಬೆಲೆ, ಫೀಚರ್ಸ್ ಹೀಗಿವೆ