Traction Control Features Bikes: ಸುರಕ್ಷತೆಗೆ ನಿರ್ಣಾಯಕವಾದ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕ ಬೈಕ್‌ಗಳು ನಮ್ಮಲ್ಲಿವೆ ಎಂಬ ಮಾಹಿತಿ ಅನೇಕರಿಗೆ ತಿಳಿದಿರುವುದಿಲ್ಲ. ಅವು ಸಹ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ ಎಂಬುದು ಕೆಲವರಿಗೆ ತಿಳಿದಿಲ್ಲ. ಟ್ರಾಕ್ಷನ್ ಕಂಟ್ರೋಲ್ನಂತಹ ಅಡ್ವಾನ್ಸ್ಡ್ ಸೇಫ್ಟಿ ಫೀಚರ್ಸ್ ಈಗ ಸಾಮಾನ್ಯ ಬೈಕ್‌ಗಳಲ್ಲಿಯೂ ಲಭ್ಯವಿದೆ. ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆಯ ಟ್ರಾಕ್ಷನ್ ಕಂಟ್ರೋಲ್ ಹೊಂದಿರುವ ಕೆಲವು ಅದ್ಭುತ ಬೈಕ್‌ಗಳ ಬಗ್ಗೆ ಮಾಹಿತಿ ಪಡೆಯೋಣ
ಮೋಟಾರ್ ಸೈಕಲ್‌ಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚು. ಸ್ಕೂಟರ್‌ಗಳಿಗಿಂತ ಹೆಚ್ಚಿನ ಸೌಕರ್ಯ ಮತ್ತು ವೈಶಿಷ್ಟ್ಯಗಳನ್ನು ನೀಡುವುದರಿಂದ, ದೀರ್ಘ ಸವಾರಿಗಳಿಗೆ ಅವು ಅತ್ಯುತ್ತಮ ಆಯ್ಕೆಯಾಗಿದೆ. ಪ್ರಸ್ತುತ ಪ್ರೀಮಿಯಂ ಬೈಕ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ 150 ಸಿಸಿಯಿಂದ ಹಿಡಿದು ಸಣ್ಣ ವಿಭಾಗದ ವಾಹನಗಳಿಗೆ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ನಿತ್ಯದ ಬಳಕೆಗೆ ಹತ್ತಿರದ ಸ್ಥಳಗಳಿಗೆ ಹೋಗಲು ಆ ಬೈಕ್‌ಗಳು ತುಂಬಾ ಉಪಯುಕ್ತವಾಗಿವೆ. ಅಷ್ಟೇ ಅಲ್ಲ ಮೈಲೇಜ್ ಮತ್ತು ನಿರ್ವಹಣೆ ವಿಷಯದಲ್ಲೂ ಅವು ಬಜೆಟ್ ಸ್ನೇಹಿಯಾಗಿವೆ.
ಈಗ, ಈ ವಿಭಾಗವು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ಒಂದು ಕಾಲದಲ್ಲಿ ವಿದೇಶಿ ಮತ್ತು ಐಷಾರಾಮಿ ಬೈಕ್‌ಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಹಲವು ವೈಶಿಷ್ಟ್ಯಗಳು ಈಗ ಸಾಮಾನ್ಯ ಜನರ ಬೈಕ್‌ಗಳಿಗೂ ತಲುಪಿವೆ. ಅಂತಹ ಒಂದು ವೈಶಿಷ್ಟ್ಯವೆಂದರೆ ಟ್ರಾಕ್ಷನ್ ಕಂಟ್ರೋಲ್. ಇದು ಟೈರ್‌ಗೆ ಹೆಚ್ಚಿನ ಗ್ರಿಪ್ ನೀಡುತ್ತದೆ. ಈ ವೈಶಿಷ್ಟ್ಯವು ಈಗ 2 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಹೆಚ್ಚಿನ ಮೋಟಾರ್‌ಸೈಕಲ್‌ಗಳಲ್ಲಿ ಲಭ್ಯವಿದೆ. ಈಗ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಹೊಂದಿರುವ ಕೆಲವು ಬಜೆಟ್ ಸ್ನೇಹಿ, ಅದ್ಭುತ ಮೋಟಾರ್‌ಸೈಕಲ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಯಮಹಾ FZ ಸೀರಿಸ್: ಯಮಹಾ FZ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೈಕ್ ಆಗಿದ್ದು, ಟ್ರಾಕ್ಷನ್ ಕಂಟ್ರೋಲ್ ವೈಶಿಷ್ಟ್ಯವನ್ನು ಹೊಂದಿದೆ. ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿಯು ಈ ವೈಶಿಷ್ಟ್ಯವನ್ನು FZ-S FI (ಎಕ್ಸ್ ಶೋ ರೂಂ ಬೆಲೆ ರೂ. 1.35 ಲಕ್ಷ), FZ-S FI ಹೈಬ್ರಿಡ್ (ಎಕ್ಸ್ ಶೋ ರೂಂ ಬೆಲೆ ರೂ. 1.45 ಲಕ್ಷ) ಮಾದರಿಗಳಲ್ಲಿ ನೀಡುತ್ತಿದೆ. ಇದರ ಜೊತೆ ಈ ಬೈಕ್‌ಗಳು ಕನೆಕ್ಟಡ್ ಟೆಕ್ನಾಲಾಜಿ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸಹ ಹೊಂದಿವೆ.
ಬಜಾಜ್ ಪಲ್ಸರ್ N250: ಬಜಾಜ್‌ನ ಇತ್ತೀಚಿನ 250cc ಮಾಡೆಲ್ ಅಂದ್ರೆ ಪಲ್ಸರ್ N250 (ಎಕ್ಸ್-ಶೋರೂಂ ಬೆಲೆ ರೂ. 1.44 ಲಕ್ಷ), ಪ್ರಮಾಣಿತ ವೈಶಿಷ್ಟ್ಯವಾಗಿ ಟ್ರಾಕ್ಷನ್ ಕಂಟ್ರೋಲ್ ಬರುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ, ಅತ್ಯಂತ ಕೈಗೆಟುಕುವ 250cc ಬೈಕ್ ಕೂಡ ಆಗಿದೆ. ಪಲ್ಸರ್‌ನಲ್ಲಿರುವ 250 ಸಿಸಿ ಎಂಜಿನ್ 24 ಬಿಎಚ್‌ಪಿ ಪವರ್ ಮತ್ತು 21.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಹೋಂಡಾ NX200: ಹೋಂಡಾ NX200 ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟಕುವ ಅಡ್ವೆಂಚರ್ ಶೈಲಿಯ ಮೋಟಾರ್‌ಸೈಕಲ್ ಆಗಿದ್ದು, ಇದನ್ನು ಟ್ರಾಕ್ಷನ್ ಕಂಟ್ರೋಲ್ನೊಂದಿಗೆ ಬಿಡುಗಡೆ ಮಾಡಲಾಗಿದೆ. ರೂ.1.51 ಲಕ್ಷ ಬೆಲೆಯ ಈ ಬೈಕ್ 184.4 ಸಿಸಿ ಎಂಜಿನ್ ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾದ ಈ ಎಂಜಿನ್ 8,500 rpm ನಲ್ಲಿ 17 bhp ಪವರ್ ಮತ್ತು 6,000 rpm ನಲ್ಲಿ 15.9 Nm ಟಾರ್ಕ್ ಉತ್ಪಾದಿಸುತ್ತದೆ.
ಯಮಹಾ MT-15: ಯುವಜನರ ನೆಚ್ಚಿನ ಮಾದರಿ ಆಗಿರುವ ಯಮಹಾ MT-15 (ಎಕ್ಸ್-ಶೋರೂಂ ಬೆಲೆ ರೂ. 1.70 ಲಕ್ಷ) ಸ್ಟ್ರೀಟ್ ಫೈಟರ್ ನೇಕೆಡ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಸಹ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ ಹೊಂದಿದೆ. ಈ ಬೈಕ್ 155 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಸ್ಲಿಪ್ಪರ್ ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಈ ಎಂಜಿನ್ 10,000 rpm ನಲ್ಲಿ 18 bhp ಪವರ್ ಮತ್ತು 7,500 rpm ನಲ್ಲಿ 14.1 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಬಜಾಜ್ ಪಲ್ಸರ್ NS400 Z: ಪಲ್ಸರ್ ಶ್ರೇಣಿಯ ಅತ್ಯಂತ ಶಕ್ತಿಶಾಲಿ ಮೋಟಾರ್‌ಸೈಕಲ್‌ನಲ್ಲಿಯೂ ಕಂಪನಿಯು ಟ್ರಾಕ್ಷನ್ ಕಂಟ್ರೋಲ್ ವೈಶಿಷ್ಟ್ಯವನ್ನು ನೀಡುತ್ತಿದೆ. ಇದರೊಂದಿಗೆ ರೂ. 1.81 ಲಕ್ಷ ರೂ. ಬೆಲೆಯ ಈ ಮಾದರಿಯು 6-ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್, ಬಹು ಸವಾರಿ ವಿಧಾನಗಳು ಮತ್ತು ರೈಡ್-ಬೈ-ವೈರ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್ 373 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ.
ಯಮಹಾ R15 V4: ಮತ್ತೊಂದು ಯುವಜನರ ನೆಚ್ಚಿನ ಬೈಕ್ ಆಗಿದ್ದು, ಯಮಹಾ R15 V4 (ಎಕ್ಸ್ ಶೋ ರೂಂ ಬೆಲೆ ರೂ. 1.89 ಲಕ್ಷ) ಕೂಡ ಟ್ರಾಕ್ಷನ್ ಕಂಟ್ರೋಲ್ನೊಂದಿಗೆ ಬರುತ್ತದೆ. ಕನೆಕ್ಟೆಡ್ ಟೆಕ್ನಾಲಜಿ, ಟ್ರ್ಯಾಕ್ ಮತ್ತು ಸ್ಟ್ರೀಟ್ ಎಂಬ ಎರಡು ರೈಡ್ ಮೋಡ್ಸ್ ಜೊತೆಗೆ ಇತರೆ ವೈಶಿಷ್ಟ್ಯಗಳೊಂದಿಗೆ ಬರುವ ಈ ಮಾದರಿಯು 155 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ.