Delhi Government New Rule: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರ ತನ್ನ ಇತ್ತೀಚಿನ ಮಹತ್ವದ ನಿರ್ಧಾರಗಳಿಂದ ಸುದ್ದಿಯಲ್ಲಿದೆ. ಪ್ರಸ್ತುತ ವಾಯು ಮಾಲಿನ್ಯದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹೊರಟಿದೆ. ನಗರದ ಬಂಕ್‌ಗಳಲ್ಲಿ ವಾಹನಗಳನ್ನು ಪರಿಶೀಲಿಸಿದ ನಂತರವೇ ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ನೀಡಲಾಗುತ್ತದೆ.
ಯಾವ ವಾಹನಗಳಿಗೆ ಇಂಧನ ಸಿಗಲ್ಲ?: ಹೊಸ ನಿಯಮದ ಪ್ರಕಾರ, ಬಂಕ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯಾಮೆರಾಗಳನ್ನು ಬಳಸಿಕೊಂಡು ವಾಹನಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಎಷ್ಟು ಸಮಯದ ಹಿಂದೆ ವಾಹನವನ್ನು ತಯಾರಿಸಲಾಗಿದೆ ಎಂಬುದನ್ನು ಕ್ಯಾಮೆರಾಗಳು ಬಹಿರಂಗಪಡಿಸುತ್ತದೆ. ವಾಹನಗಳು ಓಡಲು ಕಾಲಮಿತಿ ಇದೆ. ಹಳೆಯ ವಾಹನಗಳು ಪರಿಸರಕ್ಕೆ ಹಾನಿಕಾರಕ. ಆದ್ದರಿಂದ ಸರ್ಕಾರ ಆ ವಾಹನಗಳನ್ನು ನಿಷೇಧಿಸಲು ನಿರ್ಧರಿಸಿದೆ.
ಹೊಸ ನಿಯಮದ ಪ್ರಕಾರ, ಬಂಕ್‌ಗಳಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ ಇಂಧನ ತುಂಬುವಂತಿಲ್ಲ. ಏಕೆಂದರೆ, ಈ ವಾಹನಗಳ ಉಪಯುಕ್ತ ಸಂಚಾರದ ಅವಧಿ ಕೊನೆಗೊಂಡಿರುತ್ತದೆ. ಅಷ್ಟೇ ಅಲ್ಲ, ವಾಹನಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ.
ಈ ಹೊಸ ನಿಯಮ ಜಾರಿ ಯಾವಾಗ?: ದೆಹಲಿ ಸರ್ಕಾರ ಏಪ್ರಿಲ್ 1ರಿಂದ ಈ ನಿಯಮವನ್ನು ಜಾರಿಗೆ ತರಲು ಯೋಜಿಸಿತ್ತು. ಆದರೆ ಇದಕ್ಕೆ ಅಗತ್ಯವಿರುವ ಮೂಲಸೌಕರ್ಯ ಮತ್ತು ತಂತ್ರಜ್ಞಾನವನ್ನು ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹೊಸ ನಿಯಮವನ್ನು ದೆಹಲಿಯಲ್ಲಿ ಏಪ್ರಿಲ್ 2025ರ ಅಂತ್ಯದ ವೇಳೆಗೆ ಜಾರಿಗೆ ತರಬಹುದು. ದೆಹಲಿಯ 372 ಪೆಟ್ರೋಲ್ ಬಂಕ್‌ಗಳು ಮತ್ತು 105 ಸಿಎನ್‌ಜಿ ರೀಫಿಲ್ಲಿಂಗ್ ಸೆಂಟರ್ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಿಎಂ ರೇಖಾ ಗುಪ್ತಾರ ಮುಂದಿನ ನಡೆಯೇನು?: ಸರ್ಕಾರ 477 ಫ್ಯೂಯಲ್ ಫಿಲ್ಲಿಂಗ್ ಸೆಂಟರ್ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದೆ ಮತ್ತು ಇನ್ನೂ 23 ಕೇಂದ್ರಗಳಲ್ಲಿ ಮಾತ್ರ ಕ್ಯಾಮೆರಾಗಳನ್ನು ಅಳವಡಿಸಬೇಕಾಗಿದೆ ಎಂದು ಹೇಳಲಾಗಿದೆ. 10ರಿಂದ 15 ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಇಡೀ ಪ್ರಕ್ರಿಯೆಯನ್ನು ಸಿಎಂ ರೇಖಾ ಗುಪ್ತಾ ಮತ್ತು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಸ್ಟನ್ನಿಂಗ್ ಲುಕ್ನಲ್ಲಿ ಟಾಟಾ ಕರ್ವ್ ‘ಬ್ಲ್ಯಾಕ್ ಬ್ಯೂಟಿ’: ಇದರ ಬೆಲೆ ಎಷ್ಟು ಗೊತ್ತಾ?