ETV Bharat / technology

Jio ಗ್ರಾಹಕರಿಗೆ ಸೂಪರ್​ ಅಪ್‌ಡೇಟ್: ಮನೆಯಲ್ಲೇ ಕುಳಿತು SIM ಆ್ಯಕ್ಟಿವೇಟ್ ಮಾಡಿ! - JIO iActivate Service

JIO iActivate Service: ಜಿಯೋ ಗ್ರಾಹಕರಿಗೊಂದು ಅಪ್‌ಡೇಟ್. ರಿಲಯನ್ಸ್ ಜಿಯೋ ಸಿಮ್ ಆ್ಯಕ್ಟಿವೇಷನ್​ಗಾಗಿ ಹೊಸ ರೀತಿಯ ಸೇವೆಯನ್ನು ತಂದಿದೆ. ಇದರೊಂದಿಗೆ, ನೀವು ಮನೆಯಲ್ಲೇ ಕುಳಿತು ಸಿಮ್ ಆ್ಯಕ್ಟಿವೇಟ್​ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತೇ?

author img

By ETV Bharat Tech Team

Published : Sep 9, 2024, 11:07 AM IST

JIO IACTIVATE SERVICE  ACTIVATE YOUR JIO SIM  HOW TO ACTIVATE JIO SIM
ಜಿಯೋ ಗ್ರಾಹಕರಿಗೆ ಸೂಪರ್​ ಅಪ್‌ಡೇಟ್ (Jio)

JIO iActivate Service: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಶ್ರೇಣಿಯ ಸೇವೆಗಳನ್ನು ಪ್ರಾರಂಭಿಸಿದೆ. ನೀವು SIM ಆ್ಯಕ್ಟಿವೇಷನ್​ಗಾಗಿ Jio ಕಾರ್ಯನಿರ್ವಾಹಕರ ಬಳಿಗೆ ಹೋಗುವ ಅಗತ್ಯವಿಲ್ಲ. ಇದಕ್ಕಾಗಿ Jio iActivate ಸೇವೆ ಪ್ರಾರಂಭಿಸಿದೆ. ಇದರೊಂದಿಗೆ, ಜಿಯೋ ಸಿಮ್ ಕಾರ್ಡ್ ಅನ್ನು ಎಲ್ಲಿಯೇ ಆದರೂ, ಯಾವುದೇ ಸಮಯದಲ್ಲೂ ಆ್ಯಕ್ಟಿವೇಟ್​ ಮಾಡಿಕೊಳ್ಳಬಹುದು. iActivate ಸೇವೆಗಳೊಂದಿಗೆ ಸಿಮ್ ಸಕ್ರಿಯಗೊಳಿಸುವ ಪ್ರಕ್ರಿಯೆ ಹೀಗಿದೆ.

iActivate ಸೇವೆಗಳನ್ನು ಹೀಗೆ ಬಳಸಿ:

  • ರಿಲಯನ್ಸ್ ಜಿಯೋ ಈಗಾಗಲೇ ಸಿಮ್ ಕಾರ್ಡ್‌ಗಳ ಉಚಿತ ಹೋಮ್ ಡೆಲಿವರಿ ಪ್ರಾರಂಭಿಸಿದೆ.
  • ಹೊಸದಾಗಿ ಪರಿಚಯಿಸಲಾದ iActivateನೊಂದಿಗೆ, ನಿಮ್ಮ ಸಿಮ್ ಅನ್ನು ನೀವು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಸಕ್ರಿಯಗೊಳಿಸಬಹುದು.
  • ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಹಾಯದಿಂದ ಸಿಮ್ ಕಾರ್ಡ್ ಸಕ್ರಿಯಗೊಳಿಸಬಹುದು.
  • ಇದಕ್ಕಾಗಿ ಮೊದಲು ನೀವು My Jio Application ಇನ್​ಸ್ಟಾಲ್​ ಮಾಡಿಕೊಳ್ಳಬೇಕು.
  • ಅಪ್ಲಿಕೇಶನ್ ತೆರೆದ ಬಳಿಕ iActivate ಬ್ಯಾನರ್ ಕಾಣಿಸಿಕೊಳ್ಳುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, ಫೋನ್ ಸಂಖ್ಯೆ, ಪಿನ್ ಕೋಡ್ ನಮೂದಿಸಿ OTP ಜನರೇಟ್​​ ಮಾಡಬೇಕು.
  • OTP ನಮೂದಿಸಿದ ನಂತರ eSIM ಮತ್ತು Physical SIM ಎಂಬೆರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
  • ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿ ಮತ್ತು ಗೋ ಫಾರ್ ಜಿಯೋ ಐಆಕ್ಟಿವೇಟ್ ಮೇಲೆ ಕ್ಲಿಕ್ ಮಾಡಿ.
  • KYC ಅನ್ನು ಆಧಾರ್ OTP ಅಥವಾ ಡಿಜಿಲಾಕರ್ ಸಹಾಯದಿಂದ ಪೂರ್ಣಗೊಳಿಸಬೇಕು. ಹೀಗೆ ಮನೆಗೆ ಬಂದ ಸಿಮ್ ಮೊಬೈಲ್ ಸಹಾಯದಿಂದ ಲೈವ್ ಫೋಟೋ/ವಿಡಿಯೋ ತೆಗೆದು ದಾಖಲೆಗಳನ್ನು ಲೈವ್ ಅಪ್ ಲೋಡ್ ಮಾಡಬೇಕು.
  • ಈ ರೀತಿಯಾಗಿ ನೀವು ಈ iActivate ಸೇವೆಗಳನ್ನು ಬಳಸಿಕೊಂಡು SIM ಕಾರ್ಡ್ ಅನ್ನು ಮನೆಯಲ್ಲೇ ಕುಳಿತು ಸಕ್ರಿಯಗೊಳಿಸಬಹುದು ಅಥವಾ ವಿತರಣಾ ಏಜೆಂಟ್‌ಗಳ ಸಹಾಯದಿಂದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

JIO ವಾರ್ಷಿಕೋತ್ಸವದ ಕೊಡುಗೆಗಳು: ಇತ್ತೀಚೆಗೆ, ರಿಲಯನ್ಸ್ ಜಿಯೋ ತನ್ನ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಭಾರಿ ಕೊಡುಗೆಗಳನ್ನು ಘೋಷಿಸಿದೆ. ಮೂರು ರೀಚಾರ್ಜ್ ಯೋಜನೆಗಳ ಜೊತೆಗೆ, ಕೆಲವು ಇತರೆ ವಿಶೇಷ ಪ್ರಯೋಜನಗಳನ್ನು ನೀಡುತ್ತಿದೆ ಎಂದು ಘೋಷಿಸಿದೆ. ಸೆಪ್ಟೆಂಬರ್ 10ರ ಮೊದಲು ರೀಚಾರ್ಜ್ ಮಾಡುವ ಗ್ರಾಹಕರು ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು ಎಂದು ಜಿಯೋ ಹೇಳಿದೆ. ಈ ಕೊಡುಗೆಗಳು ಈಗಾಗಲೇ ಲಭ್ಯ.

ಇದನ್ನೂ ಓದಿ: ಜಿಯೋ 8ನೇ ವಾರ್ಷಿಕೋತ್ಸವ: 10 OTT ಪ್ಲಾಟ್‌ಫಾರ್ಮ್‌, Zomato ಸದಸ್ಯತ್ವ ಸೇರಿದಂತೆ ಗ್ರಾಹಕರಿಗೆ ಭರ್ಜರಿ ಉಡುಗೊರೆ! - Special Plans for JIO Users

ETV Bharat Logo

Copyright © 2024 Ushodaya Enterprises Pvt. Ltd., All Rights Reserved.