Ola Electric: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಓಲಾ ಎಲೆಕ್ಟ್ರಿಕ್ ಈಗ ಮತ್ತೆ ಸುದ್ದಿಯಲ್ಲಿದೆ. ತನ್ನ ಸ್ಪೋರ್ಟಿ ಇ-ಬೈಕ್ ರೋಡ್‌ಸ್ಟರ್ ಎಕ್ಸ್ ಅನ್ನು ಮಾರುಕಟ್ಟೆಗೆ ಕೈಗೆಟುಕುವ ದರದಲ್ಲಿ ಪರಿಚಯಿಸಿದೆ. ಈ ಬಗ್ಗೆ ವಿವರ ಇಲ್ಲಿದೆ.
ಭಾರತದ ಸ್ಕೂಟರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದರೂ ಬೈಕ್ ವಿಭಾಗದಲ್ಲೂ ತನ್ನ ಪರಾಕ್ರಮ ಪ್ರದರ್ಶಿಸಲು ಓಲಾ ಕೆಲವು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ರೋಡ್‌ಸ್ಟರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿತು. ಸ್ಪೋರ್ಟಿ ಲುಕ್‌ನಿಂದ ಗ್ರಾಹಕರನ್ನು ಆಕರ್ಷಿಸುವ ಈ ಮಾದರಿಯು ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಇದು ರೋಡ್‌ಸ್ಟರ್, ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ಪ್ರೊ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ತಮ್ಮ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಬಹುದು. ಮೂರು ಮಾದರಿಗಳಲ್ಲಿ ರೋಡ್‌ಸ್ಟರ್ ಎಕ್ಸ್ ಶ್ರೇಣಿಯು ಅತ್ಯಂತ ಕಡಿಮೆ ಬೆಲೆಯದ್ದಾಗಿದೆ. ಇತ್ತೀಚಿನ ಮಾಹಿತಿಯೆಂದರೆ ಓಲಾ ಎಲೆಕ್ಟ್ರಿಕ್ ಈಗಾಗಲೇ ಈ ಬೈಕ್‌ನ ಉತ್ಪಾದನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
उठो, जागो और तब तक नहीं रुको जब तक लक्ष्य ना प्राप्त हो जाये
— Bhavish Aggarwal (@bhash) April 11, 2025
- Swami Vivekananda 🙏🏼 pic.twitter.com/mUdN6HYSvF
ಇದಕ್ಕೆ ಪುಷ್ಟಿ ನೀಡುವಂತೆ ಓಲಾ ಉತ್ಪಾದನಾ ಘಟಕದಿಂದ ಹೊರಬರುತ್ತಿರುವ ರೋಡ್‌ಸ್ಟರ್ ಬೈಕ್‌ಗಳ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದು ಬೈಕ್ ಶೀಘ್ರದಲ್ಲೇ ವಿತರಣೆಯಾಗಲಿದೆ ಎಂಬುದರ ಸೂಚನೆ ಎಂದು ನಂಬಲಾಗಿದೆ. ಈ ಹೊಸ ಇ-ಬೈಕ್‌ನೊಂದಿಗೆ ಮಾರುಕಟ್ಟೆಯ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಓಲಾ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿದೆ. ಕಂಪನಿಯು ತನ್ನ ಸ್ಪೋರ್ಟಿ ಲುಕ್, ಕಡಿಮೆ ಬೆಲೆ ಮತ್ತು ಅಡ್ವಾನ್ಸ್ಡ್ ಫೀಚರ್ಸ್ನಿಂದ ಯಶಸ್ವಿಯಾಗುತ್ತದೆ ಎಂಬ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.
ಪರೀಕ್ಷಾರ್ಥ ಚಾಲನೆ ಮಾಡಿದ ಸಿಇಒ: ಓಲಾ ಎಲೆಕ್ಟ್ರಿಕ್‌ನ ರೋಡ್‌ಸ್ಟರ್ ಎಕ್ಸ್ ಬೈಕ್ ಈಗ ಸಾಕಷ್ಟು ಹೈಪ್ ಸೃಷ್ಟಿಸುತ್ತಿದೆ. ಕಂಪನಿಯ ಸಿಇಒ ಭವಿಷ್ ಅಗರ್ವಾಲ್ ಅವರು ಈ ಬೈಕ್ ಅನ್ನು ರಸ್ತೆಯಲ್ಲಿ ಪರೀಕ್ಷಾರ್ಥ ಚಾಲನೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಓಲಾ ಬಿಡುಗಡೆ ಮಾಡುವ ಪ್ರತಿಯೊಂದು ಹೊಸ ವಾಹನವನ್ನು ಫಸ್ಟ್ ಟ್ರಯಲ್ ಮಾಡುವ ಅಭ್ಯಾಸ ಭವಿಷ್‌ಗೆ ಇದೆ. ಈ ಬಾರಿಯೂ ಅದೇ ಸಂಪ್ರದಾಯವನ್ನು ಮುಂದುವರೆಸುತ್ತಾ, ಅವರು ರೋಡ್‌ಸ್ಟರ್ ಎಕ್ಸ್ ಬೈಕ್ ಸವಾರಿ ಮಾಡಿದರು.
ಪ್ರಸ್ತುತ ಓಲಾ ರೋಡ್‌ಸ್ಟರ್ ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ರೋಡ್‌ಸ್ಟರ್ ಎಕ್ಸ್ ಬೆಲೆ ರೂ. 74,999, ರೋಡ್‌ಸ್ಟರ್ ಎಕ್ಸ್ ಪ್ಲಸ್ ಬೆಲೆ ರೂ. 1.04 ಲಕ್ಷ. ಇವೆಲ್ಲವೂ ಎಕ್ಸ್ ಶೋ ರೂಂ ಬೆಲೆಗಳು. ಈ ಎರಡೂ ರೂಪಾಂತರಗಳು ಶೈಲಿ, ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯದ ವಿಷಯದಲ್ಲಿ ಸಣ್ಣ ವ್ಯತ್ಯಾಸಗಳನ್ನು ಹೊಂದಿವೆ. ಆದರೆ ಎರಡೂ ತಮ್ಮ ಪ್ರೀಮಿಯಂ ಸ್ಪೋರ್ಟಿ ಲುಕ್‌ನಿಂದ ಗ್ರಾಹಕರ ಗಮನ ಸೆಳೆಯುವುದಕ್ಕೆ ಹೆಸರುವಾಸಿಯಾಗಿವೆ.
ಈ ಬೈಕ್‌ನ ಫೋಟೋಗಳು ಮತ್ತು ಪರೀಕ್ಷಾರ್ಥ ಸವಾರಿಯ ವಿಡಿಯೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೇಜ್ ಸೃಷ್ಟಿಸಿವೆ. ಓಲಾ ಎಲೆಕ್ಟ್ರಿಕ್ ರೋಡ್‌ಸ್ಟರ್ ಎಕ್ಸ್ ಬೈಕ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಉತ್ಪಾದನೆಯ ಪ್ರಾರಂಭದೊಂದಿಗೆ ಈ ಮಾದರಿಯ ಡೆಲಿವರಿಗಳು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಗ್ರಾಹಕರು ಕಾತರದಿಂದ ಕಾಯುತ್ತಿದ್ದ ಈ ಬೈಕ್ ಶೀಘ್ರದಲ್ಲೇ ಅವರ ಕೈ ಸೇರಲಿದೆ.
Taking the EV revolution to the next level with the roll-out of our first Roadster X today!🏍️
— Bhavish Aggarwal (@bhash) April 11, 2025
Super proud of the entire team @OlaElectric who worked relentlessly to build the future of motorcycling in India, and taking us closer to #EndICEAge 🙌⚡ pic.twitter.com/lJI0qaNyLf
ಓಲಾ ಈ ಬೈಕ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ ಮಿಡ್-ಡ್ರೈವ್ ಮೋಟಾರ್‌ನೊಂದಿಗೆ ವಿನ್ಯಾಸಗೊಳಿಸಿದೆ. ಇದು ತುಂಬಾ ಶಕ್ತಿಶಾಲಿ ಮಾದರಿ. ಇದು MCU ಏಕೀಕರಣದಂತಹ ಆಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಬೈಕ್ IP67 ಪ್ರಮಾಣೀಕೃತ ಬ್ಯಾಟರಿಗಳನ್ನು ಹೊಂದಿದೆ. ಇದರರ್ಥ ಧೂಳು ಬಿದ್ದರೂ ಮತ್ತು ಮಳೆ ಬಂದರೂ ಈ ಬ್ಯಾಟರಿಗಳ ಕಾರ್ಯಕ್ಷಮತೆಯ ಮೇಲೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಹವಾಮಾನ ಬದಲಾವಣೆಗಳನ್ನು ತಡೆದುಕೊಳ್ಳುವಂತೆ ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಈ ಬೈಕ್ ಗಂಟೆಗೆ 118 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರಲ್ಲಿ 7 ಕಿಲೋವ್ಯಾಟ್ ಮೋಟಾರ್ ಅನ್ನು ಅಳವಡಿಸಲಾಗಿದೆ. ರೋಡ್‌ಸ್ಟರ್ ಎಕ್ಸ್ ಪ್ಲಸ್ ರೂಪಾಂತರವು 11 ಕಿಲೋವ್ಯಾಟ್ ಮೋಟಾರ್‌ನೊಂದಿಗೆ ಗಂಟೆಗೆ 125 ಕಿ.ಮೀ. ಗರಿಷ್ಠ ವೇಗವನ್ನು ಹೊಂದಿದೆ. ರೋಡ್‌ಸ್ಟರ್ ಎಕ್ಸ್ ರೂಪಾಂತರವು 2.5 kWh, 3.5 kWh, ಮತ್ತು 4.5 kWh ಬ್ಯಾಟರಿ ಪ್ಯಾಕ್‌ಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಸಂದರ್ಭದಲ್ಲಿ ಹೊಸ ಮಾದರಿಗಳಿಗೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿ ಆಶಿಸುತ್ತದೆ.
ಓದಿ: 70 ಕಿ.ಮೀ. ಮೈಲೇಜ್, OBD-2B ಅಪ್ಡೇಟ್; ತುಟ್ಟಿ ಆಯ್ತು ಹೀರೋ ಪ್ಯಾಶನ್ ಪ್ಲಸ್ ಬೈಕ್!