Blue Origin Mission: ಜೆಫ್ ಬೆಜೋಸ್ ಅವರ ಕಂಪನಿ ಬ್ಲೂ ಒರಿಜಿನ್ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಅವರ ನಿಶ್ಚಿತ ವಧು ಲಾರೆನ್ ಸ್ಯಾಂಚೆಜ್ ಎಲ್ಲಾ ಮಹಿಳಾ ಪ್ರಸಿದ್ಧ ಸಿಬ್ಬಂದಿಯೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದರು. ಈ ಗುಂಪಿನಲ್ಲಿ ಪ್ರಸಿದ್ಧ ಗಾಯಕಿ ಕೇಟಿ ಪೆರ್ರಿ ಮತ್ತು 'ಸಿಬಿಎಸ್ ಮಾರ್ನಿಂಗ್' ಹೋಸ್ಟ್ ಗೇಲ್ ಕಿಂಗ್ ಅವರಂತಹ ಪ್ರಸಿದ್ಧ ಮಹಿಳೆಯರು ಸೇರಿದ್ದಾರೆ. ಈ ವಿಮಾನವು ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಅಲೆಯ ಭಾಗವಾಗಿದೆ. ಅಲ್ಲಿ ಶ್ರೀಮಂತರು ಮತ್ತು ಪ್ರಸಿದ್ಧರು ಈಗ ಸುಲಭವಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸಬಹುದಾಗಿದೆ.
ಅಮೆರಿಕದ ಕೈಗಾರಿಕೋದ್ಯಮಿ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಯ ರಾಕೆಟ್ ಮೂಲಕ ಆರು ಮಹಿಳೆಯರು ಬಾಹ್ಯಾಕಾಶ ಪ್ರಯಾಣವನ್ನು ಮಾಡಿದರು. ಟೆಕ್ಸಾಸ್‌ನ ವ್ಯಾನ್ ಹಾರ್ನ್ ಉಡಾವಣಾ ಕೇಂದ್ರದಿಂದ ಬೆಳಗ್ಗೆ 9.30ಕ್ಕೆ ರಾಕೆಟ್ ಉಡಾವಣೆಗೊಂಡಿತು. ಸುಮಾರು 11 ನಿಮಿಷಗಳ ನಂತರ ಮಿಷನ್ ಹಿಂತಿರುಗಿತು. ಈ ಅವಧಿಯಲ್ಲಿ ರಾಕೆಟ್ ಹೋಗಿ ಬರುವುದು ಸೇರಿ ಒಟ್ಟು 212 ಕಿ.ಮೀ. ಇದು 1963 ರಿಂದ ಬಾಹ್ಯಾಕಾಶ ಯಾತ್ರೆಗೆ ಹೋದ ಮೊದಲ ಮಹಿಳಾ ಸಿಬ್ಬಂದಿಯಾಗಿದೆ. ಇದಕ್ಕೂ ಮೊದಲು 1963 ರಲ್ಲಿ ರಷ್ಯಾದ ಇಂಜಿನಿಯರ್ ವ್ಯಾಲೆಂಟಿನಾ ತೆರೆಶ್ಕೋವಾ ಬಾಹ್ಯಾಕಾಶಕ್ಕೆ ಏಕಾಂಗಿಯಾಗಿ ಪ್ರಯಾಣಿಸಿರುವುದು ಗಮನಾರ್ಹ..
A smooth landing in West Texas.
— Blue Origin (@blueorigin) April 14, 2025
Book your flight on New Shepard: https://t.co/RP3Lixyr4Y pic.twitter.com/xPiu9LMtlH
11 ನಿಮಿಷ ಪ್ರಯಾಣ, 1.15 ಕೋಟಿ ವೆಚ್ಚ: ಬ್ಲೂ ಒರಿಜಿನ್ ರಾಕೆಟ್‌ನಲ್ಲಿ ಬಾಹ್ಯಾಕಾಶದಲ್ಲಿ 11 ನಿಮಿಷಗಳ ಪ್ರಯಾಣದ ವೆಚ್ಚ ಅಂದಾಜು 1.15 ಕೋಟಿ ರೂ. ಆಗಿದೆ. ಈ ಬಗ್ಗೆ ಮಾತನಾಡಿದ ಬ್ಲೂ ಒರಿಜಿನ್ ವಕ್ತಾರ ಬಿಲ್ ಕಿರ್ಕೋಸ್, ಈ ಬಾಹ್ಯಾಕಾಶ ಪ್ರಯಾಣದಲ್ಲಿ ಕೆಲವರು ಶುಲ್ಕವನ್ನು ಪಾವತಿಸಿದ್ರೆ, ಇತರರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಆದರೆ ಅವರು ತಮ್ಮ ಪ್ರಯಾಣ ದರವನ್ನು ಯಾರು ಪಾವತಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.
Higher res version. pic.twitter.com/5TCBLIU9Ay
— Dave Limp (@davill) April 14, 2025
ಈ ಮಿಷನ್ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಯ ನ್ಯೂ ಶೆಪರ್ಡ್ ಕಾರ್ಯಕ್ರಮದ ಭಾಗವಾಗಿದೆ. ಇದನ್ನು NS-31 ಎಂದು ಹೆಸರಿಸಲಾಗಿದೆ. ಕೇಟಿ ಪೆರ್ರಿ ಮತ್ತು ಲಾರೆನ್ ಅವರಲ್ಲದೇ ಪತ್ರಕರ್ತೆ ಗೇಲ್ ಕಿಂಗ್, ಮಾನವ ಹಕ್ಕುಗಳ ಕಾರ್ಯಕರ್ತೆ ಅಮಂಡಾ ನ್ಗುಯೆನ್, ಚಲನಚಿತ್ರ ನಿರ್ಮಾಪಕಿ ಕ್ಯಾರಿನ್ ಫ್ಲಿನ್ ಮತ್ತು ಮಾಜಿ ನಾಸಾ ರಾಕೆಟ್ ವಿಜ್ಞಾನಿ ಐಶಾ ಬೋವ್ ಸಹ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಿದ್ದರು.
ಶಾಂತ ಮತ್ತು ಸುಂದರ: ನ್ಯೂ ಶೆಪರ್ಡ್ ರಾಕೆಟ್‌ನಲ್ಲಿ ಬಾಹ್ಯಾಕಾಶ ಪ್ರಯಾಣಿಸಿ ಹಿಂದಿರುಗಿದ ವಿಶ್ವದ ಶ್ರೀಮಂತ ಕುಟುಂಬಗಳ ಮಹಿಳೆಯರು ತಮ್ಮ ಅನುಭವವನ್ನು ಹೇಳುವಾಗ ತುಂಬಾ ಭಾವುಕರಾದರು. ಪ್ರಪಂಚವು ಅತ್ಯಂತ ಶಾಂತಿಯುತ ಮತ್ತು ಸುಂದರವಾಗಿದೆ ಎಂದರು. ಇನ್ನು ಸಿಂಗರ್ ಕೇಟಿ ಪೆರ್ರಿ ಭೂಮಿಗೆ ಹಿಂದುರುಗಿದ ತಕ್ಷಣ ಭೂತಾಯಿಗೆ ಮುತ್ತಿಕ್ಕಿ ಗೌರವಿಸಿದರು.
✨ Weightless and limitless. pic.twitter.com/GQgHd0aw7i
— Blue Origin (@blueorigin) April 14, 2025
'ಕ್ಯಾಪ್ಸುಲ್ ಲ್ಯಾಂಡಿಂಗ್, ಸ್ವಾಗತ, NS-31 ಸಿಬ್ಬಂದಿ!' ಈ ವೇಳೆ ಅವರೆಲ್ಲರೂ ಭೂಮಿಯಿಂದ 100 ಕಿಲೋಮೀಟರ್ (60 ಮೈಲಿ) ಎತ್ತರಕ್ಕೆ ಹೋದರು. ಕರ್ಮಾನ್ ರೇಖೆಯನ್ನು ದಾಟಿದರು ಮತ್ತು ತೂಕವಿಲ್ಲದ ಅನುಭವವನ್ನು ಅನುಭವಿಸಿದರು ಎಂದು ಬಾಹ್ಯಾಕಾಶ ಕಂಪನಿ ತನ್ನ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ.
ಇದು ಬ್ಲೂ ಒರಿಜಿನ್‌ನ 11 ನೇ ಮಾನವಸಹಿತ ಬಾಹ್ಯಾಕಾಶ ಯಾನವಾಗಿದೆ. ಈ ಕಾರ್ಯಾಚರಣೆಯು ನಟ ವಿಲಿಯಂ ಶಾಟ್ನರ್ ಸೇರಿದಂತೆ ಹೈ-ಪ್ರೊಫೈಲ್ ಬ್ಲೂ ಒರಿಜಿನ್ ಪ್ರಯಾಣಿಕರ ಪಟ್ಟಿಗೆ ಪೆರ್ರಿಯನ್ನು ಸೇರಿಸುತ್ತದೆ. ಹಾರಾಟದ ಮೊದಲು, ಪೆರ್ರಿ ಅವರು ಕಾರ್ಲ್ ಸಗಾನ್ ಅವರ ಕೃತಿಗಳನ್ನು ಓದುವ ಮೂಲಕ ಮತ್ತು ಖಗೋಳ ಭೌತಶಾಸ್ತ್ರಕ್ಕೆ ಧುಮುಕುವ ಮೂಲಕ ಮಾನಸಿಕವಾಗಿ ತಯಾರಿ ನಡೆಸಿರುವುದರ ಬಗ್ಗೆ ವಿವರಿಸಿದರು.
The NS-31 crew is certified ‘ready to fly to space’ by CrewMember 7 Sarah Knights. The launch window opens tomorrow at 8:30 a.m. CDT / 13:30 UTC.
— Blue Origin (@blueorigin) April 14, 2025
You can watch the live webcast here tomorrow at 7 a.m. CDT, hosted by Charissa Thompson, Kristin Fisher, and Ariane Cornell. pic.twitter.com/auKPJvtSl3
'ನನಗೆ ಮೊದಲಿನಿಂದಲೂ ನಕ್ಷತ್ರಗಳ ಬಗ್ಗೆ ಆಸಕ್ತಿ. ನಾವೆಲ್ಲರೂ ಸ್ಟಾರ್ಡಸ್ಟ್ನಿಂದ ಮಾಡಲ್ಪಟ್ಟಿದ್ದೇವೆ. ಈ ಮಿಷನ್ ಬಾಹ್ಯಾಕಾಶ ಪ್ರಯಾಣಕ್ಕಿಂತ ಹೆಚ್ಚಿನದಾಗಿದೆ. ಇದು ಗಡಿಗಳನ್ನು ದಾಟಿ ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತದೆ. STEM ಮತ್ತು ಮಹಿಳಾ ಸಬಲೀಕರಣದಲ್ಲಿ ಅವರ ಆಸಕ್ತಿಯೊಂದಿಗೆ ಮಿಷನ್ ಹೊಂದಿಕೆಯಾಗುತ್ತದೆ ಎಂದು ಪಾಪ್ ಐಕಾನ್ ಹೇಳಿದರು.
ಓದಿ: ಡ್ರೋಣ್‌ಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸಬಲ್ಲ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆ ಅಭಿವೃದ್ಧಿಪಡಿಸಿದ DRDO