Oppo K13 5G Launch: ಒಪ್ಪೊ ಶೀಘ್ರದಲ್ಲೇ ತನ್ನ 'Oppo K13 5G' ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ. ಹೀಗಾಗಿ ಕಂಪನಿಯು ತನ್ನ ರಿಲೀಸ್ ಡೇಟ್ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಫೋನ್ ಏಪ್ರಿಲ್ 21ರಂದು ಬಿಡುಗಡೆಯಾಗಲಿದೆ. ಇದರ ಪ್ರಮುಖ ವೈಶಿಷ್ಟ್ಯಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟಿಸಲಾಗಿದೆ. ಇದರರ್ಥ ಫೋನ್ ಬಿಡುಗಡೆಯ ನಂತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತದೆ.
ಇದು ಸ್ಪ್ಲಾಶ್ ಟಚ್ ಜೊತೆಗೆ ಫ್ಲಾಟ್ 120Hz AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ತೋರುತ್ತದೆ. ಹ್ಯಾಂಡ್‌ಸೆಟ್ ಫಾಸ್ಟ್ ಚಾರ್ಜಿಂಗ್ ಮತ್ತು ಹೊಸ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನೊಂದಿಗೆ ದೈತ್ಯಾಕಾರದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಒಪ್ಪೊ ಹೇಳುತ್ತದೆ. ಇದು 50MP ಮೇನ್ ರಿಯರ್ ಶೂಟರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಈ ಸಾಧನವು ಇಮೇಜಿಂಗ್ ಮತ್ತು ದೈನಂದಿನ ಕಾರ್ಯಗಳಿಗಾಗಿ AI ವೈಶಿಷ್ಟ್ಯಗಳೊಂದಿಗೆ ಬರಬಹುದು.
ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟವಾದ ಲೈವ್ ಮೈಕ್ರೋಸೈಟ್ ಪ್ರಕಾರ 'Oppo K13 5G' ಫೋನ್‌ನ ಪ್ರಮುಖ ವೈಶಿಷ್ಟ್ಯಗಳು:
ಡಿಸ್‌ಪ್ಲೇ: ಈ ಫೋನ್ 6.6-ಇಂಚಿನ (2400 x 1080 ಪಿಕ್ಸೆಲ್‌ಗಳು) ರೆಸಲ್ಯೂಶನ್ ಫ್ಲಾಟ್ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1200 ನಿಟ್ಸ್ ಪೀಕ್ ಬ್ರೈಟ್‌ನೆಸ್, ಬ್ಲೂ-ಲೈಟ್ ಐ ಪ್ರೊಟೆಕ್ಷನ್ ಮತ್ತು ಸ್ಪ್ಲಾಶ್ ಟಚ್ ಅನ್ನು ಒಳಗೊಂಡಿದೆ.
ಪ್ರೊಸೆಸರ್: ಇದು 4nm Qualcomm Snapdragon 6 Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 7.9 ಲಕ್ಷಕ್ಕೂ ಹೆಚ್ಚು AnTuTu ಸ್ಕೋರ್ ಅನ್ನು ಸಾಧಿಸಿದೆ. ಈ ಚಿಪ್‌ಸೆಟ್ 8GB RAM ಮತ್ತು 256GB ಸ್ಟೋರೇಜ್ನೊಂದಿಗೆ ಬರುತ್ತದೆ.
ಕ್ಯಾಮೆರಾ ಸೆಟಪ್: ಈ ಹ್ಯಾಂಡ್‌ಸೆಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು AI ರಿಫ್ಲೆಕ್ಷನ್ ರಿಮೋವರ್, AI ಅನ್ಬ್ಲರ್, AI ಎರೇಸರ್ ಮತ್ತು AI ಕ್ಲಾರಿಟಿ ವರ್ಧಕಗಳಂತಹ AI ಇಮೇಜಿಂಗ್ ವೈಶಿಷ್ಟ್ಯಗಳೊಂದಿಗೆ 50MP ಪ್ರೈಮೆರಿ ರಿಯರ್ ಕ್ಯಾಮೆರಾವನ್ನು ಹೊಂದಿದೆ.
ಆಪರೇಟಿಂಗ್ ಸಿಸ್ಟಮ್: ಇದು Android 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರೊಟೆಕ್ಷನ್: ಈ ಫೋನ್ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP65 ರೇಟಿಂಗ್ ಅನ್ನು ಹೊಂದಿದೆ. ಇದು 208 ಗ್ರಾಂ ತೂಕ ಮತ್ತು 8.45 ಮಿಮೀ ದಪ್ಪವಾಗಿದೆ.
ಕಲರ್ ಆಪ್ಶನ್: ಈ 'Oppo K13 5G' ಐಸಿ ಪರ್ಪುಲ್ ಮತ್ತು ಪ್ರಿಜಂ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಬ್ಯಾಟರಿ: ಈ ಫೋನ್ 80W SUPERVOCC ಚಾರ್ಜಿಂಗ್ ಬೆಂಬಲದೊಂದಿಗೆ 7000mAh ಗ್ರ್ಯಾಫೈಟ್ ಬ್ಯಾಟರಿಯನ್ನು ಹೊಂದಿದೆ. ಮೈಕ್ರೋಸೈಟ್ ಪ್ರಕಾರ, ಈ ಬ್ಯಾಟರಿಯು 5 ವರ್ಷಗಳ ಬಾಳಿಕೆ ಹೊಂದಿದೆ. ಇದರ ಜೊತೆಗೆ ಈ ಫೋನ್ 5700mm ಸ್ಕ್ವೇರ್ ಅಲ್ಟ್ರಾ-ಲಾರ್ಜ್ ಎನ್ಹಾನ್ಸ್ಡ್ ವೇಪರ್ ಕೂಲಿಂಗ್ ಚೇಂಬರ್ ಮತ್ತು ಉತ್ತಮ ಕೂಲಿಂಗ್‌ಗಾಗಿ 6000mm ಸ್ಕ್ವೇರ್ ಗ್ರ್ಯಾಫೈಟ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಸಾಧನವು ದೈನಂದಿನ ಕಾರ್ಯಗಳನ್ನು ಹೆಚ್ಚಿಸಲು AI ಸಮ್ಮರಿ, ಸ್ಕ್ರೀನ್ ಟ್ರಾನ್ಸ್ಲೇಟರ್ ಮತ್ತು AI ರೈಟರ್‌ನಂತಹ AI ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಓದಿ: ಅಮೆರಿಕ ಸುಂಕ ಎಫೆಕ್ಟಿನಿಂದ ಚೀನಾಗೆ ಪೆಟ್ಟು! ಭಾರತದಿಂದ ರಫ್ತು ಆದವು 600 ಟನ್ ಐಫೋನು!!