ETV Bharat / technology

ಕೇವಲ ₹7 ಲಕ್ಷದೊಳಗೆ ಎಸ್​ಯುವಿ ಕಾರುಗಳು; ಹೇಗಿವೆ ಗೊತ್ತಾ ಇವುಗಳ ಆಕರ್ಷಕ ಫೀಚರ್ಸ್​? - AFFORDABLE SUV IN INDIA

Affordable SUV in India: ನೀವು 7 ಲಕ್ಷ ರೂ.ಗಿಂತ ಕಡಿಮೆ ಬೆಲೆಯ SUV ಖರೀದಿಸಲು ಬಯಸಿದರೆ ಇಲ್ಲಿ ನಾಲ್ಕು ಆಯ್ಕೆಗಳಿವೆ.. ಅದರ ಎಂಜಿನ್​, ಫೀಚರ್​ ಸೇರಿದಂತೆ ಇತರೆ ಮಾಹಿತಿಗಳ ವಿವರ ಇಲ್ಲಿದೆ..

BEST SUVS UNDER 8 LAKH  SUV UNDER RS 7 LAKH  BEST SUVS UNDER 10 LAKH  BUDGET SUVS IN INDIA
ಎಸ್​ಯುವಿ ಕಾರು (Photo Credit- Nissan Motor)
author img

By ETV Bharat Tech Team

Published : April 11, 2025 at 11:01 AM IST

3 Min Read

Affordable SUV in India: ಭಾರತೀಯ ಮಾರುಕಟ್ಟೆಯಲ್ಲಿ SUVಗಳಿಗೆ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಕಾರು ತಯಾರಿಕಾ ಕಂಪನಿಗಳು ಪ್ರತಿಯೊಂದು ಬೆಲೆ ವಿಭಾಗದಲ್ಲೂ SUVಗಳನ್ನು ಮಾರಾಟ ಮಾಡುತ್ತಿವೆ. ಈ ಸಂದರ್ಭದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ SUVಗಳ ಬಗ್ಗೆ ತಿಳಿದುಕೊಳ್ಳೋಣ. ಅದು ಕೂಡ 7 ಲಕ್ಷ ರೂ. ಒಳಗೆ ಲಭ್ಯವಿರುವ ಟಾಪ್ SUVಗಳ ಪಟ್ಟಿ ಇಲ್ಲಿದೆ.

1. Tata Punch: ಟಾಟಾ ಮೋಟಾರ್ಸ್‌ನ ಅತ್ಯಂತ ಚಿಕ್ಕ ಎಸ್‌ಯುವಿ ಟಾಟಾ ಪಂಚ್ ಅನ್ನು ಕಂಪನಿಯು 6.20 ಲಕ್ಷ ರೂ.ಗಳಿಂದ 10.32 ಲಕ್ಷ ರೂ.ಗಳವರೆಗಿನ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಪ್ಯೂರ್ ಮತ್ತು ಅಡ್ವೆಂಚರ್ ರೂಪಾಂತರಗಳನ್ನು 7 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಆದರೆ ಈ ಬಜೆಟ್‌ನಲ್ಲಿ ಕಂಪನಿಯು ಅವುಗಳನ್ನು 1.2-ಲೀಟರ್, 3-ಸಿಲಿಂಡರ್, ನ್ಯಾಚೂರಲಿ ಆಸ್ಪಿರೆಟೆಡ್​ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡುತ್ತಿದೆ. ಆದರೂ ಇವುಗಳಲ್ಲಿ CNG ಆಯ್ಕೆಯೂ ಲಭ್ಯವಿದೆ.

BEST SUVS UNDER 8 LAKH  SUV UNDER RS 7 LAKH  BEST SUVS UNDER 10 LAKH  BUDGET SUVS IN INDIA
Tata Punch (Photo Credit- Tata Motor)

ಈ ಎಂಜಿನ್ ಪೆಟ್ರೋಲ್ ಇಂಧನದಲ್ಲಿ 87bhp ಪವರ್ ಮತ್ತು 115Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅದೇ ಎಂಜಿನ್ ಸಿಎನ್‌ಜಿಯಲ್ಲಿ 72 ಬಿಎಚ್‌ಪಿ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇವುಗಳ ಜೊತೆಗೆ ಟಾಟಾ ಪಂಚ್ ಅನೇಕ ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಮಾಸಿಕ ಮಾರಾಟವೂ ತುಂಬಾ ಚೆನ್ನಾಗಿದೆ.

Hyundai Exter (Photo Credit- Hyundai Motor India)

2. Hyundai Exter: ಪಟ್ಟಿಯಲ್ಲಿರುವ ಎರಡನೇ ವಾಹನವೆಂದರೆ ಹುಂಡೈ ಎಕ್ಸ್‌ಟೆರಾ.. ಇದು ಒಂದು ಸಣ್ಣ SUV ಆಗಿದೆ. ಇದು ಕೊರಿಯನ್ ತಯಾರಕರ ಭಾರತೀಯ ಅಂಗವಾದ ಹುಂಡೈ ಮೋಟಾರ್ ಇಂಡಿಯಾದಿಂದ ಬಂದಿದೆ. ಕಂಪನಿಯು ಈ ಕಾರನ್ನು 6.21 ಲಕ್ಷ ರೂ.ಗಳಿಂದ 10.51 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ. ಈ ಕಾರಿನ EX ಟ್ರಿಮ್ ಅನ್ನು 7 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಆದರೂ, ಇದು 1.2-ಲೀಟರ್, 4-ಸಿಲಿಂಡರ್, ನ್ಯಾಚೂರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಹುಂಡೈ ಎಕ್ಸ್‌ಟೆರಾ ಸಿಎನ್‌ಜಿ ಇಂಧನದೊಂದಿಗೆ ಲಭ್ಯವಿದೆ ಎಂಬುದನ್ನು ಗ್ರಾಹಕರು ಗಮನಿಸಬೇಕು. ಕಂಪನಿಯು ಈ ಕಾರಿನಲ್ಲಿ ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತದೆ.

Renault Kiger (Photo Credit- Renault India)

3. Renault Kiger: ಫ್ರೆಂಚ್ ಕಾರು ತಯಾರಕ ರೆನಾಲ್ಟ್‌ನ ಭಾರತೀಯ ವಿಭಾಗವಾದ ರೆನಾಲ್ಟ್ ಇಂಡಿಯಾದ ಕಾಂಪ್ಯಾಕ್ಟ್ ಎಸ್‌ಯುವಿ ರೆನಾಲ್ಟ್ ಕಿಗರ್ ಬೆಲೆ ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಬಜೆಟ್‌ನಲ್ಲಿ ನೀವು ಈ ಕಾರಿನ RXE ಮತ್ತು RXL ಟ್ರಿಮ್‌ಗಳನ್ನು ಪಡೆಯಬಹುದು. ಕಂಪನಿಯು ಈ ಕಾರನ್ನು ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತಿದೆ. ಒಂದು 1.0-ಲೀಟರ್ ನ್ಯಾಚೂರಲಿ ಆಸ್ಪಿರೆಟೆಡ್ ಮತ್ತು ಇನ್ನೊಂದು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್​ ಆಗಿದೆ.

ಇದರ ಮೊದಲ ಎಂಜಿನ್ 71bhp ಪವರ್ ಮತ್ತು 91Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎರಡನೇ ಟರ್ಬೊ ಎಂಜಿನ್ 99bhp ಪವರ್ ಮತ್ತು 160Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಇದೆ. ಆದರೂ ಆಟೋಮೆಟಿಕ್​ ಗೇರ್‌ಬಾಕ್ಸ್ ನ್ಯಾಚೂರಲಿ ಆಸ್ಪಿರೆಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಆದರೆ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ CVT ಬರುತ್ತದೆ.

4. Nissan Magnite: ಈ ನಿಸ್ಸಾನ್ ಮೋಟಾರ್ ಕಾಂಪ್ಯಾಕ್ಟ್ SUV ಈ ಪಟ್ಟಿಯಲ್ಲಿರುವ ನಾಲ್ಕನೇ ಕಾರು. ಈ SUV ಯ ವಿಸಿಯಾ B4D ಮತ್ತು ವಿಸಿಯಾ ಪ್ಲಸ್ B4D ಟ್ರಿಮ್‌ಗಳ ಬೆಲೆ ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಕಂಪನಿಯು ಈ ಕಾರನ್ನು ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತಿದೆ: 1.0-ಲೀಟರ್, ನ್ಯಾಚೂರಲಿ ಆಸ್ಪಿರೆಟೆಡ್ ಮತ್ತು 1.0-ಲೀಟರ್, ಟರ್ಬೊ ಪೆಟ್ರೋಲ್ ಎಂಜಿನ್​ ಆಪ್ಶನ್​ಗಳಿವೆ..

Nissan Magnite (Photo Credit- Nissan Motor)

ಕಿಗರ್‌ ಮಾಡೆಲ್​ನಂತೆಯೇ ಈ ಕಾರಿನಲ್ಲಿ ನ್ಯಾಚೂರಲಿ ಆಸ್ಪಿರೆಟೆಡ್ ಎಂಜಿನ್ 71bhp ಪವರ್ ಮತ್ತು 91Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಟರ್ಬೊ ಪೆಟ್ರೋಲ್ ಎಂಜಿನ್ 99bhp ಪವರ್ ಮತ್ತು 160Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಇದೆ. ಆದಾಗ್ಯೂ, ನ್ಯಾಚೂರಲಿ ಆಸ್ಪಿರೆಟೆಡ್ ಎಂಜಿನ್‌ನೊಂದಿಗೆ ಆಟೋಮೆಟಿಕ್​ ಗೇರ್‌ಬಾಕ್ಸ್ ಬರುತ್ತದೆ, ಆದರೆ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ CVT ಜೋಡಿಯಾಗಿ ಬರುತ್ತದೆ.

ಓದಿ: ಕುಟುಂಬದ ಆರಾಮದಾಯಕ ಪ್ರಯಾಣಕ್ಕೆ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ? ಇಲ್ಲಿವೆ ಬೆಸ್ಟ್​ ಕಲೆಕ್ಷನ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.