Six New Electric Scooters: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ವಾರಿವೋ ಮೋಟಾರ್ಸ್ ಇಂಡಿಯಾ, ನೋವಾ ಮತ್ತು ಎಡ್ಜ್ ಎಂಬ ಎರಡು ವಿಭಿನ್ನ ಸೀರಿಸ್ ಅಡಿಯಲ್ಲಿ ಆರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.
ಪ್ರಪಂಚದಾದ್ಯಂತ ಎಲ್ಲರೂ ಪರಿಸರ ಬಗ್ಗೆ ಕಾಳಜಿವಹಿಸುತ್ತಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ವಿಶ್ವ ಪರಿಸರ ದಿನಾಚರಣೆಯಂದು (ಜೂನ್ 5) ಭಾರತದಲ್ಲಿ ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ವರಿವೋ ಮೋಟಾರ್ಸ್, ಕೇವಲ 39,999 ರೂ.ಗಳ ಆರಂಭಿಕ ಬೆಲೆಯಲ್ಲಿ ಆರು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಸ್ಕೂಟರ್‌ಗಳು ಬಜೆಟ್ ಸ್ನೇಹಿ ಮಾತ್ರವಲ್ಲದೆ, ಸೊಗಸಾದ ವಿನ್ಯಾಸಗಳು ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ ಲಗ್ಗೆಯಿಟ್ಟಿವೆ. ಹಾಗಾದರೆ ಈ ಹೊಸ ಸ್ಕೂಟರ್‌ಗಳು ಯಾವುವು? ಅವುಗಳ ವಿಶೇಷತೆ ಏನು ಎಂದು ನೋಡೋಣ ಬನ್ನಿ..
ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ವರಿವೋ ಮೋಟಾರ್ಸ್, ನೋವಾ ಮತ್ತು ಎಡ್ಜ್ ಎಂಬ ಎರಡು ಸೀರಿಸ್ ಅಡಿಯಲ್ಲಿ ಆರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಸ್ಟೈಲಿಶ್ ಲುಕ್‌ನೊಂದಿಗೆ ಲೈಟ್ವೇಟ್ ಡಿಸೈನ್ನಲ್ಲಿ ಪರಿಚಯಿಸಲಾದ ಈ ಸ್ಕೂಟರ್‌ಗಳನ್ನು ಮೂರು ವರ್ಷಗಳ ವಾರಂಟಿ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಹೊಸದಾಗಿ ಬಿಡುಗಡೆಯಾದ ಸ್ಕೂಟರ್‌ಗಳು ಈಗ ಭಾರತದ ಎಲ್ಲಾ ಅಧಿಕೃತ ವರಿವೋ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಹೊಸ ಸ್ಕೂಟರ್‌ಗಳ ಬೆಲೆಗಳು ಕೇವಲ ರೂ. 39,999 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತವೆ. ಈ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಅತ್ಯಂತ ಬಜೆಟ್ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿ ಎದ್ದು ಕಾಣುತ್ತವೆ. ವರಿವೋ ಈಗಾಗಲೇ CRX, ZB, L-1 ಪ್ಲಸ್, L-2, Nexxa DS ನಂತಹ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಸೀರಿಸ್ಗಳನ್ನು ಮಾರಾಟ ಮಾಡುತ್ತದೆ.
‘ನೋವಾ ಸೀರಿಸ್’ ಅನ್ನು ಪ್ರೀಮಿಯಂ ಅನುಭವ, ಇತ್ತೀಚಿನ ಲುಕ್ ಮತ್ತು ಇತ್ತೀಚಿನ ಫೀಚರ್ಸ್ ಬಯಸುವವರಿಗಾಗಿ ತಯಾರಿಸಲಾಗಿದೆ. ‘ಎಡ್ಜ್ ಸೀರಿಸ್’ ದೈನಂದಿನ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಕೈಗೆಟುಕುವ ಪ್ರಯಾಣವನ್ನು ಒದಗಿಸುತ್ತದೆ. ಈ ಸ್ಕೂಟರ್‌ಗಳು ಸ್ಮಾರ್ಟ್ ಮೊಬೈಲ್ ಅಪ್ಲಿಕೇಶನ್ ಕನೆಕ್ಟಿವಿಟಿ ಸಹ ನೀಡುತ್ತವೆ (ಫೋನ್‌ನೊಂದಿಗೆ ಸಂಪರ್ಕ).
ಎಡ್ಜ್ ಸೀರಿಸ್: ಎಡ್ಜ್ ಸೀರಿಸ್ನಲ್ಲಿ ನಿಯೋ, ಎಡ್ಜ್ ಮತ್ತು ಎಡ್ಜ್+ ಎಂಬ ಮೂರು ಸ್ಕೂಟರ್‌ಗಳನ್ನು ಕಾಣಬಹುದು. ನಿಯೋ ಬೆಲೆ ರೂ. 39,999, ಎಡ್ಜ್ ಬೆಲೆ ರೂ. 44,999 (ಎಕ್ಸ್-ಶೋರೂಂ). ಇದರ ಗ್ರೌಂಡ್ ಕ್ಲಿಯರೆನ್ಸ್ 195 ಎಂಎಂ ಮತ್ತು ಸೀಟ್ ಎತ್ತರ 800 ಎಂಎಂ. ಎಡ್ಜ್+ ಬೆಲೆ ರೂ. 49,999 (ಎಕ್ಸ್-ಶೋರೂಂ). ಇದರ ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಮತ್ತು ಸೀಟ್ ಎತ್ತರ 760 ಎಂಎಂ. ಈ ಮೂರು ಸ್ಕೂಟರ್‌ಗಳು ಸಿಂಗಲ್ ಚಾರ್ಜ್‌ನಲ್ಲಿ 120 ಕಿ.ಮೀ ವರೆಗೆ ಚಲಿಸುವ ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ನೋವಾ ಸೀರಿಸ್: ಇದು ವರಿವೋ ಮೋಟಾರ್ಸ್‌ನ ಅತ್ಯುತ್ತಮ ಸೀರಿಸ್ ಆಗಿದೆ. ನೋವಾ ಸೀರಿಸ್ನಲ್ಲಿ ನೀವು ನೋವಾ, ನೋವಾ-ಎಕ್ಸ್ ಮತ್ತು ನೋವಾ-ಎಸ್ ಎಂಬ ಮೂರು ಆಯ್ಕೆಗಳನ್ನು ಕಾಣಬಹುದು. ಈ ಮೂರು ಸ್ಕೂಟರ್‌ಗಳು ಸಿಂಗಲ್ ಚಾರ್ಜ್‌ನಲ್ಲಿ 120 ಕಿ.ಮೀ ವರೆಗೆ ಚಲಿಸುವ ರೇಂಜ್ ಹೊಂದಿದೆ. ಅವು 3 ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ. ಆರಂಭಿಕ ಹಂತದ ನೋವಾ ಬೆಲೆ ರೂ. 55,999 (ಎಕ್ಸ್-ಶೋರೂಂ), ನೋವಾ-ಎಕ್ಸ್ ಬೆಲೆ ರೂ. 59,999 (ಎಕ್ಸ್-ಶೋರೂಂ), ಮತ್ತು ನೋವಾ-ಎಸ್ ಬೆಲೆ ರೂ. 64,999 (ಎಕ್ಸ್-ಶೋರೂಂ).
ನೋವಾ ಸೀಟು ಎತ್ತರ 810 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 180 ಎಂಎಂ. ನೋವಾ ಎಕ್ಸ್ ಗ್ರೌಂಡ್ ಕ್ಲಿಯರೆನ್ಸ್ 140 ಎಂಎಂ ಮತ್ತು ಸೀಟು ಎತ್ತರ 775 ಎಂಎಂ. ನೋವಾ ಎಸ್ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಮತ್ತು ಸೀಟು ಎತ್ತರ 780 ಎಂಎಂ. ಇದು ಎಲ್ಇಡಿ ಲೈಟ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಗಳನ್ನು ಹೊಂದಿದೆ.
ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಾದ್ಯಂತ 200 ಹೊಸ ಮಳಿಗೆಗಳನ್ನು ತೆರೆಯಲು ಕಂಪನಿ ಯೋಜಿಸಿದೆ. ಉತ್ತಮ ಮಾರಾಟದ ನಂತರದ ಸೇವೆಯನ್ನು ಒದಗಿಸುವುದು, ಬಿಡಿಭಾಗಗಳ ಮಾರಾಟವನ್ನು ಹೆಚ್ಚಿಸುವುದು ಮತ್ತು ಗ್ರಾಹಕರಿಗೆ ವಿಶೇಷ ಸೇವೆಗಳನ್ನು ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ.
ಓದಿ: ಬಹುನಿರೀಕ್ಷಿತ ಟಾಟಾ ಅವಿನ್ಯಾ ಇವಿ ಇನ್ನೂ ಎರಡು ವರ್ಷ ವಿಳಂಬ: ಕಾರಣವೇನು?