Moon Mission Fail: ಜಪಾನ್‌ನ ಚಂದ್ರಯಾನ ಮಿಷನ್ ಮತ್ತೊಮ್ಮೆ ವಿಫಲವಾಗಿದೆ. ಜಪಾನ್‌ನ ಖಾಸಗಿ ಬಾಹ್ಯಾಕಾಶ ಸಂಸ್ಥೆ ಐಸ್ಪೇಸ್ ಶುಕ್ರವಾರ ತನ್ನ ಮಾನವರಹಿತ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ ಎಂದು ದೃಢಪಡಿಸಿದೆ. ಎರಡು ವರ್ಷಗಳಲ್ಲಿ ಇದು ಚಂದ್ರನ ಮೇಲೆ ಇಳಿಯಲು ಜಪಾನ್ ಮಾಡಿದ ಎರಡನೇ ಪ್ರಯತ್ನವಾಗಿತ್ತು. 2023ರ ಆರಂಭದಲ್ಲಿ ಜಪಾನ್‌ನ ಚಂದ್ರಯಾನ ಲ್ಯಾಂಡರ್ ಸ್ಮೂಥ್ ಲ್ಯಾಂಡಿಂಗ್ ಆಗದೇ ನೆಲಕ್ಕೆ ಅಪ್ಪಳಿಸಿತು.
ಶುಕ್ರವಾರ ರೆಸಿಲಿಯನ್ಸ್ ಎಂಬ ಲ್ಯಾಂಡರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡ ಕೆಲವು ಗಂಟೆಗಳ ನಂತರ ಟೋಕಿಯೊ ಮೂಲದ ಕಂಪನಿ ಐಸ್ಪೇಸ್ ತಮ್ಮ ಮಿಷನ್ ವಿಫಲವಾಗಿದೆ ಎಂದು ಹೇಳಿದೆ. ‘ಜೂನ್ 6ರ ಬೆಳಗ್ಗೆ 8 ಗಂಟೆಯ ನಂತರ ಲ್ಯಾಂಡರ್‌ನೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಿಷನ್ ಪೂರ್ಣಗೊಳ್ಳುವುದಿಲ್ಲ’ ಎಂದು ಸಂಸ್ಥೆ ಹೇಳಿಕೆ ನೀಡಿದೆ.
ಐಸ್ಪೇಸ್ ಸಂಸ್ಥಾಪಕ ಮತ್ತು ಸಿಇಒ ಟಕೇಶಿ ಹಕಮಾಡಾ, ‘ಈ ಚಂದ್ರಯಾನ ಮಿಷನ್ ಯಶಸ್ವಿಯಾಗಿ ಮಾಡುವ ಸಾಧ್ಯತೆ ಆಗಲಿಲ್ಲ. ಇಲ್ಲಿಯವರೆಗೆ ಸ್ವೀಕರಿಸಿದ ಟೆಲಿಮೆಟ್ರಿ ಡೇಟಾವನ್ನು ವಿಶ್ಲೇಷಿಸುವುದು ಮತ್ತು ಲ್ಯಾಂಡಿಂಗ್ ವೈಫಲ್ಯಕ್ಕೆ ಕಾರಣವನ್ನು ಕಂಡುಹಿಡಿಯುವುದು ನಮ್ಮ ಆದ್ಯತೆಯಾಗಿದೆ’ ಎಂದು ಹೇಳಿದರು.
As of 8:00 a.m. on June 6, 2025, mission controllers have determined that it is unlikely that communication with the lander will be restored and therefore completing Success 9 is not achievable. It has been decided to conclude the mission.
— ispace (@ispace_inc) June 6, 2025
“Given that there is currently no… pic.twitter.com/IoRUfggoiQ
ಜನವರಿ 2025 ರಲ್ಲಿ ಜಪಾನ್ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನೊಂದಿಗೆ ರೆಸಿಲಿಯನ್ಸ್ ಲ್ಯಾಂಡರ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಅದು ಸುಮಾರು ಐದು ತಿಂಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿತು. ಅಂದ್ರೆ ಬಾಹ್ಯಾಕಾಶ ನೌಕೆ ಮೇ ತಿಂಗಳಲ್ಲಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು ಮತ್ತು ನಂತರ ಚಂದ್ರನ ಉತ್ತರ ಭಾಗದಲ್ಲಿರುವ ‘ಮೇರ್ ಫ್ರಿಗೋರಿಸ್’ ಎಂಬ ಸ್ಥಳದಲ್ಲಿ ಇಳಿಯಬೇಕಿತ್ತು. ಲ್ಯಾಂಡಿಂಗ್ ಅನ್ನು IST ಮಧ್ಯಾಹ್ನ 12:47 ಕ್ಕೆ ಯೋಜಿಸಲಾಗಿತ್ತು. ಇದನ್ನು ಪ್ರಪಂಚದಾದ್ಯಂತ ಸಾವಿರಾರು ವೀಕ್ಷಕರು ನೇರ ಪ್ರಸಾರ ವೀಕ್ಷಿಸುತ್ತಿದ್ದರು. ಆದರೂ ರೆಸಿಲಿಯನ್ಸ್ 100 ಕಿಮೀ ಕಕ್ಷೆಯಿಂದ ಇಳಿಯಲು ಪ್ರಾರಂಭಿಸಿದ ತಕ್ಷಣ ಮಿಷನ್ ನಿಯಂತ್ರಕಗಳು ಲ್ಯಾಂಡರ್‌ನೊಂದಿಗಿನ ಎಲ್ಲಾ ಸಂಪರ್ಕವನ್ನು ಕಳೆದುಕೊಂಡವು.
ಇತಿಹಾಸ ಸೃಷ್ಟಿಸಿದ್ದ ಚಂದ್ರಯಾನ 3: 2023 ರ ಆರಂಭದಲ್ಲಿ ಚಂದ್ರಯಾನ 3 ಅನ್ನು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಇತಿಹಾಸ ಸೃಷ್ಟಿಸಿತು. ಇದರೊಂದಿಗೆ ಭಾರತವು ಅಮೆರಿಕ, ಚೀನಾ ಮತ್ತು ರಷ್ಯಾದಂತಹ ದೇಶಗಳ ಗಣ್ಯ ಕ್ಲಬ್‌ಗೆ ಸೇರಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ದೇಶವಾಯಿತು ಭಾರತ.
ಓದಿ: ಬಹುನಿರೀಕ್ಷಿತ ಟಾಟಾ ಅವಿನ್ಯಾ ಇವಿ ಇನ್ನೂ ಎರಡು ವರ್ಷ ವಿಳಂಬ: ಕಾರಣವೇನು?