Oppo K13x 5G Launched: ಒಪ್ಪೋ ಇಂದು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕೆ ಸೀರಿಸ್ನ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ Oppo K13x 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್ MIL-STD-810H ಪ್ರಮಾಣೀಕರಣ ಹೊಂದಿದ್ದು, ಕಠಿಣ ವಾತಾವರಣದಲ್ಲಿಯೂ ಬಳಸಬಹುದು. ಈ ಫೋನ್ IP65 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಿಸುತ್ತದೆ.
ಒಪ್ಪೋ K13x 5G ವಿಶೇಷತೆಗಳು: ಒಪ್ಪೋ K13x 5G 6.67-ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. 1604 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ ಮತ್ತು 1000 nits ಪೀಕ್ ಬ್ರೈಟ್ನೆಸ್ ಇದರಲ್ಲಿದೆ. ಡಿಸ್‌ಪ್ಲೇಗೆ ಪಾಂಡ ಗ್ಲಾಸ್ ಪ್ರೊಟೆಕ್ಷನ್ ಅಳವಡಿಸಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಜೊತೆಗೆ ARM Mali-G57 MC2@1072MHz GPU ಹೊಂದಿದೆ.
4GB / 6GB / 8GB LPDDR4X RAM (8GB ವರೆಗೆ ವರ್ಚುವಲ್ RAM ವಿಸ್ತರಣೆ) ಮತ್ತು 128GB / 256GB UFS 2.2 ಸ್ಟೋರೇಜ್ ಹೊಂದಿದೆ. ಮೈಕ್ರೋ SD ಬಳಸಿ 1TB ವರೆಗೂ ವಿಸ್ತರಿಸಬಹುದು. ಆಂಡ್ರಾಯ್ಡ್ 15 ಆಧಾರಿತ ಕಲರ್ OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್‌ಗಾಗಿ ಹಿಂಭಾಗವು f/1.88 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ f/2.05 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಅಳವಡಿಸಲಾಗಿದೆ.
ಅಷ್ಟೇ ಅಲ್ಲದೇ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಮಿಲಿಟರಿ ದರ್ಜೆಯ ಬಾಳಿಕೆ (MIL-STD-810H), ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP65 ರೇಟಿಂಗ್ ಹೊಂದಿದೆ. ಡೈಮೆನ್ಶನ್ ಬಗ್ಗೆ ಹೇಳುವುದಾದರೆ, ಫೋನ್‌ನ ಉದ್ದ 165.71 ಮಿಮೀ, ಅಗಲ 76.24 ಮಿಮೀ, ದಪ್ಪ 7.99 ಮಿಮೀ ಮತ್ತು ತೂಕ 194 ಗ್ರಾಂ ಇದೆ.
ಕೆನೆಕ್ಟಿವಿಟಿ ಆಯ್ಕೆಗಳಲ್ಲಿ 5G NA / NSA, ಡ್ಯುಯಲ್ 4G VoLTE, Wi-Fi, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಈ ಫೋನ್ 45W ಸೂಪರ್‌ವಿಒಒಸಿ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ 6000mAh ಬ್ಯಾಟರಿ ಹೊಂದಿದೆ.
ಒಪ್ಪೋ K13x 5G ಬೆಲೆ: ಒಪ್ಪೋ K13x 5G ನ 4GB + 128GB ರೂಪಾಂತರದ ಬೆಲೆ ರೂ. 11,999, 6GB + 128GB ರೂಪಾಂತರದ ಬೆಲೆ ರೂ. 12,999 ಮತ್ತು 8GB + 256GB ರೂಪಾಂತರದ ಬೆಲೆ ರೂ. 14,999. ಜೂನ್ 27ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಇಂಡಿಯಾ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.
ಮಿಡ್‌ನೈಟ್ ವೈಲೆಟ್ ಮತ್ತು ಸನ್‌ಸೆಟ್ ಪೀಚ್ ಬಣ್ಣಗಳಲ್ಲಿ ಲಭ್ಯವಿದೆ. ಲಾಂಚಿಂಗ್ ಕೊಡುಗೆಯಲ್ಲಿ ನೀವು ಬ್ಯಾಂಕ್ ಕಾರ್ಡ್‌ನೊಂದಿಗೆ ರೂ. 1,000 ರಿಯಾಯಿತಿಯನ್ನು ಪಡೆಯಬಹುದು. ಅಷ್ಟೇ ಅಲ್ಲ, ಮೂರು ತಿಂಗಳ ನೋ ಕಾಸ್ಟ್ EMI ಆಯ್ಕೆಯೂ ಲಭ್ಯವಿದೆ.
ಇದನ್ನೂ ಓದಿ: ಜುಲೈನಲ್ಲಿ ಸ್ವದೇಶಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ: ಹೇಗಿದೆ ಗೊತ್ತಾ ಡಿಸೈನ್?