Suzuki Hayabusa Launched: ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಅಪ್ಡೇಟೆಟ್ '2025 ಸುಜುಕಿ ಹಯಾಬುಸಾ' ಬೈಕ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೋಟಾರ್ ಸೈಕಲ್ ಅನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈಗ ಕಂಪನಿಯು ಅದನ್ನು ಭಾರತಕ್ಕೂ ತಂದಿದೆ. ಈ ನಾವಿನ್ಯ ಮಾದರಿಯು ಅಡ್ವಾನ್ಸ್ಡ್ ಫೀಚರ್ಸ್ ಮತ್ತು ಹೊಸ ಕಲರ್ ಆಪ್ಶನ್ ಅನ್ನು ಪರಿಚಯಿಸುತ್ತದೆ. ಇದರ ಜೊತೆಗೆ, ಇದರ ಎಂಜಿನ್ ಈಗ OBD2 ಕಂಪ್ಲೈಂಟ್ ಆಗಿದೆ.
2025 ಸುಜುಕಿ ಹಯಾಬುಸಾ ಹೊಸ ಕಲರ್ ಆಪ್ಶನ್: ಕಂಪನಿಯು '2025 ಸುಜುಕಿ ಹಯಾಬುಸಾ' ಅನ್ನು ಮೂರು ಹೊಸ ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಿದೆ.
- ಮೆಟಾಲಿಕ್ ಮ್ಯಾಟ್ ಸ್ಟೀಲ್ ಗ್ರೀನ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್
- ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್/ಮೆಟಾಲಿಕ್ ಮ್ಯಾಟ್ ಟೈಟಾನಿಯಂ ಸಿಲ್ವರ್
- ಮೆಟಾಲಿಕ್ ಮಿಸ್ಟಿಕ್ ಸಿಲ್ವರ್/ಪರ್ಲ್ ವಿಗರ್ ಬ್ಲೂ
ಕಲರ್ ಆಯ್ಕೆಗಳ ಜೊತೆಗೆ ಕಂಪನಿಯು ತನ್ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಅಪ್ಡೇಟ್ ಮಾಡಿದೆ. ಇದು ಮಧ್ಯದಲ್ಲಿ TFT ಸ್ಕ್ರೀನ್ನೊಂದಿಗೆ ಅನಲಾಗ್ ಡಯಲ್‌ಗಳನ್ನು ಹೊಂದಿದೆ.

ಸುಜುಕಿ ಹಯಾಬುಸಾ ಹೊಸ ಫೀಚರ್ಸ್: ಈ ಬೈಕ್‌ನ ಹೊಸ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಕಂಪನಿಯು ತನ್ನ ಲಾಂಚ್ ಕಂಟ್ರೋಲ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್ ಸಿಸ್ಟಮ್ ಅಪ್ಡೇಟ್ ಮಾಡಿದೆ. ಇದರ ಜೊತೆಗೆ, ಬೆಸ್ಟ್ ಎಫೆಕ್ಟಿವ್ನೆಸ್ಗಾಗಿ ಲಾಂಚ್ ಕಂಟ್ರೋಲ್ ಮೋಡ್ ಎಂಜಿನ್ ವೇಗವನ್ನು ಸಹ ನವೀಕರಿಸಲಾಗಿದೆ. ಈಗ ಇದು ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟ್ ಸಿಸ್ಟಮ್ ಅನ್ನು ಉಪಯೋಗಿಸಿ ರೈಡರ್ ಗೇರ್‌ಗಳನ್ನು ಬದಲಾಯಿಸದಿದ್ರೆ ಈ ಬೈಕ್‌ನ ಹೊಸ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಆ್ಯಕ್ಟಿವೇಟ್ ಆಗುವುದಿಲ್ಲ.
ಸುಜುಕಿ ಹಯಾಬುಸಾ ಪವರ್‌ಟ್ರೇನ್: ಈ ಅಪ್ಡೇಟ್ಡ್ ಮಾದರಿಯು ಅದೇ 1,340cc, ಇನ್-ಲೈನ್ 4-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್, ಲಿಕ್ವಿಡ್-ಕೂಲ್ಡ್ DOHC ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ ಗರಿಷ್ಠ 190 ಬಿಎಚ್‌ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ 6-ಸ್ಪೀಡ್ ಯೂನಿಟ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸುಜುಕಿ ಹಯಾಬುಸಾ ವೈಶಿಷ್ಟ್ಯಗಳು: ಅಪ್ಡೇಟೆಡ್ ಲಾಂಚ್ ಕಂಟ್ರೋಲ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಜೊತೆಗೆ ಈ ಬೈಕ್ ಹಿಲ್ ಹೋಲ್ಡ್ ಕಂಟ್ರೋಲ್, ಸ್ಲೋಪ್ ಡಿಪೆಂಡೆಂಟ್ ಕಂಟ್ರೋಲ್ ಸಿಸ್ಟಮ್, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್, ಲೋ-RPM ಅಸಿಸ್ಟ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್ ಮತ್ತು ಸ್ಪೀಡ್ ಲಿಮಿಟರ್ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಬೆಲೆ ಮತ್ತು ಇತರೆ ವಿವರಗಳು: ಇವುಗಳ ಜೊತೆಗೆ ಇದು ಆಂಟಿ-ಲಿಫ್ಟ್ ಕಂಟ್ರೋಲ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ರೈಡಿಂಗ್ ಮೋಡ್ ಆ್ಯಂಡ್ ಪವರ್ ಮೋಡ್ ಎಂಬ ಮೂರು ಸೆಟ್ಟಿಂಗ್ಗಳಿಂದ ಎಂಜಿನ್ ಬ್ರೇಕ್ ಕಂಟ್ರೋಲ್ ಇದೆ. ಅಷ್ಟೇ ಅಲ್ಲ ಇದು TFT ಸ್ಕ್ರೀನ್, ಫುಲ್ LED ಲೈಟಿಂಗ್ನಿಂದ ಅನಲಾಗ್ ಕ್ಲಸ್ಟರ್ ಅನ್ನು ಸಹ ಒಳಗೊಂಡಿದೆ. ಕಂಪನಿಯು ಈ ಅಪ್ಡೇಟ್ಡ್ ಮಾದರಿಯನ್ನು 16.90 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಗೆ ಬಿಡುಗಡೆ ಮಾಡಿದೆ.
ಓದಿ: ಕೇವಲ ₹75 ಸಾವಿರಕ್ಕೆ ಸ್ಪೋರ್ಟಿ ಇ-ಬೈಕ್ ರೋಡ್‌ಸ್ಟರ್ ಎಕ್ಸ್: ಖುದ್ದಾಗಿ ಟ್ರಯಲ್ ಮಾಡಿದ ಓಲಾ ಸಿಇಒ