ETV Bharat / technology

ಸುನೀತಾ ವಿಲಿಯಮ್ಸ್​ಗೆ ಹೆಚ್ಚುವರಿ ಸಂಬಳ ಇದೆಯೇ? ಗಗನಯಾತ್ರಿಗಳ ವಾರ್ಷಿಕ ಆದಾಯವೆಷ್ಟು? - SUNITA WILLIAMS SALARY

Sunita Williams Salary: ನಾಸಾ ತನ್ನ ಗಗನಯಾತ್ರಿಗಳಿಗೆ ಅನುಭವ ಮತ್ತು ಶ್ರೇಣಿಯ ಆಧಾರದ ಮೇಲೆ ಸಂಬಳ ನೀಡುತ್ತದೆ.

SPACE SCIENTISTS  NASA ASTRONAUTS SALARY  SUNITA WILLIAMS SALARY NEWS  SUNITA WILLIAMS RETURN UPDATE
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Photo Credit: NASA)
author img

By ETV Bharat Tech Team

Published : March 19, 2025 at 11:50 AM IST

2 Min Read

Sunita Williams Salary: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಿದ್ದಾರೆ. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ 9 ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ ಭೂಮಿಯನ್ನು ಸ್ಪರ್ಶಿಸಿದ್ದಾರೆ. ಗಗನಯಾತ್ರಿಗಳ ಆಗಮದಿಂದ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನರು ಸಂತೋಷಗೊಂಡಿದ್ದಾರೆ. ಅಮೆರಿಕದ ಮಾಜಿ ನೌಕಾ ಅಧಿಕಾರಿ ಮತ್ತು ಅನುಭವಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದು ಅವರಿಗೆ ನಾಸಾದ ಅತ್ಯಂತ ನುರಿತ ಮತ್ತು ಯಶಸ್ವಿ ಗಗನಯಾತ್ರಿ ಎಂಬ ಮನ್ನಣೆ ನೀಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 287 ದಿನಗಳನ್ನು ಕಳೆದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ನಾಸಾದಿಂದ ಎಷ್ಟು ಸಂಬಳ ಸಿಗುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಸುನೀತಾ ಬಾಹ್ಯಾಕಾಶದಲ್ಲಿದ್ದಾಗ ಪಡೆದ ಸಂಬಳ ಎಷ್ಟು?. ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅವರಿಗೆ ಎಷ್ಟು ಡಾಲರ್ ನೀಡುತ್ತದೆ?. ಎಂಬುದರ ಬಗ್ಗೆ ತಿಳಿಯೋಣ.

ಈ ಕುರಿತಾಗಿ ನಿವೃತ್ತ ನಾಸಾ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕೆಲಸ ಮಾಡಿದ ಗಗನಯಾತ್ರಿಗಳಿಗೆ ಯಾವುದೇ ಹೆಚ್ಚುವರಿ ವೇತನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಫೆಡರಲ್ ಉದ್ಯೋಗಿಗಳಾಗಿರುವುದರಿಂದ, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆಯುವ ಸಮಯವನ್ನು ಭೂಮಿಗೆ ಸಾಮಾನ್ಯ ಭೇಟಿ ಎಂದೇ ಪರಿಗಣಿಸಲಾಗುತ್ತದೆ ಎಂದರು.

ಸಾಮಾನ್ಯ ವೇತನದ ಜೊತೆಗೆ, ISSನಲ್ಲಿ ಆಹಾರ ಮತ್ತು ವಸತಿ ವೆಚ್ಚವನ್ನು NASA ಭರಿಸಲಿದೆ. ಅಂತಹ ಅನಿರೀಕ್ಷಿತ ಬೆಳವಣಿಗೆಗಳ ಸಂದರ್ಭದಲ್ಲಿ ದಿನಕ್ಕೆ ಹೆಚ್ಚುವರಿಯಾಗಿ ನಾಲ್ಕು ಡಾಲರ್‌ಗಳು ಅಥವಾ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 348 ರೂಪಾಯಿಗಳು ಮಾತ್ರ ಸಿಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.

ಅಮೆರಿಕ ಸರ್ಕಾರದ ವೇತನ ಶ್ರೇಣಿಯ ಪ್ರಕಾರ, ನಾಸಾ ಗಗನಯಾತ್ರಿಗಳಿಗೆ ಅನುಭವ ಮತ್ತು ಶ್ರೇಣಿಯ ಆಧಾರದ ಮೇಲೆ ವೇತನ ನೀಡಲಾಗುತ್ತದೆ. ಇದು GS-13ರಿಂದ GS-15ರವರೆಗೆ ಇರುತ್ತದೆ. ಅದರಂತೆ ಅವರ ವಾರ್ಷಿಕ ವೇತನ $1,25,133 ರಿಂದ $1,62,672 ವರೆಗೆ ಇರುತ್ತದೆ. ಭಾರತೀಯ ಕರೆನ್ಸಿಯಲ್ಲಿ ಇದು ಸರಿಸುಮಾರು 1.8 ಕೋಟಿಯಿಂದ 1.41 ಕೋಟಿ ರೂ.ಗಳಷ್ಟಿದೆ. ನಾಸಾ ಹೆಚ್ಚುವರಿಯಾಗಿ $1100 ಪಾವತಿಸುತ್ತದೆ.

ಅನುಭವಿ ಗಗನಯಾತ್ರಿಯಾಗಿರುವ ಸುನೀತಾ ವಿಲಿಯಮ್ಸ್ GS-15 ವರ್ಗದ ಅಡಿಯಲ್ಲಿ ಬರುತ್ತಾರೆ. ಇದು ಅಂದಾಜು ವಾರ್ಷಿಕ 152,258 (1.31 ಕೋಟಿ ರೂ) ಡಾಲರ್​ ವೇತನ ಹೊಂದಿದೆ. ಸಂಬಳದ ಹೊರತಾಗಿ ನಾಸಾ ಗಗನಯಾತ್ರಿಗಳು ಆರೋಗ್ಯ ವಿಮೆ, ಮುಂದುವರಿದ ಮಿಷನ್ ತರಬೇತಿ, ಮಾನಸಿಕ ಬೆಂಬಲ ಮತ್ತು ಪ್ರಯಾಣ ಭತ್ಯೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ ನಾಸಾ ಗಗನಯಾತ್ರಿಗಳಿಗೆ ಹೆಚ್ಚುವರಿ ಸಮಯವನ್ನೂ ನೀಡುತ್ತದೆ.

Marca.com ಪ್ರಕಾರ, ಸುನೀತಾ ವಿಲಿಯಮ್ಸ್ ಅವರು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ತಮ್ಮ ಪತಿ ಫೆಡರಲ್ ಮಾರ್ಷಲ್ ಮೈಕೆಲ್ ಜೆ.ವಿಲಿಯಮ್ಸ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಸುನೀತಾ ವಿಲಿಯಮ್ಸ್ ಅವರ ನಿವ್ವಳ ಮೌಲ್ಯ 5 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ.

ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ-ಗಗನಯಾತ್ರಿ ಬುಚ್ ಜೂನ್ 5, 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದರು. ಅವರ ರಕ್ಷಣೆಗಾಗಿ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಹೊತ್ತ ಫಾಲ್ಕನ್ 9 ರಾಕೆಟ್ ಶನಿವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಮೇಲಕ್ಕೆ ಹಾರಿತು. ಕ್ರೂ-10 ಎಂಬ ಈ ಕಾರ್ಯಾಚರಣೆಯಡಿಯಲ್ಲಿ ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾತ್ರಿಗಳನ್ನು ಬದಲಿಸಲು ನಾಲ್ಕು ಸದಸ್ಯರ ಹೊಸ ತಂಡವನ್ನು ISSಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಪ್ರತಿ ಸಲ ಬಾಹ್ಯಾಕಾಶ ನಡಿಗೆ ಬಳಿಕ ಭಾರತಕ್ಕೆ ಭೇಟಿ ನೀಡುವ ಸುನೀತಾ ವಿಲಿಯಮ್ಸ್: ಈ ಬಾರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.