Axiom 4 mission postponed: ತಾಂತ್ರೀಕ ದೋಷದಿಂದಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ತಂಡದ ತೆರಳಬೇಕಿದ್ದ ಆಕ್ಸಿಯಮ್ ಮಿಷನ್ 4 ಬಾಹ್ಯಾಕಾಶ ಯಾನವನ್ನು ನಾಸಾ ಮತ್ತೊಮ್ಮೆ ಮುಂದೂಡಿದೆ. ಉಡಾವಣೆಗೂ ಮೊದಲು ನಡೆಸಿದ ಬೂಸ್ಟರ್ ತಪಾಸಣೆಯ ವೇಳೆ ದ್ರವ ಆಮ್ಲಜನಕ ಸೋರಿಕೆ ಕಾಣಿಸಿಕೊಂಡ ಪರಿಣಾಮ ಉಡಾವಣೆಯನ್ನು ಮುಂದೂಡಲಾಗಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಸ್ಪೇಸ್‌ಎಕ್ಸ್ ತಿಳಿಸಿದೆ. ಅದನ್ನು ಸರಿಪಡಿಸಲು ಕೆಲ ಸಮಯ ಬೇಕಾಗಿದ್ದು ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದೆ. ಈ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
SpaceX tweets, " standing down from tomorrow’s falcon 9 launch of ax-4 to the space station to allow additional time for spacex teams to repair the lox leak identified during post static fire booster inspections. once complete – and pending range availability – we will share a new… pic.twitter.com/EwRn9IM0ar
— ANI (@ANI) June 11, 2025
ಶುಕ್ಲಾ ಅವರ ತಂಡವು ಬುಧವಾರ ಸಂಜೆ 5.30ಕ್ಕೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ಯಾನಕ್ಕೆ ತೆರಳಬೇಕಿತ್ತು. ಆದರೆ ಅದನ್ನು ಮತ್ತೊಮ್ಮೆ ಮುಂದೂಡಲಾಗಿದೆ.