Poco F7: ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಪೊಕೊ ತನ್ನ 'ಪೊಕೊ ಎಫ್7' ಬಿಡುಗಡೆ ದಿನಾಂಕ ಘೋಷಿಸಿದೆ. ಈ ಸಾಧನದ ಭಾರತೀಯ ರೂಪಾಂತರದ ಬ್ಯಾಟರಿ ಸಾಮರ್ಥ್ಯ ಮತ್ತು ಫಾಸ್ಟ್ ಚಾರ್ಜಿಂಗ್ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಫ್ಲಿಪ್‌ಕಾರ್ಟ್ ರಚಿಸಿದ ಪ್ರೋಮೋ ಪೇಜ್ ಮುಂಬರುವ ಫೋನ್ 7,550mAh ಬ್ಯಾಟರಿ ಪಡೆಯಲಿದೆ ಎಂದು ತೋರಿಸುತ್ತಿದೆ.
ಇದು ಭಾರತದಲ್ಲಿ ಅತಿದೊಡ್ಡ ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಆಗಲಿದೆ. ಪ್ರಸ್ತುತ, ‘ಐಕ್ಯೂ ಝಡ್10’ ಮತ್ತು ‘ವಿವೋ ಟಿ4’ 7,300mAh ನ ಅತಿದೊಡ್ಡ ಬ್ಯಾಟರಿ ಸಾಮರ್ಥ್ಯ ಹೊಂದಿವೆ. ಅವುಗಳನ್ನೂ ಮೀರಿಸಲು ಕಂಪನಿ ಅತಿದೊಡ್ಡ ಬ್ಯಾಟರಿಯನ್ನು ಹೊಂದಿರುವ ‘ಪೊಕೊ ಎಫ್7’ ಫೋನ್ ತರಲು ಸಿದ್ಧವಾಗಿದೆ.
Forget finding charging points, find fun adventures 🏕️🌌🌄
— POCO India (@IndiaPOCO) June 15, 2025
.
.
.
.
.#AllPowerNoBS #ComingSoon #Flipkart #POCO pic.twitter.com/Yj7EX34h7w
ಯಾವಾಗ ಬಿಡುಗಡೆ?: ಕಂಪನಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಫೋನ್ ಅನ್ನು ಜೂನ್ 24ರ ಸಂಜೆ 5:30ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ.
Poco F7 is launching in Indonesia on June 25, 2025.
— Abhishek Yadav (@yabhishekhd) June 16, 2025
Most probably, the Indian launch will take place on the same day, i.e., June 25.
Thanks .@aravind_boddeda for sharing pic.twitter.com/1m0CXQcmus
‘ಪೋಕೊ ಎಫ್7’ ಬೆಲೆ (ಅಂದಾಜು): ಟಿಪ್‌ಸ್ಟರ್ ಅಭಿಷೇಕ್ ಯಾದವ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ‘ಪೋಕೊ ಎಫ್7’ ಸ್ಮಾರ್ಟ್‌ಫೋನ್‌ನ ಬೆಲೆ ಸುಮಾರು ರೂ. 30,000 ಆಗಿರಬಹುದು. ಮತ್ತೊಬ್ಬ ಟಿಪ್‌ಸ್ಟರ್ ಸುಧಾಂಶು ಅಂಬೋರ್ ಅದರ ಮೂಲ ರೂಪಾಂತರದ ಪ್ರಮುಖ ಅಂದಾಜು ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಅವರು ಈ ಸ್ಮಾರ್ಟ್‌ಫೋನ್‌ನ ಸೋರಿಕೆಯಾದ ವಿನ್ಯಾಸ ರೆಂಡರ್‌ಗಳನ್ನೂ ಸಹ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಪ್ರಕಾರ, ಹ್ಯಾಂಡ್‌ಸೆಟ್ ಬ್ಲ್ಯಾಕ್, ಸಿಲ್ವರ್ ಮತ್ತು ವೈಟ್ ಶೇಡ್ಸ್ನೊಂದಿಗೆ ಎಲಿಪ್ಟಿಕಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಹಿಂದೆ ಸೋರಿಕೆಯಾದ ವಿನ್ಯಾಸ ರೆಂಡರ್‌ಗಳಿಗೆ ಹೊಂದಿಕೆಯಾಗುತ್ತದೆ.
POCO F7 5G with its complete specs sheet & renders! [Thread] (1/9)
— Sudhanshu Ambhore (@Sudhanshu1414) June 14, 2025
- Snapdragon 8s Gen 4 | LPDDR5X + UFS 4.1
- 6.83" amoled, 2772 × 1280, 120hz refresh rate, 480hz touch sampling rate, 3200nits brightness, 3840hz pwm dimming
- 50mp sony imx882 (ois) f="" 1.5, 1.6μm + 8mp ultrawide… pic.twitter.com/jy74BuxZcg
ಪೋಕೊ ಎಫ್7 ವಿಶೇಷತೆಗಳು (ಅಂದಾಜು): ‘ಪೋಕೊ ಎಫ್7’ ಜಾಗತಿಕ ರೂಪಾಂತರವು 6,500mAh ಬ್ಯಾಟರಿ ಹೊಂದಿರುತ್ತದೆ. ಆದರೆ ಭಾರತೀಯ ರೂಪಾಂತರವು 7,550mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಅಂಬೋರ್ ಬಹಿರಂಗಪಡಿಸಿದ್ದಾರೆ. ಇದರ ಹೊರತಾಗಿ ಜಾಗತಿಕ ಮತ್ತು ಭಾರತೀಯ ರೂಪಾಂತರಗಳು ಒಂದೇ ಆಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಈ ಫೋನ್ 6.83-ಇಂಚಿನ AMOLED (2,772x1,280 ಪಿಕ್ಸೆಲ್‌ಗಳು) ರೆಸಲ್ಯೂಶನ್ ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 3,200 ನೀಟ್ಸ್ ಬ್ರೈಟ್ನೆಸ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸ್ನಾಪ್‌ಡ್ರಾಗನ್ 8s ಜನರೇಷನ್ ಚಿಪ್‌ಸೆಟ್, LPDDR5X RAM ಮತ್ತು UFS 4.1 ಸಂಗ್ರಹಣೆಯಿಂದ ಚಾಲಿತವಾಗುವ ನಿರೀಕ್ಷೆಯಿದೆ.
ಇದಕ್ಕೂ ಹೆಚ್ಚುವರಿಯಾಗಿ, ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50MP ಸೋನಿ IMX882 ಪ್ರೈಮರಿ ರಿಯರ್ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 20MP ಮುಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
What you knew was just the trailer. Asli power drops now.💪🏼
— POCO India (@IndiaPOCO) June 17, 2025
Launching on 24th June, 5:30 PM IST on #Flipkart
.
.
.#POCOF7 #AllPowerNoBS pic.twitter.com/iDNxlPxtfw
ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ ಇದು IP68 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಅಲ್ಯೂಮಿನಿಯಂ ಮಧ್ಯದ ಫ್ರೇಮ್ ಮತ್ತು ಗ್ಲಾಸ್ನ ಹಿಂಭಾಗದ ಫಲಕವನ್ನು ಹೊಂದಿರುತ್ತದೆ ಎಂದು ತಾಂತ್ರಿಕ ತಜ್ಞರು ನಿರೀಕ್ಷಿಸುತ್ತಾರೆ.
ಇದನ್ನೂ ಓದಿ: ಪ್ರೀಮಿಯಂ ಫೀಚರ್ಸ್, ಬಿಗ್ ಬ್ಯಾಟರಿ: ಮಾರುಕಟ್ಟೆಗೆ ಬರಲು ಸಜ್ಜಾಗ್ತಿದೆ ‘ವಿವೋ X200 FE’