ETV Bharat / technology

ಹೈಸ್ಪೀಡ್​ ಬಿಟ್ಟು ಎಲೆಕ್ಟ್ರಿಕ್​ ಕಾರ್​ಗೆ ಮೊರೆ ಹೋದ ಹಿಟ್​ಮ್ಯಾನ್​! ಆ ಕಾರಿನ ನಂಬರ್​ ಹಿಂದಿರುವ ಕಥೆಯೇನು?

Rohit Sharma EV Car: ರೋಹಿತ್ ಶರ್ಮಾ ಎಲೆಕ್ಟ್ರಿಕ್​ ಕಾರು ಅನ್ನು ಖರೀದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಷ್ಟೇ ಅಲ್ಲ ಆ ಕಾರಿನ ನಂಬರ್​ ಪ್ಲೇಟ್​ ಕಥೆ ಪ್ರೀತಿಯ ಸಂಕೇತವಾಗಿದೆ.

TESLA MODEL Y CAR  ROHIT SHARMA CAR COLLECTION  FORMER INDIA CAPTAIN ROHIT SHARMA  ROHIT SHARMA BUYS TESLA MODEL Y
ಹೈಸ್ಪೀಡ್​ ಬಿಟ್ಟು ಎಲೆಕ್ಟ್ರಿಕ್​ ಕಾರ್​ಗೆ ಮೊರೆ ಹೋದ ಹಿಟ್​ಮ್ಯಾನ್ (Photo Credit: Rohit Sharma and Tesla)
author img

By ETV Bharat Tech Team

Published : October 10, 2025 at 11:06 AM IST

2 Min Read
Choose ETV Bharat

Rohit Sharma EV Car: ಕ್ರಿಕೆಟ್ ಜಗತ್ತಿನಲ್ಲಿ ದೇಶಕ್ಕೆ ಖ್ಯಾತಿ ತಂದುಕೊಟ್ಟ ಸ್ಟಾರ್ ಆಟಗಾರ ಮತ್ತು ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹೊಸ ಕಾರು ಖರೀದಿಸಿದ್ದಾರೆ. ಹೈಸ್ಪೀಡ್ ಐಷಾರಾಮಿ ಕಾರುಗಳನ್ನು ಇಷ್ಟಪಡುವ ರೋಹಿತ್, ಪ್ರಸ್ತುತ ಎಲೆಕ್ಟ್ರಿಕ್ ಕಾರು ಖರೀದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ. ರೋಹಿತ್ ಖರೀದಿಸಿದ ಕಾರು ಟೆಸ್ಲಾ ಮಾಡೆಲ್ ವೈ.

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಈಗ ರೋಹಿತ್ ಶರ್ಮಾ ಅವರನ್ನು ಸಹ ಆಕರ್ಷಿಸಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟ ಪ್ರಾರಂಭವಾದಾಗ ಅವರು ಈ ಮಾದರಿಯನ್ನು ಖರೀದಿಸಿದರು. ಈ ಕಾರಿನ ನಂಬರ್ ಪ್ಲೇಟ್‌ನಲ್ಲಿರುವ 3015 ಸಂಖ್ಯೆ ಈ ಭಾರತೀಯ ಕ್ರಿಕೆಟ್ ತಾರೆಗೆ ತುಂಬಾ ವಿಶೇಷವಾಗಿದೆ.

ಟೆಸ್ಲಾ ಮಾಡೆಲ್ ವೈ ವಿವರಗಳು: ರೋಹಿತ್ ಶರ್ಮಾ ಖರೀದಿಸಿದ ಟೆಸ್ಲಾ ಮಾಡೆಲ್ ವೈ RWD ಸ್ಟ್ಯಾಂಡರ್ಡ್ ರೇಂಜ್ ರೂಪಾಂತರದ ಬೆಲೆ ರೂ. 67.89 ಲಕ್ಷ. ಇದು ಎಕ್ಸ್ ಶೋ ರೂಂ ಬೆಲೆ. ಈ ಎಲೆಕ್ಟ್ರಿಕ್ SUV 75 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಸಿಂಗಲ್​ ಫುಲ್​ ಚಾರ್ಜ್‌ನಲ್ಲಿ ಈ ಕಾರು 622 ಕಿ.ಮೀ ದೂರ ಪ್ರಯಾಣಿಸಬಹುದು. ಈ ಕಾರು ನೋಡಲು ಎಷ್ಟು ಸುಂದರವಾಗಿದ್ದರೂ ಅದರ ವೈಶಿಷ್ಟ್ಯಗಳು ಸಹ ಅಷ್ಟೇ ಅದ್ಭುತವಾಗಿವೆ.

ವೈಶಿಷ್ಟ್ಯಗಳು, ಎಂಜಿನ್ ಸಾಮರ್ಥ್ಯ: ಟೆಸ್ಲಾ ಮಾಡೆಲ್ Y ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಎಲ್ಲಾ LED ಲೈಟ್ಸ್​, ಪ್ರೀಮಿಯಂ ಇಂಟೀರಿಯರ್​, 15.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೀಟೆಡ್​ ಮತ್ತು ಏರ್​ ಹೊಂದಿರುವ ಸೀಟುಗಳು, ಅತ್ಯುತ್ತಮ ಬೆಳಕು, 9-ಸ್ಪೀಕರ್ ಪ್ರೀಮಿಯಂ ಸ್ಟೀರಿಯೊ ಸಿಸ್ಟಮ್ ಮತ್ತು ಗ್ಲಾಸ್​ ರೂಫ್​ ಅನ್ನು ಒಳಗೊಂಡಿದೆ.

ಸುರಕ್ಷತೆಯ ವಿಷಯದಲ್ಲಿ, ಆಟೋಮೆಟಿಕ್​ ಎಮರ್ಜಿಂಗ್​ ಬ್ರೇಕಿಂಗ್ ಮತ್ತು ಬ್ಲೈಂಡ್ ಕೊಲಿಷನ್ ಅಲರ್ಟ್‌ನಂತಹ ವೈಶಿಷ್ಟ್ಯಗಳಿವೆ. ಈ ಕಾರಿನಲ್ಲಿರುವ 220 kW (kW) ಮೋಟಾರ್ ಗರಿಷ್ಠ 295 bhp ಪವರ್ ಮತ್ತು 420 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಟೆಸ್ಲಾ ಸ್ಥಾನ: ಟೆಸ್ಲಾ ಬಹಳ ಸಮಯದಿಂದ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲಿ ದೈತ್ಯ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಟೆಸ್ಲಾ ಮಾಡೆಲ್ Y ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ರೋಹಿತ್ ಶರ್ಮಾರಂತಹ ಸೆಲೆಬ್ರಿಟಿಗಳು ಈ ಕಾರನ್ನು ಖರೀದಿಸುವುದರಿಂದ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆಯಲ್ಲಿ ಜನರ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ವೀಕ್ಷಕರು ನಂಬುತ್ತಾರೆ. ಭಾರತವು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯತ್ತ ವೇಗವಾಗಿ ಸಾಗುತ್ತಿರುವ ಸಮಯದಲ್ಲಿ ಟೆಸ್ಲಾ ಆಗಮನವು ಬಹಳ ನಿರ್ಣಾಯಕವಾಗಿದೆ.

ನಂಬರ್ ಪ್ಲೇಟ್ ಹಿಂದಿನ ಕಥೆ: ರೋಹಿತ್ ಶರ್ಮಾ ಐಷಾರಾಮಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಅವರು ಹೊಸದಾಗಿ ಖರೀದಿಸಿದ ಟೆಸ್ಲಾ ಮಾಡೆಲ್ Yನ ನಂಬರ್ ಪ್ಲೇಟ್‌ನಲ್ಲಿರುವ 3015 ಸಂಖ್ಯೆ ಬಹಳ ವಿಶೇಷವಾಗಿದೆ. ಇದರಲ್ಲಿ 30 ರೋಹಿತ್ ಅವರ ಮಗಳ ಜನ್ಮ ದಿನಾಂಕವಾದ ಡಿಸೆಂಬರ್ 30 ಅನ್ನು ಸೂಚಿಸುತ್ತದೆ. ಅದೇ ರೀತಿ 15 ಅವರ ಮಗನ ಜನ್ಮ ದಿನಾಂಕವಾದ ನವೆಂಬರ್ 15 ಅನ್ನು ಸೂಚಿಸುತ್ತದೆ.

ರೋಹಿತ್ ತಮ್ಮ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ನಂಬರ್ ಪ್ಲೇಟ್‌ನಲ್ಲಿ ಅವರ ಜನ್ಮ ದಿನಾಂಕಗಳನ್ನು ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ. ರೋಹಿತ್ ಈಗಾಗಲೇ ಲಂಬೋರ್ಘಿನಿ ಉರುಸ್ SE, ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಿಡಿಸ್-ಬೆನ್ಜ್ S-ಕ್ಲಾಸ್, BMW M5 ನಂತಹ ಅನೇಕ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಈ ಸಂಗ್ರಹಕ್ಕೆ ಇತ್ತೀಚಿನ ಸೇರ್ಪಡೆಯಾದ ಟೆಸ್ಲಾ ಮಾಡೆಲ್ Y ಎಲೆಕ್ಟ್ರಿಕ್ ವಾಹನಗಳ ಮೇಲಿನ ಅವರ ಆಸಕ್ತಿಯನ್ನು ಪ್ರದರ್ಶಿಸುತ್ತದೆ.

ಓದಿ: ಫ್ಯಾಮಿಲಿ ಪ್ರವಾಸಕ್ಕಾಗಿ ಹೊಸ ಮಾಡೆಲ್​ ಪರಿಚಯಿಸಿದ ಕಿಯಾ ಇಂಡಿಯಾ! ಬೆಲೆ ಎಷ್ಟು ಗೊತ್ತಾ?