Road Crashes in SE Asia: ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಏರಿಕೆಯತ್ತ ಸಾಗುತ್ತಿವೆ. ಸದ್ಯ 2021ರಲ್ಲಿ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ರಸ್ತೆ ಅಪಘಾತಗಳ ಕುರಿತು 8ನೇ ವಿಶ್ವಸಂಸ್ಥೆಯ ಜಾಗತಿಕ ರಸ್ತೆ ಸುರಕ್ಷತಾ ವಾರದ ಭಾಗವಾಗಿ ವರದಿ ನೀಡಿದೆ. ಈ ವರದಿಯಲ್ಲಿ 3,30,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಸೇರಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಸೋಮವಾರದಿಂದ ಅಂದ್ರೆ ನಿನ್ನೆಯಿಂದ (12-18 ಮೇ 2025) ದ್ವೈವಾರ್ಷಿಕವಾಗಿ ವಿಶ್ವಸಂಸ್ಥೆ ಜಾಗತಿಕ ರಸ್ತೆ ಸುರಕ್ಷತಾ ವಾರವನ್ನು ಆಚರಿಸಲಾಗುತ್ತದೆ. 'ನಡಿಗೆ ಮತ್ತು ಸೈಕ್ಲಿಂಗ್ ಅನ್ನು ಸುರಕ್ಷಿತಗೊಳಿಸಿ' ಎಂಬ ಧ್ಯೇಯದಡಿ ಎಲ್ಲರಿಗೂ ನಡಿಗೆ ಮತ್ತು ಸೈಕ್ಲಿಂಗ್ ಅನ್ನು ಸುರಕ್ಷಿತವಾಗಿಸುವಂತೆ ವಿಶ್ವಸಂಸ್ಥೆ ಜಗತ್ತಿಗೆ ಒತ್ತಾಯಿಸುತ್ತಿದೆ.
WHO ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಸೈಮಾ ವಾಜೆದ್ ಪ್ರತಿಕ್ರಿಯಿಸಿ, 5 ರಿಂದ 29 ವರ್ಷ ವಯಸ್ಸಿನವರೇ ಹೆಚ್ಚಾಗಿ ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅವು ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿಯಾಗಿ ಮುಂದುವರೆದಿದೆ ಎಂದು ಹೇಳಿದರು.
‘2021 ರಲ್ಲಿ ಮಾತ್ರ ನಮ್ಮ ಪ್ರದೇಶವು ರಸ್ತೆ ಅಪಘಾತಗಳಿಂದ 3,30,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದು ಜಾಗತಿಕ ಒಟ್ಟು ಸಾವುಗಳಲ್ಲಿ ಶೇಕಡಾ 28 ರಷ್ಟಿದೆ. ಪಾದಚಾರಿಗಳು, ಸೈಕ್ಲಿಸ್ಟ್‌ಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸವಾರರು ಸೇರಿದಂತೆ ರಸ್ತೆ ಸವಾರರು ಈ ಸಾವುಗಳಲ್ಲಿ ಶೇಕಡಾ 66 ರವರೆಗೆ ಇದ್ದಾರೆ’ ಎಂದು ವಾಜೆದ್ ಹೇಳಿದರು.
ಚತುಷ್ಪಥ ರಸ್ತೆ ಸಂಚಾರದಲ್ಲಿ ಪಾದಚಾರಿಗಳ ಮತ್ತು ಸೈಕ್ಲಿಸ್ಟ್‌ಗಳು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಜೀವಗಳನ್ನು ಉಳಿಸುವುದರ ಜೊತೆಗೆ ರಸ್ತೆಗಳನ್ನು ಸುರಕ್ಷಿತಗೊಳಿಸಬೇಕಿದೆ. ಸುರಕ್ಷಿತ ರಸ್ತೆಗಳು ಸಮುದಾಯದ ಯೋಗಕ್ಷೇಮವನ್ನು ಸುಧಾರಿಸುವುದಲ್ಲದೆ ಪರಿಸರ ಸುಸ್ಥಿರತೆಯನ್ನು ಹೆಚ್ಚಿಸಬಹುದು ಎಂದು ವಾಜೆದ್ ಹೇಳಿದರು.
‘ನಡಿಗೆ ಮತ್ತು ಸೈಕ್ಲಿಂಗ್‌ಗೆ ಆದ್ಯತೆ ನೀಡುವುದು ದೈಹಿಕ ಚಟುವಟಿಕೆಯನ್ನು ಬೆಂಬಲಿಸುತ್ತದೆ. ಇದು ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಇದು ಮದ್ದಾಗಿದೆ. ನಡಿಗೆ ಮತ್ತು ಸೈಕ್ಲಿಂಗ್ ಮಾನಸಿಕ ಯೋಗಕ್ಷೇಮವನ್ನು ಸಹ ಬೆಂಬಲಿಸುತ್ತದೆ. ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ’ ಎಂದು ವಾಜೆದ್ ಒತ್ತಿ ಹೇಳಿದರು.
ಜಾಗತಿಕವಾಗಿ, ರಸ್ತೆ ಸಂಚಾರ ಅಪಘಾತಗಳು ಸುಮಾರು 1.2 ಮಿಲಿಯನ್ (12 ಲಕ್ಷ) ಜನರನ್ನು ಬಲಿ ತೆಗೆದುಕೊಂಡಿವೆ. ಪ್ರತಿ ವರ್ಷ 50 ಮಿಲಿಯನ್‌ಗಿಂತಲೂ (5 ಕೋಟಿ) ಹೆಚ್ಚು ಜನರು ಗಾಯಗಳಿಗೆ ಒಳಗಾಗುತ್ತಾರೆ. ಜನ-ಕೇಂದ್ರಿತ ಚಲನಶೀಲತೆ ನೀತಿಗಳು, ಸುರಕ್ಷಿತ ರಸ್ತೆ ವಿನ್ಯಾಸ, ಸುರಕ್ಷಿತ ವಾಹನಗಳು ಮತ್ತು ಕಡಿಮೆ ವೇಗ ಮಿತಿಗಳಿಗಾಗಿ ಒತ್ತಾಯಿಸಲು ವಾಜೆದ್ ನಾಗರಿಕ ಸಮಾಜ, ಖಾಸಗಿ ವಲಯ ಮತ್ತು ಸಮುದಾಯಗಳನ್ನು ಒತ್ತಾಯಿಸಿದರು.
ಓದಿ: ಹೊಸ ರಾಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು: ಆಕಾಶದತ್ತ ಭಾರತದ ಕಣ್ಣು