ETV Bharat / technology

ಇನ್ಮುಂದೆ ನಕಲಿ ವೆಬ್‌ಸೈಟ್‌ಗಳಿಗೆ ಹೇಳಿ ಗುಡ್​ಬೈ - ಬ್ಯಾಡ್ಜ್​ ತರಲು ಪ್ರಯತ್ನಿಸುತ್ತಿದೆ ಗೂಗಲ್ - Google New Feature For Fake Website

Google New Features For Fake Website: ನಕಲಿ ವೆಬ್‌ಸೈಟ್‌ಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತಿದೆ. ಈ ಉದ್ದೇಶಕ್ಕಾಗಿ ಗೂಗಲ್​ ವೆರಿಫೈಡ್​ ಬ್ಯಾಡ್ಜ್ ತರಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ.

FAKE WEBSITES  BLUE BADGE  GOOGLE NEW FEATURES  GOOGLE SEARCH ENGINE
ಇನ್ಮುಂದೆ ನಕಲಿ ವೆಬ್‌ಸೈಟ್‌ಗಳಿಗೆ ಹೇಳಿ ಗುಡ್​ಬೈ (Google)
author img

By ETV Bharat Karnataka Team

Published : Oct 7, 2024, 9:22 AM IST

Google New Features For Fake Website: ಗೂಗಲ್​ನಲ್ಲಿ ಯಾವುದೇ ವಿಷಯದ ಬಗ್ಗೆ ಹುಡುಕಿದರೆ ಅದಕ್ಕೆ ಸಂಬಂಧಿಸಿದ ಅನೇಕ ನಕಲಿ ಖಾತೆಗಳು ಕಾಣಿಸುತ್ತವೆ. ಇದು ಕಂಪನಿಯ ಅಧಿಕೃತ ಖಾತೆಯೇ? ಅಲ್ಲವೇ ಎಂಬುದರ ಕುರಿತು ಅನೇಕ ಜನರು ಅದರ ಬಗ್ಗೆ ತಿಳಿದಿರುವುದಿಲ್ಲ. ಅಮಾಯಕರನ್ನು ವಂಚನೆ ಬಲೆಗೆ ಬೀಳಿಸುವುದಕ್ಕೆ ಅಪರಾಧಿಗಳು ಕಾಯುತ್ತಿರುತ್ತಾರೆ. ಹೀಗಾಗಿ ವಂಚನೆಗೆ ಸಿಲುಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳನ್ನು ತಡೆಯಲು ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಮುಂದಾಗಿದೆ. ಈ ಬಗ್ಗೆ ಗೂಗಲ್​ ಹೊಸ ವೈಶಿಷ್ಟ್ಯವನ್ನು ಬಳಸಲು ಸಜ್ಜಾಗಿದೆ.

ಹೌದು, ಗೂಗಲ್​ ತನ್ನ ಸರ್ಚ್​ ಇಂಜಿನ್​ನಲ್ಲಿ ಕಂಡುಬರುವ ವೆಬ್​ಸೈಟ್​ಗಳಿಗೆ ವೆರಿಫೈಡ್​ ಬ್ಲೂ ಬ್ಯಾಡ್ಜ್ ಅನ್ನು ಒದಗಿಸಲು ಸಿದ್ಧವಾಗಿದೆ. ಇದರಿಂದ ಜನರು ಸುಲಭವಾಗಿ ಯಾವುದು ಅಸಲಿ ಮತ್ತು ನಕಲಿ ಖಾತೆಗಳೆಂದು ಗುರುತಿಸಲು ಸಾಧ್ಯವಾಗುತ್ತದೆ. ಈ ಹೊಸ ವೈಶಿಷ್ಟ್ಯದ ಬಗ್ಗೆ ಗೂಗಲ್​ ಮಾಹಿತಿ ನೀಡಿದೆ.

ಕಂಪನಿಗಳ ಅಧಿಕೃತ ಖಾತೆಗಳನ್ನು ಗುರುತಿಸಲು ನಾವು ಹೊಸ ವೈಶಿಷ್ಟ್ಯಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಪ್ರಸ್ತುತ, ನಾವು ಗೂಗಲ್‌ನಲ್ಲಿರುವ ಕೆಲವು ವ್ಯವಹಾರಗಳ ವೆಬ್‌ಸೈಟ್‌ಗಳ ಪಕ್ಕದಲ್ಲಿ ಚೆಕ್ ಗುರುತುಗಳನ್ನು ತೋರಿಸಲು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದು ಗೂಗಲ್ ಅಧಿಕಾರಿಗಳು ತಿಳಿಸಿದ್ದಾರೆ.

ಗೂಗಲ್ ಹುಡುಕಾಟ ಫಲಿತಾಂಶಗಳಲ್ಲಿ ಮೈಕ್ರೋಸಾಫ್ಟ್, ಮೆಟಾ ಮತ್ತು ಆಪಲ್ ಕಂಪನಿಗಳ ಅಧಿಕೃತ ಸೈಟ್ ಲಿಂಕ್‌ನ ಪಕ್ಕದಲ್ಲಿ ಬ್ಲೂ ವೆರಿಫೈಡ್​ ಬ್ಯಾಡ್ಜ್ ಕಾಣಿಸಿಕೊಳ್ಳುವಂತೆ ಮಾಡಲಾಗಿದೆ. ಈ ಮೇಲೆ ತಿಳಿಸಿರುವ ಕಂಪನಿಗಳ ವೆಬ್​ಸೈಟ್​ ಪಕ್ಕದಲ್ಲಿ ಈಗಾಗಲೇ ಬ್ಲೂ ಟಿಕ್​ ಮಾರ್ಕ್​ ಕಾಣಿಸಿಕೊಳ್ಳುತ್ತಿದೆ ಎಂದು ಧವರ್ಜ್​ ವರದಿ ಮಾಡಿದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದು ತೋರುತ್ತಿದೆ. ಆದರೆ ಗೂಗಲ್ ಇನ್ನೂ ಈ ಸೌಲಭ್ಯವನ್ನು ಹೊರತಂದಿಲ್ಲ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ವಾಟ್ಸಾಪ್‌ನಲ್ಲಿ ಗಣ್ಯರು, ಸಿನಿಮಾ ತಾರೆಯರು ಸೇರಿದಂತೆ ಅಧಿಕಾರಿಗಳ ಖಾತೆಯನ್ನು ಗುರುತಿಸಲು ವೆರಿಫೈಡ್​ ಬ್ಯಾಡ್ಜ್‌ಗಳನ್ನು ಲಭ್ಯಗೊಳಿಸಿರುವುದರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಅದರ ಸಹಾಯದಿಂದ ನಾವು ಸುಲಭವಾಗಿ ನಕಲಿ ಖಾತೆಗಳು ಯಾವುವು ಎಂದು ಗುರುತಿಸುತ್ತಿದ್ದೇವೆ. ಇನ್ಮುಂದೆ ಇಂತಹ ಸೌಲಭ್ಯವು ಗೂಗಲ್ ಸರ್ಚ್ ಫಲಿತಾಂಶಗಳಲ್ಲಿಯೂ ಕಾಣಿಸುತ್ತದೆ. ಮೋಸದ ಜಾಲವನ್ನು ಪತ್ತೆಹಚ್ಚಲು ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ನಕಲಿ ವೆಬ್​ಸೈಟ್​ಗಳನ್ನು ತೋರಿಸದಂತೆ ತಡೆಯಲು Google ಈಗಾಗಲೇ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸುತ್ತದೆ ಎಂದು ಕಂಪನಿ ತಿಳಿಸಿದೆ.

ಓದಿ: ಗೂಗಲ್​ ಪೇ ಮೂಲಕ ಚಿನ್ನದ ಸಾಲ ಇನ್ನಷ್ಟು ಸುಲಭ: ಮುತ್ತೂಟ್​ ಜೊತೆ ಕೈಜೋಡಿಸಿದ ಗೂಗಲ್​ - GPay Partnership with Muthoot

ETV Bharat Logo

Copyright © 2024 Ushodaya Enterprises Pvt. Ltd., All Rights Reserved.